ಡೀಸೆಲ್ ಜೊತೆ ಆಲ್ಟೊ, ಇಯಾನ್ ಮೆಗಾಫೈಟ್

ಈಗ ವಾಹನ ಮಾರುಕಟ್ಟೆಯಲ್ಲಿ ಡೀಸೆಲ್ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿದೆ. ಆದರೂ ಆಲ್ಟೊ, ನ್ಯಾನೊ ಮತ್ತು ಇಯಾನ್ ಪೆಟ್ರೋಲ್ ಕಾರುಗಳಿಗೆ ಇದರಿಂದ ಯಾವುದೇ ಹಿನ್ನಡೆಯಾಗಿಲ್ಲ. ಈ ಎಂಟ್ರಿ ಲೆವೆಲ್ ಕಾರುಗಳು ಕೂಡ ಮುಂದಿನ ದಿನಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ.

ಕಡಿಮೆ ನಿರ್ವಹಣೆ ವೆಚ್ಚ ಮತ್ತು ಅಗ್ಗದ ದರದ ಕಾರಣದಿಂದ ಹೆಚ್ಚಿನ ಜನರು ಸಣ್ಣಕಾರುಗಳನ್ನು ಖರೀದಿಸುತ್ತಿದ್ದಾರೆ. ದುಬಾರಿ ಡೀಸೆಲ್ ಕಾರುಗಳಿಗಿಂತ ಅಗ್ಗದ ಪೆಟ್ರೋಲ್ ಕಾರು ಬೆಸ್ಟ್ ಎನ್ನುವುದು ಹೆಚ್ಚಿನವರ ಅಂಬೋಣ. ಮೊದಲ ಕಾರು ಖರೀದಿದಾರರಂತೂ ಎಂಟ್ರಿ ಲೆವೆಲ್ ಕಾರು ಖರೀದಿಗೆ ಹೆಚ್ಚಿನ ಆಸಕ್ತಿ ವೆಹಿಸುತ್ತಾರೆ.

ಸಣ್ಣಕಾರು ಮಾರಾಟದಲ್ಲಿ ಆಲ್ಟೊ ಪ್ರಪ್ರಥಮ ಸ್ಥಾನ ಉಳಿಸಿಕೊಂಡಿದೆ. ಇಯಾನ್ ಮತ್ತು ನ್ಯಾನೊ ಪೈಪೋಟಿಯ ನಡುವೆಯು ಆಲ್ಟೊ ಬೆಸ್ಟ್ ಸೆಲ್ಲರ್. ಈ ಮೂರು ಕಾರುಗಳು ಕೆಲವು ತಿಂಗಳ ಹಿಂದೆ ಒಟ್ಟಾಗಿ ಒಂದು ತಿಂಗಳಲ್ಲಿ 50 ಸಾವಿರ ಯುನಿಟಿಗಿಂತ ಹೆಚ್ಚು ಮಾರಾಟವಾಗಿದ್ದವು.

ಕಳೆದ ವರ್ಷ ಹೆಚ್ಚಿನ ಕಾರುಗಳ ಮಾರಾಟ ಇಳಿಮುಖವಾಗಿದ್ದವು. ಆದರೆ ಈ ಸಣ್ಣಕಾರುಗಳ ಮಾರಾಟದಲ್ಲಿ ಗಮನಾರ್ಹ ವ್ಯತ್ಯಾಸವಾಗಿರಲಿಲ್ಲ. ಬಜೆಟ್ ಪೂರ್ವದಲ್ಲಿ ಅಂದರೆ ಈ ವರ್ಷದ ಆರಂಭದ ಎರಡು ತಿಂಗಳಲ್ಲಿ ಸಣ್ಣಕಾರು ಮಾರಾಟ ಗಮನಾರ್ಹವಾಗಿ ಏರಿಕೆ ಕಂಡಿದ್ದವು.

ದೊಡ್ಡ ಕಾರುಗಳಿಗೆ ಹೋಲಿಸಿದರೆ ಸಣ್ಣಕಾರುಗಳು ಅತ್ಯಧಿಕ ಮೈಲೇಜ್ ನೀಡುತ್ತವೆ. ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಈ ಕಾರುಗಳ ರನ್ನಿಂಗ್ ಕಾಸ್ಟ್ ಅಥವಾ ಸವಾರಿ ವೆಚ್ಚವೂ ಕಡಿಮೆ. ಬೃಹತ್ ಗಾತ್ರದ ಕಾರು ಖರೀದಿಸಲು ಯೋಜಿಸುತ್ತಿದ್ದವರೆಲ್ಲ ಇತ್ತೀಚೆಗೆ ಇಯಾನ್, ಆಲ್ಟೊ ಮುಂತಾದ ಕಾರುಗಳನ್ನು ಖರೀದಿಸುತ್ತಿದ್ದಾರೆ.

ಆಲ್ಟೊ, ಇಯಾನ್ ಎಂಟ್ರಿ ಲೆವೆಲ್ ಕಾರು ಕೂಡ ಮುಂದಿನ ದಿನಗಳಲ್ಲಿ ಡೀಸೆಲ್ ಆಯ್ಕೆಯಲ್ಲಿ ದೊರಕುವ ನಿರೀಕ್ಷೆಯಿದೆ. ಟಾಟಾ ನ್ಯಾನೊ ಡೀಸೆಲ್ ಕಾರು ಶೀಘ್ರದಲ್ಲಿ ರಸ್ತೆಗಿಳಿಯಲಿದೆ. ಅಗ್ಗದ ಸಣ್ಣಕಾರುಗಳು ಡೀಸೆಲ್ ಎಂಜಿನ್ ಅಳವಡಿಸಿಕೊಂಡು ಆಗಮಿಸುವ ದಿನಗಳು ದೂರವಿಲ್ಲವೆಂದು ವರದಿಗಳು ಹೇಳಿವೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Thursday, March 22, 2012, 9:14 [IST]
English summary
Alto, Eon & Nano Fight Past Diesel Car Mela. Increasing bank interest rates has also made people prefer the cheaper petrol cars than the more expensive diesel cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+