ಬೆಳಕಿನ ಹಬ್ಬ ದೀಪಾವಳಿಗೆ ಮಾರುತಿ ವ್ಯಾಗನಾರ್ ಎಎಂಟಿ ಕೊಡುಗೆ
ಬೆಳಕಿನ ಹಬ್ಬ ದೀಪಾವಳಿ ಹಬ್ಬ ಆಗಮನವಾಗುತ್ತಿರುವಂತೆಯೇ ವಾಹನ ಪ್ರೇಮಿಗಳಿಗೆ ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿ, ವ್ಯಾಗನಾರ್ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಕಾರನ್ನು ಕೊಡುಗೆಯಾಗಿ ನೀಡಿದೆ. ಇದು ವ್ಯಾಗನಾರ್ ಹಾಗೂ ಸ್ಟ್ರೀಂಗ್ರೇ ಆವೃತ್ತಿಗಳಲ್ಲಿ ಲಭ್ಯವಾಗಲಿದೆ.
Also Read: ದೀಪಾವಳಿ ಧಮಾಕಾ; ಸ್ಪೆಷಲ್ ಎಡಿಷನ್ ಬಿಡುಗಡೆಯ ಸುರಿಮಳೆ
ಈ ಮೊದಲು ಸೆಲೆರಿಯೊ, ಆಲ್ಟೊ ಕೆ10 ಮಾದರಿಗಳಲ್ಲಿ ಪರಿಚಯಿಸಲಾಗಿರುವ ಅದೇ ಸೆಮಿ ಆಟೋಮ್ಯಾಟಿಕ್ ತಂತ್ರಜ್ಞಾನವೇ ವ್ಯಾಗನಾರ್ ಕಾರಿನಲ್ಲಿ ಬಳಕೆಯಾಗಲಿದೆ. ಇದಲ್ಲದೆ ಹೆಚ್ಚುವರಿ ವೈಶಿಷ್ಟ್ಯಗಳು ಈ ಹಬ್ಬದ ಆವೃತ್ತಿಯ ವೇಳೆಯಲ್ಲಿ ಗರಿಷ್ಠ ಮಾರಾಟ ಪಡೆಯುವಲ್ಲಿ ಮಾರುತಿಗೆ ನೆರವಾಗಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
- ವ್ಯಾನನಾರ್ ವಿಎಕ್ಸ್‌ಐ ಎಎಂಟಿ: 4.77 ಲಕ್ಷ ರು.
- ವ್ಯಾಗನಾರ್ ವಿಎಕ್ಸ್‌ಐ ಎಎಂಟಿ (ಐಚ್ಛಿಕ): 5.10 ಲಕ್ಷ ರು.
- ವ್ಯಾಗನಾರ್ ಸ್ಟ್ರೀಂಗ್ರೇ ವಿಎಕ್ಸ್‌ಐ ಎಎಂಟಿ: 4.98 ಲಕ್ಷ ರು.
- ವ್ಯಾಗನಾರ್ ಸ್ಟ್ರೀಂಗ್ರೇ ವಿಎಕ್ಸ್‌ಐ ಎಎಂಟಿ (ಐಚ್ಛಿಕ): 5.31 ಲಕ್ಷ ರು.

ಹೊಸ ವ್ಯಾಗನಾರ್ ಕಾರಿನಲ್ಲಿ ಎಎಂಟಿ ಹೊರತಾಗಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಜೊತೆಗೆ ಡ್ಯುಯಲ್ ಏರ್ ಬ್ಯಾಗ್ ಸೌಲಭ್ಯಗಳು ದೊರೆಯಲಿದೆ.

ಇಂಧನ ಕ್ಷಮತೆಯಲ್ಲಿ ಯಾವುದೇ ಕೊರತೆಯುಂಟಾಗದಂತೆ ಆಟೋ ಗೇರ್ ಶಿಫ್ಟ್ (AGS) ಮುಖಾಂತರ ಗ್ರಾಹಕರಿಗೆ ಅನುಕೂಲಕರವಾದ ಚಾಲನಾ ಅನುಭವ ನೀಡುವುದು ಸಂಸ್ಥೆಯ ಗುರಿಯಾಗಿದೆ. ಅಲ್ಲದೆ ಸಂಸ್ಥೆಯ ಪ್ರಕಾರ ವ್ಯಾಗನಾರ್ ಎಎಂಟಿ ಪ್ರತಿ ಲೀಟರ್ ಗೆ 20.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಮಾರುತಿ ವ್ಯಾಗನಾರ್ ಎಎಂಟಿ ಮಾದರಿಯು 1.0 ಲೀಟರ್ ಕೆ ಸಿರೀಸ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 90 ಎನ್‌ಎಂ ತಿರುಗುಬಲದಲ್ಲಿ 69 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಮಾರುತಿ ಸಂಸ್ಥೆಗೆ ಇಟಲಿಯ ಐಕಾನಿಕ್ ಮ್ಯಾಗ್ನೆಟ್ಟಿ ಮೆರೆಲ್ಲಿ ಸಂಸ್ಥೆಯು ಎಎಂಟಿ ಗೇರ್ ಬಾಕ್ಸ್ ಒದಗಿಸಲಿದೆ. ಹಾಗಿದ್ದರೂ ಕಾರಿನೊಳಗೆ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ.

ಇಲ್ಲಿ ಮಾರುತಿ ಸ್ಟ್ರೀಂಗ್ರೇ ಮಾದರಿಯಲ್ಲೂ ಇದಕ್ಕೆ ಸಮಾನವಾದ ಆಯ್ಕೆಯನ್ನು ಕೊಡಲಾಗಿದೆ. ಅಂದರೆ ಮಾರುತಿ ಸ್ಟ್ರೀಂಗ್ರೇ ಸಹ ಎಎಂಟಿ ಮಾದರಿಯಲ್ಲಿ ಲಭ್ಯವಾಗಲಿದೆ. ಬೆಲೆ ಮಾಹಿತಿಯನ್ನು ಮುಂದಿನ ಪುಟದಲ್ಲಿ ಕೊಡಲಾಗಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ದೀಪಾವಳಿ ಆಫರ್; ಯಾವ ಯಾವ ಕಾರುಗಳಿಗೆ ಎಷ್ಟೆಷ್ಟು ಡಿಸ್ಕೌಂಟ್? ಸಮಗ್ರ ಮಾಹಿತಿ ಪಡೆಯಿರಿ


Click it and Unblock the Notifications








