ಸಣ್ಣಗಾದ ಎತ್ತರದ ಹುಡುಗ: ಹೊಸ ವ್ಯಾಗನಾರ್
ಈ ಕಾರು ಲೀಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಹಾಗಂತ ಇದು ಎಲೆಕ್ಟ್ರಿಕ್ ಕಾರಲ್ಲ. ಕಾರಿನೊಳಗಿರುವ ಏರ್ ಕಂಡಿಷನ್ ಇತ್ಯಾದಿಗಳಿಗೆ ಲೀಥಿಯಂ ಬ್ಯಾಟರಿ ಮೂಲಕ ವಿದ್ಯುತ್ ಒದಗಿಸಲಾಗುತ್ತದೆ.
ಹಳೆಯ ವ್ಯಾಗನಾರ್ ಕಾರಿಗಿಂತ ನೂತನ ವ್ಯಾಗನಾರ್ ತೂಕ ಕಡಿಮೆಯಾಗಿದೆ. ಈ ಕಾರನ್ನು ಹಗುರ ಮತ್ತು ಸದೃಢ ಸ್ಟೀಲ್ ಮೂಲಕ ನಿರ್ಮಿಸಲಾಗಿದೆ. ವ್ಯಾಗನಾರ್ ಕಾರಿನ ಇಂಧನ ದಕ್ಷತೆ ಹೆಚ್ಚಿಸಲು ತೂಕ ಕಡಿಮೆಯಾಗಿರುವುದು ನೆರವಾಗಿದೆ.
ಹೊಸ ವ್ಯಾಗನಾರ್ ಕಾರು ದೇಶದ ರಸ್ತೆಗೆ ಆಗಮಿಸುವ ಕುರಿತು ಮಾರುತಿ ಸುಜುಕಿ ಯಾವುದೇ ಸೂಚನೆ ನೀಡಿಲ್ಲ. ಆದರೆ ಮುಂದಿನ ವರ್ಷ ಹೊಸ ವ್ಯಾಗನಾರ್ ಆವೃತ್ತಿಯಾಗಿ ಇದೇ ಮಾಡೆಲ್ ಆಗಮಿಸಿದರೂ ಅಚ್ಚರಿಯಿಲ್ಲ.
ಮಾರುತಿ ಸುಜುಕಿ ಕಂಪನಿಯು ಇತ್ತೀಚೆಗೆ ದೇಶದ ರಸ್ತೆಗೆ ವ್ಯಾಗನಾರ್ ಪ್ರೊ ಎಂಬ ಸ್ಪೆಷಲ್ ಅಡಿಷನ್ ಕಾರನ್ನು ಪರಿಚಯಿಸಿತ್ತು. ಇದರ ದರ ಹಳೆಯ ವ್ಯಾಗನಾರ್ ಕಾರಿಗಿಂತ 20 ಸಾವಿರ ರು. ಹೆಚ್ಚಿದೆ.
ವ್ಯಾಗನಾರ್ ಕಾರು ಸಿಟಿ ರಸ್ತೆಯಲ್ಲಿ 16.1 ಕಿ.ಮೀ. ಮತ್ತು ಹೆದ್ದಾರಿಯಲ್ಲಿ ಸುಮಾರು 20.8 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 998ಸಿಸಿಯ ಮೂರು ಸಿಲಿಂಡರಿನ 1.0ಲೀಟರ್ ಐ3 ಪೆಟ್ರೋಲ್ ಕೆ10 ಬಿ ಎಂಜಿನ್ ಹೊಂದಿದೆ. ಇದರ ಆರಂಭಿಕ ದರ: 3.47 ಲಕ್ಷ ರು. ಇದೆ.


Click it and Unblock the Notifications









