ಹೊಸ ಷೆವರ್ಲೆ ಕ್ರೂಝ್ ರಸ್ತೆಗೆ, ದರ 13.85 ಲಕ್ಷ ರುಪಾಯಿ
ಜನರಲ್ ಮೋಟರ್ಸ್ ಕಂಪನಿಯ ಬಹುನಿರೀಕ್ಷಿತ ಮತ್ತು ಪರಿಷ್ಕೃತ ಷೆವರ್ಲೆ ಕ್ರೂಝ್ ಕಾರು ದೇಶಕ್ಕೆ ಆಗಮಿಸಿದೆ. ಇದು ಫೇಸ್ ಲಿಫ್ಟ್ ಮಾದರಿಯಲ್ಲವೆಂದು ಕಂಪನಿ ಸ್ಪಷ್ಟಪಡಿಸಿದ್ದು, ಇದು ಆಲ್ ನ್ಯೂ ಕ್ರೂಝ್ ಕಾರೆಂದು ಷೆವರ್ಲೆ ಬಣ್ಣಿಸಿದೆ. ಈ ಕಾರು ಸಾಕಷ್ಟು ಹೊಸ ಫೀಚರುಗಳೊಂದಿಗೆ ರಸ್ತೆಗಿಳಿದಿದೆ.
ನೂತನ ಷೆವರ್ಲೆ ಕ್ರೂಝ್ ಕಾರು 2.2 ಲೀಟರಿನ ವಿಸಿಡಿಐ ಎಂಜಿನ್ ಹೊಂದಿದೆ. ಇದು ಟರ್ಬೊ ಚಾರ್ಜರ್ ತಂತ್ರಜ್ಞಾನ ಹೊಂದಿದ್ದು, 3,800 ಆವರ್ತನಕ್ಕೆ 186.5 ಅಶ್ವಶಕ್ತಿ ಮತ್ತು 2 ಸಾವಿರ ಆವರ್ತನಕ್ಕೆ 424 ಟಾರ್ಕ್ ಪವರ್ ನೀಡುತ್ತದೆ. ಆಲ್ ನ್ಯೂ ಕ್ರೂಝ್ ಕಾರು 6 ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ. ಇದರಲ್ಲಿ ಪರಿಷ್ಕೃತ ಹೈಡ್ರಾಲಿಕ್ ಕ್ಲಚ್ ಸಿಸ್ಟಮ್ ಹೊಂದಿದೆ.
ಆರು ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಪವರ್ ಸೀಟ್, ಆ್ಯಂಟಿ ಪಿಂಚ್ ತಂತ್ರಜ್ಞಾನ ಹೊಂದಿರುವ ಪವರವ ವಿಂಡೋ ಇದೆ. ನೂತನ ಆಡಿಯೋ ಸಿಸ್ಟಮ್ ಅಳವಡಿಸಲಾಗಿದೆ. ಈ ಕಾರಿನ ದೆಹಲಿ ಎಕ್ಸ್ ಶೋರೂಂ ದರ ಮಾಹಿತಿ ಈ ಕೆಳಗಿನಂತೆ ಇದೆ.
ದರ
ಷೆವರ್ಲೆ ಕ್ರೂಝ್ ಎಲ್ ಟಿ: 13,85,495 ರುಪಾಯಿ
ಕ್ರೂಝ್ ಎಲ್ ಟಿಝಡ್: 17,77,495 ರುಪಾಯಿ
ಷೆವರ್ಲೆ ಕ್ರೂಝ್ ಎಲ್ ಟಿಝಡ್ ಆಟೋಮ್ಯಾಟಿಕ್: 15,67,495 ರುಪಾಯಿ


Click it and Unblock the Notifications









