7 ಸೀಟುಗಳ ವ್ಯಾಗನಾರ್ 2016 ಆಟೋ ಎಕ್ಸ್ ಪೋದಲ್ಲಿ ಬರುತ್ತಾ ?

Written By:

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಅತಿ ನೂತನ ಏಳು ಸೀಟುಗಳ ವ್ಯಾಗನಾರ್ ಆವೃತ್ತಿಯನ್ನು ಮುಂಬರುವ 2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸುವ ಸಾಧ್ಯತೆಯಿದೆ.

2016 ಆಟೋ ಎಕ್ಸ್ ಪೋ ರಾಷ್ಟ್ರ ರಾಜಧಾನಿ ನವದಹೆಲಿಯಲ್ಲಿ ಫೆಬ್ರವರಿ ತಿಂಗಳಲ್ಲಿ ನೆರವೇರಲಿದೆ. ಇದರಂತೆ ಹೊಸ ವ್ಯಾಗನಾರ್ ಆವೃತ್ತಿಯ ಆಗಮನಕ್ಕಾಗಿ ವಾಹನ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.

7 ಸೀಟುಗಳ ವ್ಯಾಗನಾರ್ 2016 ಆಟೋ ಎಕ್ಸ್ ಪೋದಲ್ಲಿ ಬರುತ್ತಾ ?

ಈ ಮೊದಲು 2013 ಇಂಡೋನೇಷ್ಯಾ ಮೋಟಾರು ಶೋದಲ್ಲಿ ವ್ಯಾಗನಾರ್ ಸೆವೆನ್ ಸೀಟರ್ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಇದು ಹ್ಯಾಚ್ ಬ್ಯಾಕ್ ಮಾದರಿಯ ವರ್ಧಿತ ರೂಪವಾಗಿದೆ.

7 ಸೀಟುಗಳ ವ್ಯಾಗನಾರ್ 2016 ಆಟೋ ಎಕ್ಸ್ ಪೋದಲ್ಲಿ ಬರುತ್ತಾ ?

ಪೆಟ್ರೋಲ್ ಜೊತೆಗೆ ಡೀಸೆಲ್ ವೆರಿಯಂಟ್ ಗಳಲ್ಲಿ ವ್ಯಾಗನಾರ್ ಸೆವೆನ್ ಸೀಟರ್ ಕಾರು ಮಾರುಕಟ್ಟೆ ಪ್ರವೇಶವಾಗಲಿದೆ. ಇದರಲ್ಲಿ ಸೆಲೆರಿಯೊದಲ್ಲಿರುವುದಕ್ಕೆ ಸಮಾನವಾದ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ.

7 ಸೀಟುಗಳ ವ್ಯಾಗನಾರ್ 2016 ಆಟೋ ಎಕ್ಸ್ ಪೋದಲ್ಲಿ ಬರುತ್ತಾ ?

ಇದಲ್ಲದೆ 5 ಸ್ಪೀಡ್ ಮ್ಯಾನುವಲ್ ಜೊತೆಗೆ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ ಆಳವಡಿಸುವ ಸಾಧ್ಯತೆಯೂ ಇದೆ.

7 ಸೀಟುಗಳ ವ್ಯಾಗನಾರ್ 2016 ಆಟೋ ಎಕ್ಸ್ ಪೋದಲ್ಲಿ ಬರುತ್ತಾ ?

ಹಾಗಿದ್ದರೂ ಬಿಡುಗಡೆ ಸಂಬಂಧಪಟ್ಟಂದೆ ಯಾವುದೇ ಮಾಹಿತಿಗಳು ಇದುವರೆಗೆ ಲಭ್ಯವಾಗಲಿಲ್ಲ. ಅಂದರೆ ವ್ಯಾಗನಾರ್ ಬಹು ಬಳಕೆಯ ವಾಹನು ಇಕೊ ಹಾಗೂ ಎರ್ಟಿಗಾ ಕಾರುಗಳ ನಡುವೆ ಗುರುತಿಸಿಕೊಳ್ಳಳಿದೆ.

7 ಸೀಟುಗಳ ವ್ಯಾಗನಾರ್ 2016 ಆಟೋ ಎಕ್ಸ್ ಪೋದಲ್ಲಿ ಬರುತ್ತಾ ?

ಪ್ರಮುಖವಾಗಿಯೂ ದಟ್ಸನ್ ಗೊ ಪ್ಲಸ್ ಇತ್ಯಾದಿ ಮಾದರಿಗಳ ಜೊತೆಗೆ ವ್ಯಾಗನಾರ್ ಪೈಪೋಟಿ ನಡೆಸಲಿದೆ. ಇದು ಸಾಮಾನ್ಯ ವ್ಯಾಗನಾರ್ ಆವೃತ್ತಿಗಿಂತಲೂ 50ರಿಂದ 70,000 ರು.ಗಳಷ್ಟು ದುಬಾರಿಯೆನಿಸಲಿದೆ.

7 ಸೀಟುಗಳ ವ್ಯಾಗನಾರ್ 2016 ಆಟೋ ಎಕ್ಸ್ ಪೋದಲ್ಲಿ ಬರುತ್ತಾ ?

ಅಂದ ಹಾಗೆ 2016 ಮಧ್ಯಂತರ ಅವಧಿಯ ವೇಳೆಯಷ್ಟೇ ಏಳು ಸೀಟುಗಳ ಮಾರುತಿ ಸುಜುಕಿ ವ್ಯಾಗನಾರ್ ಮಾರುಕಟ್ಟೆ ಪ್ರೇವಶಿಸುವ ಸಾಧ್ಯತೆಯಿದೆ. ಈ ಎಲ್ಲದರ ಮುಖಾಂತರ ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ಮಗದೊಂದು ಆಕರ್ಷಕ ಕಾರು ಸಿದ್ಧವಾಗಲಿದೆ.

English summary
Maruti WagonR 7-Seater Could Be Revealed At 2016 Auto Expo
Please Wait while comments are loading...

Latest Photos