ಕೋಟ್ಯಾಧಿಪತಿಯಲ್ಲಿ ಟ್ರಿಕ್ಕಿ ಗಿಫ್ಟ್ ಪಡೆದ ಅಮಿತಾಬ್ ಬಚ್ಚನ್
"ಕೌನ್ ಬನೇಗಾ ಕರೋಡ್ ಪತಿ(ಕೆಬಿಸಿ)" ಟಿವಿ ಶೋ ನಡೆಸಿಕೊಡುವ ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ಗೇ ಕೆಬಿಸಿ ಸ್ಪರ್ಧಾಳುವೊಬ್ಬರು ಪ್ರೀತಿಯಿಂದ "ಟ್ರಿಕ್ಕಿ" ಎಂಬ ಮೂರು ಚಕ್ರದ ವಾಹನವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಏನಿದು ಟ್ರಿಕ್ಕಿ ಎಂದು ಪ್ರಶ್ನಿಸುವರು ಚಿತ್ರದಲ್ಲಿರುವ ಮೂರು ಚಕ್ರದ ವಾಹನವನ್ನು ನೋಡಬಹುದು. ಈಗಾಗಲೇ ತನ್ನ ಗ್ಯಾರೇಜಿನಲ್ಲಿ ಅಮಿತಾಬ್ ಬಚ್ಚನ್ ಹಲವು ಅದ್ದೂರಿ ಕಾರುಗಳನ್ನು ಹೊಂದಿದ್ದರೂ ಅಭಿಮಾನಿ ಕೊಟ್ಟ ಟ್ರಿಕ್ಕಿಗೆ ವಿಶೇಷ ವೈಯಕ್ತಿಕ ಸಾರಿಗೆ ವಾಹನವೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಇಂದು ಬೆಳಗ್ಗೆ ಟ್ರಿಕ್ಕಿ ಹೆಸರಿನ ತ್ರಿಚಕ್ರ ವಾಹನದ ಮಾಲೀಕನಾದೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದವರು ಅನಿರೀಕ್ಷಿತವಾಗಿ ನೀಡಿದ ಉಡುಗೊರೆಯಿದು. ಅವರಿಗೂ, ಈ ವಿಶೇಷ ಬಂಡಿ ಅಭಿವೃದ್ಧಿಪಡಿಸಿದ ಕಂಪನಿಗೂ ಅಭಿನಂದನೆ" ಎಂದು ಅಮಿತಾಬ್ ಹೇಳಿದ್ದಾರೆ.
ಬ್ಯಾಟರಿ ಚಾಲಿತ ಈ ತ್ರಿಚಕ್ರ ಬಂಡಿಯಲ್ಲಿ ನಡೆದಾಡುವ ಭಂಗಿಯಲ್ಲಿ ವೇಗವಾಗಿ ಸಾಗಬಹುದು. ಈಗಾಗಲೇ ಇಂತಹ ಟ್ರಿಕ್ಕಿಯಲ್ಲಿ ಪ್ರಯಾಣಿಸಿದ್ದೇನೆ. ಇದು ಪರ್ಸನಲ್ ವಾಹನವಾಗಿ ಮುಂದಿನ ದಿನಗಳಲ್ಲಿ ಜನಪ್ರಿಯವಾಗುವ ನಿರೀಕ್ಷೆಯಿದೆ. ಆದರೆ ಈ ಟ್ರಿಕ್ಕಿ ನನಗಿಂತ ನನ್ನ ಮೊಮ್ಮಗ ಆಗಸ್ತ್ಯನಿಗೆ ಸೂಕ್ತವಾಗಿದೆ" ಎಂದು ಅಮಿತಾಬ್ ಟ್ರಿಕ್ಕಿ ಪಡೆದ ಸಂದರ್ಭದಲ್ಲಿ ಹೇಳಿದ್ದಾರೆ.
Trikke Pon-e36 DX: ಅಲ್ಟ್ರಾ ಹಗುರ ಖಾಸಗಿ ಸಾರಿಗೆ ವಾಹನದಲ್ಲಿ ಪ್ರತಿಗಂಟೆಗೆ 25 ಕಿ.ಮೀ. ವೇಗದಲ್ಲಿ ಹೋಗಬಹುದಾಗಿದೆ. ಒಂದು ಫುಲ್ ಚಾರ್ಜ್ ನಲ್ಲಿ ಸುಮಾರು 45 ಕಿ.ಮೀ. ಸಾಗಬಹುದಾಗಿದೆ. ಇದರ ಮುಂಭಾಗದ ಚಕ್ರದಲ್ಲಿ ಶಕ್ತಿಶಾಲಿ ಎಲೆಕ್ಟ್ರಿಕ್ ಮೋಟರ್ ಇದೆ. ಇದರ ದರ ಸುಮಾರು 1.20 ಲಕ್ಷ ರುಪಾಯಿ.
ಟೆಕ್ ಮಾಹಿತಿ
* 36 ವೋಲ್ಟೆಜಿನ ಲೀಥಿಯಂ ಐಯಾನ್ ಪ್ಯಾನಸೋನಿಕ್ ಬ್ಯಾಟರಿ
* ಸ್ಲೈಡ್ ಇನ್-ಔಟ್ ಬ್ಯಾಟರಿ ರೇಲ್
* ಹಿಂಭಾಗದ ಚಕ್ರಕ್ಕೆ ಡ್ಯೂಯಲ್ ಡಿಸ್ಕ್ ಬ್ರೇಕ್
* ಮೋಟರ್ ಗ್ರೇಡ್ ಏರ್ ಟೈರ್
* ಪಾರ್ಕಿಂಗ್ ಬ್ರೇಕ್ಸ್
* 250 ವೋಲ್ಟೆಜಿನ ಫ್ರೀ ವೀಲ್ ಹಬ್ ಮೋಟರ್
* ಕನಿಷ್ಠ ವೇಗ: ಗಂಟೆಗೆ 18 ಕಿ.ಮೀ, ಗರಿಷ್ಠ ವೇಗ: ಗಂಟೆಗೆ 25 ಕಿ.ಮೀ.
* ಹೆಚ್ಚುವರಿ ಬ್ಯಾಟರಿ ಪ್ಯಾಕ್ ಅಳವಡಿಸಿಕೊಳ್ಳಬಹುದು.
* ದರ: 1.20 ಲಕ್ಷ ರು.


Click it and Unblock the Notifications









