ಕೆಎಸ್ಆರ್‌ಟಿಸಿ ಬಸ್ ಮಹಾತ್ಮೆ: ಓದಲು ಮರೆಯದಿರಿ

By Super

ಬಸ್ ಸ್ಟೈಕಿನಿಂದ ಬೇಸೆತ್ತು, ಆಟೋಗಳಿಗೆ ದುಪ್ಪಟ್ಟು ದುಡ್ಡು ಕೊಟ್ಟು ಕೆಲವರು ಕೆಎಸ್ಆರ್‌ಟಿಸಿಗೆ ಹಿಡಿಶಾಪ ಹಾಕುತ್ತಿರಬಹುದು. ನಾವು ಈ ಸಮಯದಲ್ಲಿ ಕೂಲಾಗಿ ಕೆಎಸ್ಆರ್‌ಟಿಸಿ ಮಹಾತ್ಮೆ ಓದೋಣ. ಹಳೆಯ ಮತ್ತು ಹೊಸ ಕೆಎಸ್ಆರ್ ಟಿಸಿ ಬಸ್ಸುಗಳನ್ನು ನೋಡುತ್ತ ಈ ಕೆಳಗಿನ ಚಿತ್ರಗಳನ್ನು ಕಣ್ತುಂಬಿಸಿಕೊಳ್ಳಬಹುದು. ಚಿತ್ರದ ಕೆಳಗಿರುವ ಸ್ಟೋರಿ ಓದಲು ಮರೆಯದಿರಿ.

ಈಗ ಕೆಎಸ್ಆರ್ ಟಿಸಿ ರಾಜ್ಯದಲ್ಲಿ 72 ಡಿಪೊ, 15 ವಿಭಾಗ, 128 ಬಸ್ ಸ್ಟೇಷನ್ ಹೊಂದಿದೆ. ಪ್ರತಿದಿನ ಕಡಿಮೆಯೆಂದ್ರೂ 24.91 ಲಕ್ಷ ಕಿ.ಮೀ. ಸಂಚರಿಸುತ್ತದೆ. ದಿನಕ್ಕೆ ಸರಾಸರಿ 23.60 ಲಕ್ಷ ಜನರು ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಕರ್ನಾಟಕದ ಮೊದಲ ಬಸ್ ಕಂಪನಿ ಯಾವುದು ಗೊತ್ತ? ಸಿಪಿಸಿ ಲಾಜಿಸ್ಟಿಕ್.

ಹತ್ತೊಂಬತ್ತನೆಯ ಶತಮಾನದಲ್ಲಿ ಪ್ರಯಾಣಕ್ಕೆ ಸೈಕಲ್ ರಿಕ್ಷಗಳನ್ನು ಬಳಸಲಾಗುತ್ತಿತ್ತು. ನಂತರ ಜಟಕಾ ಬಂಡಿಗಳು ಬಂದವು. ರಾಜ್ ಕುಮಾರ್ ಹಾಡು ನೆನಪಿಸಿಕೊಳ್ಳಬಹುದು. ಬೆಂಗಳೂರಿಗೆ ಮೊದಲ ಖಾಸಗಿ ಬಸ್ 1903ರಲ್ಲಿ ಆಗಮಿಸಿತ್ತು.

1914ನೇ ಇಸವಿಯಲ್ಲಿ ಕರ್ನಾಟಕದ ಮೊದಲ ಬಸ್ ಸಂಸ್ಥೆ ಆರಂಭವಾಯಿತು. ಆರಂಭದಲ್ಲಿ ಅದು ಮಂಗಳೂರು- ಬಂಟ್ವಾಳಕ್ಕೆ ಸೀಮಿತವಾಗಿತ್ತು. ಸಿಪಿಸಿ ಲಾಜಿಸ್ಟಿಕ್ ಅಂತ ಅದು ಆಮೇಲೆ ಜನಪ್ರಿಯವಾಯಿತು. ನಂತರ ಅದರ ಸವಾರಿ ಉತ್ತರ ಕರ್ನಾಟಕ, ಮಡಿಕೇರಿ, ಕೇರಳಕ್ಕೂ ವಿಸ್ತರಿಸಿತು.

ಬೆಂಗಳೂರು ಟ್ರಾನ್ಸ್ ಪೋರ್ಟ್ ಕಂಪನಿ 1951ರಲ್ಲಿ ಆರಂಭವಾಯಿತು. ಆಮೇಲೆ ಅದು ಬಿಎಂಟಿಸಿ ಆಯ್ತು. 1947ರಲ್ಲಿ ಶ್ರೀ ಬನಶಂಕರಿ ಬಸ್ ಸೇವೆಯಿತ್ತು. ನಂತರ ಇದನ್ನು ಮೈಸೂರು ಸಾರಿಗೆ ಇಲಾಖೆ ಖರೀದಿಸಿತು.

ಸಿಪಿಸಿ ಲಾಜಿಸ್ಟಿಕ್ ಬೆಂಗ್ಳೂರಿಗೆ ಬಂದದ್ದು 1960ರಲ್ಲಿ. ಕೆಂಪೆಗೌಡ್ ಬಸ್ ನಿಲ್ದಾಣ ಅಥವಾ ಮೆಜೆಸ್ಟಿಕ್ ಬಸ್ ನಿಲ್ದಾಣ 1960ರಲ್ಲಿ ನಿರ್ಮಾಣವಾಯಿತು. ಇದು ರಾಜ್ಯದ ಮೊದಲ ದೊಡ್ಡ ಬಸ್ ನಿಲ್ದಾಣ.

1948ನೇ ಇಸವಿಯಲ್ಲಿ ಮೈಸೂರು ಸರಕಾರ ರಸ್ತೆ ಸಾರಿಗೆ ಆರಂಭವಾಯಿತು. ಅದನ್ನು ಎಂಜಿಆರ್ಟಿಡಿ ಎಂದು ಸಂಕ್ಷಿಪ್ತವಾಗಿ ಹೇಳುತ್ತಾರೆ. ಅದಕ್ಕೂ ಮುನ್ನ ಖಾಸಗಿ ಬಸ್ಸುಗಳ ಪ್ರಾಬಲ್ಯ ಹೆಚ್ಚಿತ್ತು. ಮೈಸೂರು ಸಾರಿಗೆಯಲ್ಲಿ ಆರಂಭದಲ್ಲಿ ನೂರು ಬಸ್ಸುಗಳಿದ್ದವು.

ಕೆಎಸ್ಆರ್ ಟಿಸಿ ಎಂಬ ಹೆಸರು ಸಿಕ್ಕಿದ್ದು 1973ರಲ್ಲಿ. ಮೈಸೂರು ಸಾರಿಗೆಯು ಸಾರಿಗೆ ಇಲಾಖೆ ಕಾಯಿದೆಯಡಿ ಬಂದದ್ದು 1961ರಲ್ಲಿ. 1997ರಲ್ಲಿ ಬಿಎಂಟಿಸಿ ಅಂದ್ರೆ ಬೆಂಗಳೂರು ಮೆಟ್ರೊಪಾಲಿಟನ್ ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್ ಆರಂಭವಾಯಿತು.

ಓದುಗರೇ, ಕರ್ನಾಟಕದ ಬಸ್ಸುಗಳ ಇತಿಹಾಸದ ಕುರಿತು ನಿಮ್ಮಲ್ಲಿ ಆಸಕ್ತಿದಾಯಕ ವಿಷಯಗಳಿರಬಹುದು. ಅದನ್ನು ನಮ್ಮೊಂದಿಗೆ ಕೆಳಗಿನ ಕಾಮೆಂಟ್ ಬಾಕ್ಸಿನಲ್ಲಿ ಹಂಚಿಕೊಳ್ಳಿ.

ಹಳೆ ಬಸ್ಸುಗಳ ನೆನಪು

ಹಳೆ ಬಸ್ಸುಗಳ ನೆನಪು

ಬೆಂಗಳೂರಿಗೆ ಮೊದಲ ಖಾಸಗಿ ಬಸ್ 1903ರಲ್ಲಿ ಆಗಮಿಸಿತ್ತು. 1914ನೇ ಇಸವಿಯಲ್ಲಿ ಕರ್ನಾಟಕದ ಮೊದಲ ಬಸ್ ಸಂಸ್ಥೆ ಆರಂಭವಾಯಿತು. ಆರಂಭದಲ್ಲಿ ಅದು ಮಂಗಳೂರು- ಬಂಟ್ವಾಳಕ್ಕೆ ಸೀಮಿತವಾಗಿತ್ತು. ಸಿಪಿಸಿ ಲಾಜಿಸ್ಟಿಕ್ ಅಂತ ಅದು ಆಮೇಲೆ ಜನಪ್ರಿಯವಾಯಿತು. ನಂತರ ಅದರ ಸವಾರಿ ಉತ್ತರ ಕರ್ನಾಟಕ, ಮಡಿಕೇರಿ, ಕೇರಳಕ್ಕೂ ವಿಸ್ತರಿಸಿತು.

ಡಬಲ್ ಡೆಕ್ಕರ್ ಬಸ್ ಮೋಡಿ

ಡಬಲ್ ಡೆಕ್ಕರ್ ಬಸ್ ಮೋಡಿ

ಬೆಂಗಳೂರು ಟ್ರಾನ್ಸ್ ಪೋರ್ಟ್ ಕಂಪನಿ 1951ರಲ್ಲಿ ಆರಂಭವಾಯಿತು. ಆಮೇಲೆ ಅದು ಬಿಎಂಟಿಸಿ ಆಯ್ತು. 1947ರಲ್ಲಿ ಶ್ರೀ ಬನಶಂಕರಿ ಬಸ್ ಸೇವೆಯಿತ್ತು. ನಂತರ ಇದನ್ನು ಮೈಸೂರು ಸಾರಿಗೆ ಇಲಾಖೆ ಖರೀದಿಸಿತು.

(ಚಿತ್ರದಲ್ಲಿ ಬಳಸಿರುವುದು ಬೆಂಗಳೂರು ಡಬಲ್ ಡೆಕ್ಕರ್ ಬಸ್ಸ್ ಅಲ್ಲ)

ರಾಜ್ಯ ಬಸ್ ಇತಿಹಾಸದ ಪುಟಗಳು

ರಾಜ್ಯ ಬಸ್ ಇತಿಹಾಸದ ಪುಟಗಳು

1948ನೇ ಇಸವಿಯಲ್ಲಿ ಮೈಸೂರು ಸರಕಾರ ರಸ್ತೆ ಸಾರಿಗೆ ಆರಂಭವಾಯಿತು. ಅದನ್ನು ಎಂಜಿಆರ್ಟಿಡಿ ಎಂದು ಸಂಕ್ಷಿಪ್ತವಾಗಿ ಹೇಳುತ್ತಾರೆ. ಅದಕ್ಕೂ ಮುನ್ನ ಖಾಸಗಿ ಬಸ್ಸುಗಳ ಪ್ರಾಬಲ್ಯ ಹೆಚ್ಚಿತ್ತು. ಮೈಸೂರು ಸಾರಿಗೆಯಲ್ಲಿ ಆರಂಭದಲ್ಲಿ ನೂರು ಬಸ್ಸುಗಳಿದ್ದವು.

ಕೆಎಸ್ ಆರ್ಟಿಸಿ ಹೆಸ್ರು ಸಿಕ್ಕಿದ್ದು ಯಾವಾಗ?

ಕೆಎಸ್ ಆರ್ಟಿಸಿ ಹೆಸ್ರು ಸಿಕ್ಕಿದ್ದು ಯಾವಾಗ?

ಕೆಎಸ್ಆರ್ ಟಿಸಿ ಎಂಬ ಹೆಸರು ಸಿಕ್ಕಿದ್ದು 1973ರಲ್ಲಿ. ಮೈಸೂರು ಸಾರಿಗೆಯು ಸಾರಿಗೆ ಇಲಾಖೆ ಕಾಯಿದೆಯಡಿ ಬಂದದ್ದು 1961ರಲ್ಲಿ.

ಹಲವು ಪ್ರಥಮಗಳ ಸರದಾರ

ಹಲವು ಪ್ರಥಮಗಳ ಸರದಾರ

ಈಗ ಕೆಎಸ್ಆರ್ ಟಿಸಿ ರಾಜ್ಯದಲ್ಲಿ 72 ಡಿಪೊ, 15 ವಿಭಾಗ, 128 ಬಸ್ ಸ್ಟೇಷನ್ ಹೊಂದಿದೆ.

ಅದ್ದೂರಿ ಬಸ್ಸುಗಳು

ಅದ್ದೂರಿ ಬಸ್ಸುಗಳು

ಈಗ ರಾಜ್ಯದಲ್ಲಿ ಆರ್ಡಿನರಿ ಬಸ್ಸಿನಿಂದ ಹಿಡಿದು ಅತ್ಯಾಧುನಿಕ ಬಸ್ಸುಗಳು ಸಂಚರಿಸುತ್ತಿವೆ. ಮುಂದಿನ ಪುಟ ನೋಡಿ

ಬಸ್ಸುಗಳು ಸಾರ್ ಬಸ್ಸುಗಳು

ಬಸ್ಸುಗಳು ಸಾರ್ ಬಸ್ಸುಗಳು

ಮರ್ಸಿಡಿಸ್ ಬೆಂಝ್ ಕಂಪನಿಯ ಬಸ್ಸುಗಳು ಸೇರಿದಂತೆ ರಾಜ್ಯದಲ್ಲಿ ಹಲವು ಅದ್ದೂರಿ ಬಸ್ಸುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚೆಗೆ ಉದ್ದದ ಬಸ್ ಆಗಮಿಸಿತ್ತು. ಮುಂದಿನ ಪುಟ ನೋಡಿ

ಅಂಬಾರಿ ಮೇಲೆ ಸವಾರಿ

ಅಂಬಾರಿ ಮೇಲೆ ಸವಾರಿ

ವೊಲ್ವೊ, ಅಂಬಾರಿ, ಐರಾವತ ಹೀಗೆ ರಾಜ್ಯದಲ್ಲಿ ಹಲವು ಬಸ್ಸುಗಳಿವೆ. ಮುಂದಿನ ಪುಟದಲ್ಲಿರೋದು ದೇಶದ ಪ್ರಪ್ರಥಮ ಟಾಯ್ಲೆಟ್ ಮತ್ತು ಅಡುಗೆ ಮನೆ ಇರೋ ಬಸ್

ಬಸ್ಸಿನಲ್ಲೇ ಅಡುಗೆ ಮನೆ ಮತ್ತು ಶೌಚಾಲಯ

ಬಸ್ಸಿನಲ್ಲೇ ಅಡುಗೆ ಮನೆ ಮತ್ತು ಶೌಚಾಲಯ

ಅಡುಗೆ ಮನೆ, ಪ್ರತಿ ಸೀಟಿಗೂ ಒಂದೊಂದು ಸಣ್ಣ ಟಿವಿ, ಮೊಬೈಲ್ ಚಾರ್ಜರ್ ಮತ್ತು ರಾಸಾಯನಿಕ ಶೌಚಾಲಯ ಈ ಬಸ್ಸಿನಲ್ಲಿವೆ.

ಹಲವು ಪ್ರಥಮಗಳ ಕೆಎಸ್ಆರ್‌ಟಿಸಿ

ಹಲವು ಪ್ರಥಮಗಳ ಕೆಎಸ್ಆರ್‌ಟಿಸಿ

ಕನ್ನಡ ಡ್ರೈವ್ ಸ್ಪಾರ್ಕ್ ಕಡೆಯಿಂದ ಹಲವು ಪ್ರಥಮಗಳ ಮೂಲಕ ದೇಶ ವಿದೇಶಗಳಲ್ಲಿ ಹೆಸರುಗಳಿಸಿರುವ ಕೆಎಸ್ಆರ್‌ಟಿಸಿಗೆ ಅಭಿನಂದನೆ.

More from DriveSpark

Article Published On: Friday, September 14, 2012, 11:26 [IST]
English summary
People might be angry by the was KSRTC and BMTC staff have gone on a strike and have left them without a viable transport system. Here is a look at how KSRTC and BMTC has evolved over the years through pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+