ಮಹೀಂದ್ರ ಗ್ರೂಪಿಗೆ ಆನಂದ್ ಮಹೀಂದ್ರ ಚೇರ್ಮನ್

ಸುಮಾರು 45 ವರ್ಷಗಳ ಕಾಲ ಮಹೀಂದ್ರ ಗ್ರೂಪಿನ ಸಾರಥ್ಯ ವಹಿಸಿದ ಕೇಶುಬ್ ಮಹೀಂದ್ರ ನಿವೃತ್ತಿಯಾಗಿದ್ದಾರೆ. ಇದೀಗ ಮಹೀಂದ್ರ ಆಂಡ್ ಮಹೀಂದ್ರ ಗ್ರೂಪಿನ ನೂತನ ಚೇರ್ಮನ್ ಆಗಿ ಆನಂದ್ ಮಹೀಂದ್ರ ಅಧಿಕಾರ ವಹಿಸಿದ್ದಾರೆ.

ಕಂಪನಿಯ ಷೇರುದಾರರಿಗೆ ಧನ್ಯವಾದ ತಿಳಿಸಿದ ಕೇಶಬ್ ಮಹೀಂದ್ರ, ಹೊಸ ಸಾಧ್ಯತೆಯತ್ತ ಕಂಪನಿ ತೆರೆದುಕೊಳ್ಳುವ ಸಮಯವಿದು ಎಂದರು. ಕಂಪನಿಯನ್ನು ಆನಂದ್ ಮಹೀಂದ್ರ ಹೊಸ ಎತ್ತರಕ್ಕೆ ತಲುಪಿಸುವ ಸಂಪೂರ್ಣ ಭರವಸೆಯನ್ನು ಕೇಶುಬ್ ವ್ಯಕ್ತಪಡಿಸಿದ್ದಾರೆ.

ಮಹೀಂದ್ರ ಕಂಪನಿಯ ಪ್ರಗತಿಯ ಪ್ರಮುಖ ರೂವಾರಿಯಾದ ಕೇಶುಬ್ 1963ರಿಂದ ಮಹೀಂದ್ರ ಗ್ರೂಪಿನ ಚೇರ್ಮನ್ ಸ್ಥಾನವನ್ನು ಅಲಂಕರಿಸಿದ್ದರು. ಕೇಶುಬ್ ನೇತೃತ್ವದಲ್ಲಿ ಕಂಪನಿಯು ವಾಹನೋದ್ಯಮಕ್ಕೆ ಪ್ರವೇಶಿಸಿದ ನಂತರ ಹಲವು ವಲಯಗಳಲ್ಲಿ ಪಾರಮ್ಯ ಮೆರೆದಿದೆ.

"ಬಿಸಿನೆಸ್ ಲೀಡರುಗಳಿಗೆ ಕೇಶುಬ್ ರೋಲ್ ಮಾಡೆಲ್. ಸಾಮಾಜಿಕ ಬದ್ದತೆ, ತತ್ವಾದರ್ಶಗಳ ಮೂಲಕ ಸಂಸ್ಥೆಯನ್ನು ಎತ್ತರಕ್ಕೆ ಕೊಂಡೊಯ್ದಿದ್ದಾರೆ" ಎಂದು ಮಾವನ ಬಗ್ಗೆ ಆನಂದ್ ಮಹೀಂದ್ರ ಕೆಲವು ಸಮಯದ ಹಿಂದೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆಟೋಮೊಬೈಲ್ಸ್, ಟ್ರಾಕ್ಟರ್ಸ್, ವಾಹನ ಬಿಡಿಭಾಗಗಳ ಉದ್ದಿಮೆಗಳಲ್ಲಿ, ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್, ಹಣಕಾಸು ಸೇವಾಸಂಸ್ಥೆ ಮತ್ತು ವೈದ್ಯಕೀಯ ಸೆಕ್ಟರ್ ಸೇರಿದಂತೆ ಹಲವು ವಿಭಾಗಗಳಲ್ಲಿ ಮಹೀಂದ್ರ ಗ್ರೂಪ್ ಕಂಪನಿಯು ಕಾರ್ಯನಿರ್ವಹಿಸುತ್ತಿದೆ.

ಜೊತೆಗೆ ಮಹೀಂದ್ರವು ದೇಶದ ಪ್ರಮುಖ ಯುಟಿಲಿಟಿ ವಾಹನ ತಯಾರಿಕಾ ಕಂಪನಿಯಾಗಿದೆ. ಬೊಲೆರೊ, ಸ್ಕಾರ್ಪಿಯೊ, ಕ್ಷೈಲೊ, ಎಕ್ಸ್ ಯುವಿ 500 ಮುಂತಾದ ಎಸ್‌ಯುವಿಗಳನ್ನು, ಕೃಷಿ ಕ್ಷೇತ್ರಕ್ಕೆ ಅವಶ್ಯವಿರುವ ಟ್ರಾಕ್ಟರ್, ಸಾರಿಗೆ ಕ್ಷೇತ್ರಕ್ಕೆ ಬಸ್, ಟ್ರಕ್ ಮತ್ತು ಹಗುರ ವಾಣಿಜ್ಯ ವಾಹನಗಳನ್ನು ಕಂಪನಿಯು ನಿರ್ಮಾಣ ಮಾಡುತ್ತಿದೆ. ವೆರಿಟೊ ಮೂಲಕ ಪ್ರಯಾಣಿಕ ಕಾರು ಮಾರುಕಟ್ಟೆಗೂ ಕಂಪನಿ ಲಗ್ಗೆಯಿಟ್ಟಿದೆ.

More from DriveSpark

Article Published On: Saturday, August 11, 2012, 9:47 [IST]
English summary
Keshub Mahindra retired as Chairman of M&M group and Anand Mahindra has taken over as the new Chairperson.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+