ಐರಾವತ ಬಸ್ಸಲ್ಲಿ ಅಡುಗೆ ಮನೆ ಮತ್ತು ಶೌಚಾಲಯ

ದೂರದ ಊರಿಗೆ ಬಸ್ಸಿನಲ್ಲಿ ಪ್ರಯಾಣಿಸಲು ಕೆಲವರು ಹಿಂಜರಿಯುತ್ತಾರೆ. "ಒಂದೆರಡು" ತೊಂದರೆ ಕಾಣಿಸಿಕೊಂಡರೆ ಡ್ರೈವರ್ ಎಲ್ಲಿ ಬಸ್ ನಿಲ್ಲಿಸುತ್ತಾನೋ ಎಂಧು ಅವುಡುಗಚ್ಚಿ ಕಾದು ಕುಳಿತುಕೊಳ್ಳಬೇಕು. ಇದೀಗ ಇಂತಹ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಶೌಚಾಲಯ ಮತ್ತು ಅಡುಗೆ ಮನೆ ಇತ್ಯಾದಿ ಅತ್ಯಾಧುನಿಕ ಸೌಲಭ್ಯವಿರುವ ಆರು ಐರಾವತ ಬಸ್ಸುಗಳನ್ನು ಕೆಎಸ್ಆರ್‌ಟಿಸಿ ರಾಜ್ಯಕ್ಕೆ ಪರಿಚಯಿಸಿದೆ.

ಅಡುಗೆ ಮನೆ ಮತ್ತು ಶೌಚಾಲಯ ಸೌಲಭ್ಯವಿರುವ ನೂತನ ಐರಾವತ ಬ್ಲೀಸ್ ಮತ್ತು ಸುಪೀರಿಯ ಬಸ್ಸುಗಳು ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು ತಿರುಪತಿ ರಸ್ತೆಯಲ್ಲಿ ಬುಧವಾರ ಸಂಚಾರ ಆರಂಭಿಸಿದೆ. ಬೆಂಗಳೂರು ಕೆಎಸ್ಆರ್‌ಟಿಸಿ ಪ್ರಧಾನ ಕಚೇರಿಯ ಮುಂಭಾಗದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಮತ್ತು ಉಪಮುಖ್ಯಮಂತ್ರಿ ಆರ್ ಅಶೋಕ್ ಈ ಬಸ್ಸುಗಳಿಗೆ ಚಾಲನೆ ನೀಡಿದ್ದಾರೆ.

ಈ ಐರಾವತ ಬಸ್ಸಿನಲ್ಲಿ ಪುಟ್ಟ ಅಡುಗೆ ಮನೆಯಿದೆ. ಇಲ್ಲಿ ಕಾಫಿ ಮೇಕರ್, ಫ್ರಿಝ್ ಮತ್ತು ಅವನ್ ಇವೆ. ರೆಡಿಯಾಗಿಟ್ಟಿರುವ ಅಥವಾ ಪಾರ್ಸೆಲ್ ತಂದಿರುವ ಆಹಾರಗಳನ್ನು ಇಲ್ಲಿ ಬಿಸಿಮಾಡಿಕೊಳ್ಳಬಹುದು. ಪ್ರಯಾಣಿಕರು ಹೆಚ್ಚುವರಿಯಾಗಿ 125 ರು. ಪಾವತಿಸಿದರೆ ಕಾಫಿ, ಟೀ, ಜ್ಯೂಸ್ ಮತ್ತು ತಿಂಡಿಯನ್ನು ಪ್ರಯಾಣದ ವೇಳೆಯಲ್ಲಿ ಒದಗಿಸಲಾಗುತ್ತದೆ. ಆಹಾರ ಬಿಸಿ ಮಾಡಿಕೊಳ್ಳುವುದಕ್ಕೆ ಯಾವುದೇ ದರ ವಿಧಿಸುವುದಿಲ್ಲ ಎಂದು ಕೆಎಸ್ಆರ್‌ಟಿಸಿ ಹೇಳಿದೆ.

ಈ ಐಷಾರಾಮಿ ಬಸ್ಸಿನಲ್ಲಿ ಇಂಟರ್ನೆಟ್ ಬಳಕೆಗೆ ವೈ-ಫೈ ಸೇವೆ ಇದೆ. ಟಿವಿ ಸೌಲಭ್ಯ ಕೂಡ ಲಭ್ಯವಿದ್ದು, 60ಕ್ಕೂ ಹೆಚ್ಚು ಚಾನೆಲ್ ಗಳನ್ನು ನೋಡಬಹುದಾಗಿದೆ. ಈ ಬಸ್ಸಿನ ಪ್ರತಿ ಸೀಟಿನಲ್ಲೂ ಸ್ಕೀನ್ ಇದ್ದು, ಸಂಗೀತ ಕೇಳಲು ಮತ್ತು ಚಲನಚಿತ್ರ ವೀಕ್ಷಣೆ ಮಾಡಬಹುದಾಗಿದೆ.

ಐರಾವತ ಸುಪೀರಿಯ ಬಸ್ಸಿನಲ್ಲಿ ಹೈಟಕ್ ರಾಸಾಯನಿಕ ಶೌಚಾಲಯ ಸೌಲಭ್ಯವಿದೆ. ಈ ಶೌಚಾಲಯವು ಆಟೋಮ್ಯಾಟಿಕ್ ಪ್ಲಶ್ ವ್ಯವಸ್ಥೆ ಹೊಂದಿದೆ. ಇದು ನೀರನ್ನು ಮಿತವಾಗಿ ಬಳಸುತ್ತದೆ. ಈ ಸೌಲಭ್ಯದಿಂದಾಗಿ ಬಸ್ಸಿನಲ್ಲಿ ದೂರದ ಊರಿಗೆ ನಿರಾಳವಾಗಿರಬಹುದಾಗಿದೆ.

ಐರಾವತ ಬ್ಲೀಸ್ ಬಸ್ ದರ 1.15 ಕೋಟಿ ರುಪಾಯಿ ಮತ್ತು ಐರಾವತ ಸುಪೀರಿಯ ಬಸ್ ದರ 1.2 ಕೋಟಿ ರುಪಾಯಿ ಆಗಿದೆ.

ಐರಾವತ ಬ್ಲೀಸ್: ಕೆಮಿಕಲ್ ಟಾಯ್ಲೆಟ್ ಮತ್ತು ಅಡುಗೆಮನೆಯಿದೆ. ಎಲ್ ಸಿಡಿ, ವೈ ಫೈ ಇದೆ.

ಐರಾವತ ಸುಪೀರಿಯಾ: ಅಡುಗೆ ಮನೆ ಇಲ್ಲ ಕೆಮಿಕಲ್ ಟಾಯ್ಲೆಟ್ ಇದೆ. ವೈಫೈ ಇತ್ಯಾದಿ ಮನರಂಜನೆ ಸಾಧನಗಳಿವೆ.

ಬಸ್ ಪ್ರಯಾಣ ದರ ಉಳಿದ ಐರಾವತ ಬಸ್ಸುಗಳಿಗಿಂತ 50 ರುಪಾಯಿ ಹೆಚ್ಚಿರಲಿದೆ.125 ರು ಹೆಚ್ಚುವರಿಯಾಗಿ ಪಾವತಿಸಿದರೆ ಜ್ಯೂಸ್ ಇತ್ಯಾದಿ ಆಹಾರ ಸೌಲಭ್ಯ ದೊರಕಲಿದೆ.

ಇಂತಹ ಅತ್ಯಾಧುನಿಕ ಸೌಲಭ್ಯದ ಬಸ್ಸುಗಳು ಅಂತರ್ ರಾಜ್ಯಕ್ಕೆ ಮಾತ್ರ ಸೀಮಿತವಾಗಿರುವುದು ಕನ್ನಡಿಗರಿಗೆ ಬೇಸರ ಉಂಟು ಮಾಡುವ ಸಂಗತಿ. ಬೆಂಗಳೂರು-ಮಂಗಳೂರು, ಬೆಂಗಳೂರು- ಗುಲ್ಬರ್ಗಾ, ಮೈಸೂರು ಸೇರಿದಂತೆ ಕರ್ನಾಟಕದೊಳಗೂ ಇಂತಹ ಬಸ್ಸುಗಳು ಸಂಚರಿಸುವುದು ಎಂದು?

ಕೆಎಸ್ಆರ್‌ಟಿಸಿ ವೆಬ್ ಸೈಟ್

Most Read Articles

Kannada
English summary
The Karnataka Road Transport Transport Corporation has introduced new Volvo buses that will have pantries, Wifi, live TV and toilets too. The new buses have been called Airawat Bliss and Superia will be plying to Chennai and Tirupati from Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X