ವಿಮಾನ ನಿರ್ಮಿಸಿ ಸಾಧನೆ ಮೆರೆದ ರೈತ

By Nagaraja

ಸತತ ಪ್ರಯತ್ನವೇ ಸಾಧನೆಯ ರಹಸ್ಯ ಎಂಬುದಕ್ಕೆ ಇದೊಂದು ನಿದರ್ಶನ ಮಾತ್ರ. ಮಾನವನಿಗೆ ಎಷ್ಟೇ ಕಷ್ಟಗಳಿದ್ದರೂ ಸಾಧನೆ ಮಾಡಬೇಕೆಂಬ ಛಲವಿದ್ದಲ್ಲಿ ಅದನ್ನು ಸಾಧಿಸಿಯೇ ತೀರುತ್ತಾನೆ. ನಾವೀಗ ಅಂತಹದೊಂದು ಸಾಧನೆ ಮಾಡಿರುವ ರೈತನ ಬಗ್ಗೆ ಹೇಳಲಿದ್ದೇವೆ.

ಅವರೀಗ ಮಾಮೂಲಿ ಕೃಷಿಕನಲ್ಲ. ವಿಶ್ವದೆಲ್ಲೆಡೆ ಸುದ್ದಿಗೆ ಗ್ರಾಸವಾಗಿರುವ ಸಾಹಸಿ ರೈತ. ಚೀನಾದ ಗ್ರಾಮವೊಂದರ ನಿವಾಸಿ ಟಿಯಾನ್ ಶಾವೊಕಿಯಾನ್ (Tian Shaoqiang) ವಿಮಾನ ತಯಾರಿಸುವ ಮೂಲಕ ಸಾಧನೆ ಮೆರೆದಿದ್ದಾರೆ.

ಚೀನಾದ ಹೆನೂನು ಪ್ರಾಂತ್ಯದ ಲಿಂಡಾವೂ ಗ್ರಾಮದಲ್ಲಿ ವಾಸಿಸುತ್ತಿರುವ ಟಿಯಾನ್ ತಮ್ಮ ಸಂಬಂಧಿಕರು ಹಾಗೂ ನೆರೆಮನೆಯವರ ಸಹಾಯದಿಂದ ವಿಮಾನ ನಿರ್ಮಿಸಿದ್ದಾರೆ. ಅಲ್ಲದೆ ತಮ್ಮದೇ ಗ್ರಾಮದಲ್ಲಿ ಇದರ ಯಶಸ್ವಿ ಪರೀಕ್ಷೆ ಕೂಡಾ ನಡೆಸಿದ್ದಾರೆ.

ಚಿಕ್ಕವನಾಗಿದ್ದಲೇ ವಿಮಾನವೊಂದು ಖರೀದಿಸುವುದು ಟಿಯಾನ್ ಕನಸಾಗಿತ್ತು. ಇದೀಗ ಸ್ವಂತವಾಗಿ ವಿಮಾನದೊಂದು ನಿರ್ಮಿಸುವ ಮೂಲಕ ಶ್ಲಾಘನೆಗೆ ಪಾತ್ರವಾಗಿದ್ದಾರೆ. 39ರ ಹರೆಯದ ಟಿಯಾನ್ ವಿಮಾನದ ಕನಸು ಹೊಸ ಆಯಾಮಕ್ಕೆ ರೂಪುರೇಶೆ ನೀಡುವಂತಾಗಿತ್ತು.

ತಮ್ಮ ಗ್ರಾಮದ ರಸ್ತೆಯಿಂದಲೇ ಟಿಯಾನ್ ವಿಮಾನದ ಯಶಸ್ವಿ ಪರೀಕ್ಷೆ ನಡೆಸಿದ್ದಾರೆ. ಅಲ್ಲದೆ ಸುಮಾರು 20 ನಿಮಿಷಗಳ ವರೆಗೆ ಗಾಳಿಯಲ್ಲಿ ಹಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಟಿಯಾನ್ ಸಾಧನೆಗೆ ಗ್ರಾಮವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಯಾನ್‌ವಾಸ್ ರೆಕ್ಕೆ ಮೂಲಕ ತಯಾರಿಸಿದ ವಿಮಾನಕ್ಕೆ ಅಲ್ಯೂಮಿನಿಯಂ ಬಾಡಿ ಟಚ್ ನೀಡಲಾಗಿದೆ. ಲೇಟ್ ವೇಟ್ ಆಗಿದ್ದರಿದರಿಂದ ವಿಮಾನ ಸುಲಭವಾಗಿ ಹಾರಾಡಲು ಸಾಧ್ಯವಾಗಿದೆ.

ಒಬ್ಬನಿಗೆ ಕುಳಿತುಕೊಳ್ಳುವ ವ್ಯವಸ್ಥೆಯಿರುವ ವಿಮಾನವು ಪ್ರತಿ ಗಂಟೆಗೆ 100 ಕಿಲೋಮೀಟರ್ ಚಲಿಸುವ ಸಾಮರ್ಥ್ಯ ಹೊಂದಿದೆ. ಟಿಯಾನ್ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೂ ತಮ್ಮದೇ ಆದ ಕನಸುಗಳಿರುತ್ತವೆ. ಹಾಗೆಯೇ ವಿಮಾನ ತಯಾರಿಸುವುದು ನನ್ನ ಕನಸಾಗಿತ್ತು. ಇದು ಅಪಾಯಕಾರಿ ಎಂಬುದು ಗೊತ್ತಿದ್ದರೂ ಸವಾಲು ಸ್ವೀಕರಿಸಲು ಸನ್ನದ್ಧನಾಗಿದ್ದೆ ಎಂದಿದ್ದಾರೆ.

ಅಂದ ಹಾಗೆ ಟಿಯಾನ್ ಬಯಕೆ ಏನೆಂದರೆ ತಮ್ಮ ಕುಟುಂಬ ಹಾಗೂ ಮಿತ್ರರನ್ನು ಒಂದು ಸಲ ಇದರಲ್ಲಿ ಕೂರಿಸಿಕೊಂಡು ಜಾಲಿ ರೈಡ್ ಹೊಡೆಯುವುದು.

More from DriveSpark

Article Published On: Tuesday, December 4, 2012, 14:40 [IST]
English summary
A farmer (Tian Shaoqiang) from China has made a an aircraft. Tian Shaoqiang made his own dynamic delta-wing aircraft at home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+