ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ಬಾಲಿವುಡ್ ಜನಪ್ರಿಯ ನಟ ಅಮಿತಾಬ್ ಬಚ್ಚನ್ ಅವರ ಬಳಿ ಇಂತಹ ಐಷಾರಾಮಿ ಕಾರು ಇಲ್ಲ ಎನ್ನುವಂತಿಲ್ಲ. ದೇಶದಲ್ಲಿ ಮಾರಾಟವಾಗುವ ಬಹುತೇಕ ಐಷಾರಾಮಿ ಕಾರುಗಳ ಕಲೆಕ್ಷನ್ ಹೊಂದಿರುವ ಅಮಿತಾಬ್ ಬಚ್ಚನ್ ಅವರು ಇದೀಗ ತಮ್ಮ ನೆಚ್ಚಿನ ಕಾರನ್ನು ಒಎಲ್ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟು ಸುದ್ದಿಯಲ್ಲಿದ್ದಾರೆ.

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ಹೌದು, ಕಳೆದ ಕೆಲ ತಿಂಗಳ ಹಿಂದಷ್ಟೇ ತಮ್ಮ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಮಾರಾಟ ಮಾಡಿದ್ದ ಅಮಿತಾಬ್ ಬಚ್ಚನ್ ಅವರು ಇದೀಗ ಮತ್ತೊಂದು ಐಷಾರಾಮಿ ಸೆಡಾನ್ ಆವೃತ್ತಿಯಾದ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ 350 ಆವೃತ್ತಿಯನ್ನು ಸಹ ಮಾರಾಟಕ್ಕೆ ಮುಂದಾಗಿದ್ದು, ಕಾರು ಮಾರಾಟಕ್ಕಿದೆ ಎಂದು ಆನ್‌ಲೈನ್ ಮಾರಾಟ ವೇದಿಕೆಯಾದ ಒಎಲ್ಎಕ್ಸ್‌ನಲ್ಲಿ ಜಾಹೀರಾತು ಹಾಕಲಾಗಿದೆ.

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

2007ರ ಆವೃತ್ತಿಯಾಗಿರುವ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ 350 ಮಾದರಿಯು ಕಳೆದ 12 ವರ್ಷಗಳಲ್ಲಿ ಕೇವಲ 55 ಸಾವಿರ ಕಿ.ಮಿ ಓಡಾಟ ನಡೆಸಿದ್ದು, ಕಾರಿನ ಬಹುತೇಕ ತಾಂತ್ರಿಕ ಅಂಶಗಳು ಸುಸ್ಥಿತಿಯಲ್ಲಿವೆ.

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ಹತ್ತಾರು ವಿವಿಧ ಮಾದರಿಯ ಐಷಾರಾಮಿ ಕಾರುಗಳನ್ನು ಹೊಂದಿರುವ ಅಮಿತಾಬ್ ಬಚ್ಚನ್ ಅವರು ಕೇವಲ ವಿಶೇಷ ಸಂದರ್ಭಗಳಲ್ಲಿ ಮಾತ್ರವೇ ಎಸ್ ಕ್ಲಾಸ್ 350 ಕಾರನ್ನು ಬಳಕೆ ಮಾಡಿದ್ದು, ಇತ್ತೀಚೆಗೆ ಹಳೆಯ ಕಾರುಗಳನ್ನು ಅಪ್‌ಡೆಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೆಲವು ಕಾರುಗಳನ್ನು ಮರುಮಾರಾಟ ಮಾಡುತ್ತಿದ್ದಾರೆ.

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ರೋಲ್ಸ್ ರಾಯ್ಸ್ ಕಾರು ಮಾರಾಟ ಮಾಡಿದ ಸಂದರ್ಭದಲ್ಲೂ ಕೂಡಾ ಮರ್ಸಿಡಿಸ್ ಬೆಂಝ್ ಬಿಡುಗಡೆಯ ಹೊಸ ವಿ-ಕ್ಲಾಸ್ ಎಂಪಿವಿ ಕಾರನ್ನು ಖರೀದಿಸಿದ್ದರು. ಇದೀಗ ಎಸ್-ಕ್ಲಾಸ್ 350 ಕಾರನ್ನು ಮರುಮಾರಾಟ ಮಾಡಲು ನಿರ್ಧರಿಸಲಾಗಿದ್ದು, ಈ ಬಾರಿ ಯಾವ ಹೊಸ ಕಾರು ಬಚ್ಚನ್ ಅವರ ಕಾರು ಅಡ್ಡಾದಲ್ಲಿ ಸ್ಥಾನ ಪಡೆಯಲಿದೆಯೋ ಎನ್ನುವ ಕುತೂಲಹ ಹೆಚ್ಚಿದೆ.

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ಒಎಲ್ಎಕ್ಸ್‌ನಲ್ಲಿ ಮಾರಾಟಕ್ಕಿರುವ ಎಸ್ ಕ್ಲಾಸ್ 350 ಕಾರಿನ ಬೆಲೆಯನ್ನು ರೂ.9.99 ಲಕ್ಷ ನಿಗದಿ ಮಾಡಲಾಗಿದ್ದು, ಇದು ಮಾರುತಿ ಸುಜುಕಿ ಸಿಯಾಜ್ ಕಾರಿನ ಟಾಪ್ ಎಂಡ್ ಆವೃತ್ತಿಯ ಬೆಲೆಗಳಿಗೆ ಸಮವಾಗಿರಲಿದೆ.

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

3.5-ಲೀಟರ್ ವಿ6 ಪೆಟ್ರೋಲ್ ಎಂಜಿನ್ ಹೊಂದಿರುವ ಮರ್ಸಿಡಿಸ್ ಎಸ್-ಕ್ಲಾಸ್ 350 ಕಾರು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 365-ಬಿಎಚ್‌ಪಿ ಮತ್ತು 345-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಗುಣಹೊಂದಿದೆ.

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ಇನ್ನೊಂದು ವಿಶೇಷ ಅಂದ್ರೆ, ಅಮಿತಾಬ್ ಬಚ್ಚನ್ ಕಾರುಗಳಲ್ಲಿ ವಿಶೇಷವಾಗಿ ಕಂಡುಬರುವ ಎಂಎಚ್ ನೋಂದಣೆಯ '5050' ಸಂಖ್ಯೆಯು ಲಕ್ಕಿ ಎಂದೇ ಹೇಳಲಾಗುತ್ತಿದ್ದು, ಈ ಸಂಖ್ಯೆಯು ಬಚ್ಟನ್ ಒಡೆಯನ ಬಹುತೇಕ ಕಾರುಗಳಲ್ಲಿ ಕಾಣಬಹುದಾಗಿದೆ.

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ಹೀಗಾಗಿ ಅಮಿತಾಬ್ ಬಚ್ಚನ್ ಬಳಕೆಯ ಈ ಐಷಾರಾಮಿ ಕಾರು ಖರೀದಿಗೆ ಈಗಾಗಲೇ ಸಾಕಷ್ಟು ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದು, ಕೊನೆಯ ಕ್ಷಣದಲ್ಲಿ ಎಸ್-ಕ್ಲಾಸ್ 350 ಯಾರ ಪಾಲಾಗುತ್ತೆ ಎನ್ನುವುದೇ ಸದ್ಯದ ಕುತೂಹಲ ವಿಚಾರವಾಗಿದೆ.

MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ಇನ್ನು ಅಮಿತಾಬ್ ಬಚ್ಚನ್ ಅವರ ಬಳಿಯಿರುವ ಲ್ಯಾಂಡ್ ರೋವರ್ ರೇಂಜ್ ರೋವರ್‌ನ ಆಟೋಬಯೋಗ್ರಾಫಿ ಕಾರು ಬಿಗ್ ಬಿ ನೆಚ್ಚಿನ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, 4,367 ಸಿಸಿ ಸಾಮರ್ಥ್ಯದ ಎಂಜಿನ್‌ನೊಂದಿಗೆ ಲಾಂಗ್ ವೀಲ್ ಬೇಸ್ ಹೊಂದಿರುವ ಈ ಕಾರನ್ನು ತಮ್ಮ ಬೇಡಿಕೆಗಳಿಗೆ ಅನುಸಾರವಾಗಿ ವಿಶೇಷವಾಗಿ ಕಸ್ಟಮೈಸ್ಡ್ ಕೂಡಾ ಮಾಡಿಕೊಂಡಿದ್ದಾರೆ.

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ಹಾಗೆಯೇ ಅಮಿತಾಬ್ ಅವರು ಮಸೆರೆಟಿ ಕ್ಯಾಲಿಬಾರ್, ಲೆಕ್ಸಸ್ ಎಲ್ಎಕ್ಸ್750, ಮರ್ಸಿಡಿಸ್ ಬೆಂಝ್ ಮೇಬ್ಯಾಚ್ ಎಸ್500, ಬೆಂಟ್ಲಿ ಕಾಂಟಿನೆಂಟಲ್ ಜಿಟಿ, ಪೋರ್ಷೆ ಕೆಮ್ಯಾನ್, ಕೂಪೆ ಎಸ್-ಕ್ಲಾಸ್, ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಎಂಪಿವಿ, ಲ್ಯಾಂಡ್ ಕ್ರೂಸರ್, ಆಡಿ ಕ್ಯೂ5 ಮತ್ತು ಬಿಎಂಡಬ್ಲ್ಯು 6 ಸೀರಿಸ್ ಕಾರುಗಳ ಮಾಲೀಕರಾಗಿದ್ದಾರೆ.

MOST READ: ನರೇಂದ್ರ ಮೋದಿಯವರ ನೆಚ್ಚಿನ ಆಯ್ಕೆ ರೇಂಜ್ ರೋವರ್ ವೊಗ್ ಸ್ಪೆಷಲ್ ಏನು?

ಒಎಲ್ಎಕ್ಸ್​ನಲ್ಲಿ ತಮ್ಮ ಐಷಾರಾಮಿ ಬೆಂಝ್ ಕಾರನ್ನು ಮಾರಾಟಕ್ಕಿಟ್ಟ ನಟ ಅಮಿತಾಬ್‌ ಬಚ್ಚನ್‌

ಇದೀಗ ತಮ್ಮ ಕಾರು ಅಡ್ಡಾದಲ್ಲಿರುವ ಹಳೆಯ ಕಾರುಗಳನ್ನು ಒಂದಂದಾಗಿ ಮಾರಾಟ ಮಾಡುತ್ತಿರುವ ಅಮಿತಾಬ್ ಬಚ್ಚನ್ ಅವರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಹೊಸ ನಮೂನೆಯ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿರುವ ಬಿಎಂಡಬ್ಲ್ಯು ಹೊಸ ಐಷಾರಾಮಿ ಕಾರು ಎಕ್ಸ್7 ಎಸ್‌ಯುವಿ ಮೇಲೆ ಬಿಗ್ ಬಿ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

Most Read Articles

Kannada
English summary
Bollywood Superstar Amitabh Bachchan’s Mercedes-Benz S-Class 350 L Put Up For Sale At OLX. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X