ನಿಸ್ಸಾನ್ ಅಗ್ಗದ ಸಣ್ಣಕಾರಿಗೆ ಎಷ್ಟು ದಿನ ಕಾಯಬೇಕು?
ನಿಸ್ಸಾನ್ ಮತ್ತು ಅಶೋಕ್ ಲೇಲ್ಯಾಂಡ್ ಜಂಟಿ ಉದ್ಯಮವು ಈಗ ದೇಶದಲ್ಲಿ ಹಗುರ ವಾಣಿಜ್ಯ ವಾಹನ ಮಾರಾಟ ಮಾಡುತ್ತಿದೆ. ಕಂಪನಿಯು ಈಗಾಗಲೇ ಹಗುರ ವಾಣಿಜ್ಯ ವಾಹನ "ದೋಸ್ತ್" ಪರಿಚಯಿಸಿದೆ. ಅಶೋಕ್ ಲೇಲ್ಯಾಂಡ್ ಜೊತೆ ಕಂಪನಿಯು ಶೀಘ್ರದಲ್ಲಿ ನಿಸ್ಸಾನ್ ಇವಾಲಿಯಾ ಮಲ್ಟಿಪರ್ಪೊಸ್ ವೆಹಿಕಲ್ ಪರಿಚಯಿಸಲಿದೆ.
"ದೇಶದ ವಾಹನ ಮಾರುಕಟ್ಟೆಗೆ ಕಡಿಮೆ ದರದ ಕಾರುಗಳನ್ನು ಪರಿಚಯಿಸಲು ಯೋಜಿಸಿದ್ದೇವೆ. ಈಗಾಗಲೇ ಅಶೋಕ್ ಲೇಲ್ಯಾಂಡ್ ಜೊತೆ ಸೇರಿ ಇಂತಹ ಉತ್ಪನ್ನವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ಸಣ್ಣಕಾರು 2014ಕ್ಕೆ ರಸ್ತೆ ತಲುಪುವ ನಿರೀಕ್ಷೆಯಿದೆ" ಎಂದು ನಿಸ್ಸಾನ್ ಉಪಾಧ್ಯಕ್ಷರಾದ ಆಂಡಿ ಪಾಲ್ಮೆರ್ ಹೇಳಿದ್ದಾರೆ.
ನೂತನ ಕಾರಿನ ದರ 2-4 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ಸೂಚನೆಯನ್ನೂ ಪಾಲ್ಮೆರ್ ನೀಡಿದ್ದಾರೆ. ಆದರೆ ಅವರು ಕಾರಿನ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಕಂಪನಿಯು ಈಗ ನಿಸ್ಸಾನ್ ಮೈಕ್ರಾವೆಂಬ ಸಣ್ಣಕಾರನ್ನು ಮಾರಾಟ ಮಾಡುತ್ತಿದೆ. ಮೈಕ್ರಾ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದ್ದು, ದರ 4.14 ಲಕ್ಷ ರು.ನಿಂದ 6.26 ಲಕ್ಷ ರುಪಾಯಿವರೆಗಿದೆ.(ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









