ವಾಹನೋದ್ಯಮದ ಮೇಲೆ ಬಜೆಟ್ ಪರಿಣಾಮ: ವಿಶ್ಲೇಷಣೆ

2012-13 ಸಾಲಿನ ಕೇಂದ್ರ ಆಯವ್ಯಯ ಪಟ್ಟಿಯನ್ನು ಆರ್ಥಿಕ ಸಚಿವ ಪ್ರಣಬ್ ಮುಖರ್ಜಿ ಮಂಡಿಸಿದ್ದಾರೆ. ಈ ಬಜೆಟ್ ನೋಡಿದ ವಾಹನ ಕಂಪನಿಗಳು ನಿಟ್ಟುಸಿರುಬಿಟ್ಟಿವೆ. ಗಮನಾರ್ಹವಾಗಿ ಎಲ್ಲರ ಭೀತಿಗೆ ಕಾರಣವಾಗಿದ್ದ, ಡೀಸೆಲ್ ಕಾರುಗಳಿಗೆ ಹೆಚ್ಚುವರಿ ತೆರಿಗೆ ಪ್ರಸ್ತಾಪ ಮಾಡಲಾಗಿಲ್ಲ.

ಆದಗ್ಯೂ ಪ್ರಸಕ್ತ ಬಜೆಟ್ ವಾಹನೋದ್ಯಮದ ಮೇಲೆ ಕೆಲವು ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬೀರಲಿವೆ.

ಪ್ರಣಬ್ ಮುಖರ್ಜಿ ಮಂಡಿಸಿದ ಬಜೆಟ್ ದೊಡ್ಡ ಕಾರು ಸೆಗ್ಮೆಂಟಿಗೆ ದೊಡ್ಡ ಹೊಡೆತ ನೀಡುವ ನಿರೀಕ್ಷೆಯಿದೆ. ಯಾಕೆಂದರೆ ಸರಕಾರವು ಬೃಹತ್ ಕಾರುಗಳ ಅಬಕಾರಿ ಸುಂಕ ಹೆಚ್ಚಿಸಲಿದೆ. ಈಗ ಶೇಕಡ 22ರಷ್ಟಿರುವ ಅಬಕಾರಿ ಸುಂಕವನ್ನು ಶೇಕಡ 27ರವರೆಗೆ ಏರಿಕೆ ಮಾಡುವ ಪ್ರಸ್ತಾಪವನ್ನು ಹಣಕಾಸು ಸಚಿವರು ಮಾಡಿದ್ದಾರೆ.

ಎಂದಿನಂತೆ ಹೈಬ್ರಿಡ್ ಕಾರುಗಳಿಗೆ ಈ ವರ್ಷವೂ ಕೊಂಚ ಸಿಹಿ ಸುದ್ದಿಯಿದೆ. ಹೈಬ್ರಿಡ್ ಕಾರುಗಳಿಗೆ ಬಳಸುವ ಲೀಥಿಯಂ ಐಯಾನ್ ಬ್ಯಾಟರಿಗಳಿಗೆ ವಿಧಿಸುವ ಆಮದು ಸುಂಕವನ್ನು ಕಡಿಮೆ ಮಾಡಲಾಗಿದೆ. ಆದರೆ ನಿಜಾಂಶವೆಂದರೆ ದೇಶದಲ್ಲಿ ಹೆಚ್ಚು ಹೈಬ್ರಿಡ್ ವಾಹನ ತಯಾರಿಕಾ ಕಂಪನಿಗಳಿಲ್ಲ. ಮಹೀಂದ್ರ ರೇವಾ ಮಾತ್ರ ಇಲ್ಲಿ ಜನಪ್ರಿಯ.

ಆದರೆ ದೇಶದ ಬಹುಸಂಖ್ಯಾತ ಸಣ್ಣಕಾರು ಖರೀದಿದಾರರಿಗೆ ಕೊಂಚ ನಿರಾಶೆಯಾಗುವ ಸುದ್ದಿಯನ್ನು ಬಜೆಟ್ ನೀಡಿದೆ. ಸಣ್ಣಕಾರುಗಳಿಗೆ ಪ್ರಸಕ್ತ ವಿಧಿಸಿರುವ ಶೇಕಡ 10ರಷ್ಟು ಅಬಕಾರಿ ಸುಂಕವನ್ನು ಶೇಕಡ 12ಕ್ಕೆ ಏರಿಕೆ ಮಾಡುವ ಪ್ರಸ್ತಾಪ ಮಾಡಲಾಗಿದೆ. ಇದು ವಾಹನೋದ್ಯಮದ ಮೇಲೆ ಭಾರಿ ಪರಿಣಾಮ ಬೀರುವ ನಿರೀಕ್ಷೆಯಿದೆ.

ಹೆಚ್ಚಿನ ಕಾರು ಕಂಪನಿಗಳು ಉತ್ಪಾದನೆ ವೆಚ್ಚ ಹೆಚ್ಚಳವಾದ ಕಾರಣದಿಂದ ಜನವರಿ ತಿಂಗಳಲ್ಲಿ ಕಾರು ದರಗಳನ್ನು ಹೆಚ್ಚಿಸಿದ್ದವು. ಫೆಬ್ರವರಿ ತಿಂಗಳಲ್ಲಿ ಗ್ರಾಹಕರು ಬಜೆಟ್ ಭಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರು ಖರೀದಿಗೆ ತೊಡಗಿದ್ದರು. ಆದರೆ ಪ್ರಸಕ್ತ ಸುಂಕ ಹೆಚ್ಚಳ ಪ್ರಸ್ತಾಪದಿಂದ ಸಣ್ಣಕಾರುಗಳು ಮತ್ತಷ್ಟು ದುಬಾರಿಯಾಗಲಿವೆ.

ಆದರೆ ಸಂತೋಷದ ಸಂಗತಿಯೆಂದರೆ ಪ್ರಸಕ್ತ ಬಜೆಟಿನಲ್ಲಿ ಡೀಸೆಲ್ ಕಾರುಗಳಿಗೆ ಯಾವುದೇ ಹೆಚ್ಚುವರಿ ಸುಂಕ ವಿಧಿಸಲಾಗಿಲ್ಲ. ಡೀಸೆಲ್ ಕಾರುಗಳಿಗೆ 80 ಸಾವಿರ ರು.ನಷ್ಟು ಹೆಚ್ಚುವರಿ ತೆರಿಗೆ ವಿಧಿಸುವ ವದಂತಿಗಳು ಜೋರಾಗಿದ್ದವು. ಕೆಲವೊಮ್ಮೆ ವದಂತಿಗಳು ಸುಳ್ಳಾಗುತ್ತವೆ.

ವಿದೇಶಗಳಿಂದ ಕಾರು ಆಮದು ಮಾಡಿಕೊಳ್ಳುವರಿಗೆ ಬೇಸರದ ಸಂಗತಿಯೊಂದನ್ನು ಬಜೆಟ್ ನಲ್ಲಿ ತಿಳಿಸಲಾಗಿದೆ. ಆಮದು ಮಾಡಿಕೊಳ್ಳುವ ಕಾರುಗಳಿಗೆ ಅಬಕಾರಿ ಸುಂಕ ಶೇಕಡ 60 ಇದ್ದದ್ದು ಶೇಕಡ 75ಕ್ಕೆ ಏರಿಕೆ ಕಂಡಿದೆ. ಬೈಸಿಕಲ್ ಅಬಕಾರಿ ಸುಂಕ ಶೇಕಡ 30ರವರೆಗೆ ಏರಿಕೆ ಕಂಡಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Friday, March 16, 2012, 13:47 [IST]
English summary
The budget for the financial year 2012-13 has been presented by the finance minister Pranab Mukherjee. The minister touched upon several points that will either have a direct or indirect impact on the auto industry. Drivespark presents to you some of the notable aspects of the union budget of 2012-13.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+