ಕ್ಯಾಬ್ ಮಾಲೀಕರಿಗೆ ಬಜೆಟಿನಲ್ಲಿ ಕೊಲವರಿ ತೆರಿಗೆ
2012-13ನೇ ಸಾಲಿನ ರಾಜ್ಯ ಮುಂಗಡಪತ್ರವನ್ನು ಮುಖ್ಯಮಂತ್ರಿ ಸದಾನಂದ ಗೌಡ ಮಂಡಿಸಿದ್ದಾರೆ. ತನ್ನ ಚೊಚ್ಚಲ ಬಜೆಟಿನಲ್ಲಿ ಕ್ಯಾಬ್ ವಾಹನಗಳ ಮೇಲಿನ ತೆರಿಗೆಯನ್ನು ಗಮನಾರ್ಹವಾಗಿ ಏರಿಕೆ ಮಾಡುವ ಪ್ರಸ್ತಾಪ ಮಾಡಿದ್ದಾರೆ.
ಚಾಲಕ ಸೇರಿದಂತೆ ಆರು ಸೀಟಿರುವ ಕ್ಯಾಬ್ ವಾಹನಗಳಿಗೆ ಪ್ರತಿ ತ್ರೈಮಾಸಿಕಕ್ಕೆ ಪ್ರತಿ ಸೀಟಿಗೆ 100 ರುಪಾಯಿಯಂತೆ ತೆರಿಗೆ ವಿಧಿಸಲಾಗಿದೆ. ಅಂದರೆ ಈ ಕ್ಯಾಬ್ ಮಾಲೀಕ ಪ್ರತಿವರ್ಷ 2 ಸಾವಿರ ರು. ತೆರಿಗೆ ಪಾವತಿಸಬೇಕಿದೆ.
ಡ್ರೈವರ್ ಸೇರಿದಂತೆ ಏಳು ಸೀಟಿನ ಕ್ಯಾಬ್ ವಾಹನಗಳಿಗೆ ಇಲ್ಲಿವರೆಗೆ ಪ್ರತಿ ಚದರ ಮೀಟರ್ ನೆಲ ವಿಸ್ತೀರ್ಣಕ್ಕೆ 750 ರುಪಾಯಿ ತೆರಿಗೆ ವಿಧಿಸಲಾಗಿತ್ತು. ಇನ್ನು ಮುಂದೆ ಹತ್ತು ಲಕ್ಷ ರು.ಗಿಂತ ದುಬಾರಿ ಮೌಲ್ಯದ ಕ್ಯಾಬ್ ಗಳು ಅವುಗಳ ಮೌಲ್ಯದ ಶೇಕಡ 15ರಷ್ಟು ಅಜೀವ ತೆರಿಗೆ ವಿಧಿಸುವ ಪ್ರಸ್ತಾಪವನ್ನು ಬಜೆಟಿನಲ್ಲಿ ಮಾಡಲಾಗಿದೆ.
ಪ್ರಸಕ್ತ ವರ್ಷ ಮೋಟರ್ ವಾಹನ ಸಂಬಂಧಿತವಾಗಿ 3,350 ಕೋಟಿ ರು. ತೆರಿಗೆ ಸಂಗ್ರಹಿಸುವ ಗುರಿಯನ್ನು ಸರಕಾರ ಹೊಂದಿದೆ. 2011-12ನೇ ವರ್ಷದಲ್ಲಿ ಮೋಟರ್ ವಾಹನಗಳ ಮಾರಾಟ ಗಣನೀಯವಾಗಿ ಏರಿಕೆ ಕಂಡಿದೆ. ಇದರಿಂದ ತೆರಿಗೆ ಸಂಗ್ರಹವೂ ಹೆಚ್ಚಾಗಿದೆ.(ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









