ಬಿಎಂಡಬ್ಲ್ಯುಗೆ ಕೊಕ್ ಕೊಟ್ಟು ಸ್ಕಾರ್ಪಿಯೊಗೆ ಜೈ ಅನ್ನಿ: ಮೋದಿಗೆ ಮಹೀಂದ್ರ
ಭಾರತದ 15ನೇ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದರೂ ಅವರು ಸಂಚರಿಸಬೇಕಾಗಿರುವ ಅಧಿಕೃತ ವಾಹನದ ಬಗ್ಗೆ ಮಾತ್ರ ನಿರ್ಧಾರ ಇನ್ನು ಅಂತಿಮವಾಗಿಲ್ಲ. ಸ್ವದೇಶಿ ಉತ್ಪನ್ನಗಳ ಬಳಕೆಯ ಭಾಗವಾಗಿ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ಜನಪ್ರಿಯ ಕ್ರೀಡಾ ಬಳಕೆಯ ಸ್ಕಾರ್ಪಿಯೊಗೆ ಮೊರೆ ಹೋಗಿದ್ದ ಮೋದಿ, ಇದೀಗ ಪ್ರಧಾನಿ ಗದ್ದುಗೇರಿರುವ ಬಳಿಕ ಭದ್ರತಾ ಪಹರೆಗಾನುಸಾರವಾಗಿ ಹೆಚ್ಚು ಸುರಕ್ಷಿತ ಬಿಎಂಡಬ್ಲ್ಯು 7 ಸಿರೀಸ್ ಪಡೆಯುವುದು ಬಹುತೇಕ ನಿಚ್ಚಳವಾಗಿದೆ.
ಇವನ್ನು ಓದಿ: ಮೋದಿಗೆ ಬಿಎಂಡಬ್ಲ್ಯು 7 ಸಿರೀಸ್ ಪಕ್ಕಾ
ಈ ಸಂಬಂಧ ಚರ್ಚೆ ನಡೆಯುತ್ತಿರುವಂತೆಯೇ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯಸ್ಥರಾಗಿರುವ ಆನಂದ್ ಮಹೀಂದ್ರ, ದೇಶದ ಪ್ರಧಾನಿ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಆ ಪತ್ರದಲ್ಲೇನಿದೆ? ಕುತುಹಲಕಾರಿ ಅಂಶಗಳಿಗಾಗಿ ಸ್ಲೈಡರ್‌ನತ್ತ ಮುಂದುವರಿಯಿರಿ...

ನರೇಂದ್ರ ಮೋದಿಗೆ ಪತ್ರ ಬರೆದಿರುವ ಎಂ ಆಂಡ್ ಎಂ ಸಂಸ್ಥೆಯ ಸಿಎಂಡಿ ಆನಂದ್ ಮಹೀಂದ್ರ, ಸಾಮಾನ್ಯವಾಗಿ ದೇಶದ ಪ್ರಧಾನಿಗಳು ಬಳಕೆ ಮಾಡುತ್ತಿರುವ ಬಿಎಂಡಬ್ಲ್ಯು 7 ಸಿರೀಸ್ ಕಾರನ್ನು ಬಿಟ್ಟು ಸ್ಕಾರ್ಪಿಯೊವನ್ನೇ ತಮ್ಮ ಅಧಿಕೃತ ಕಾರಾಗಿ ಮುಂದುವರಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಪ್ರಧಾನಿಗೆ ಬೇಕಾಗಿರುವ ಎಲ್ಲ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಭರವಸೆಯನ್ನು ಪಿಎಂಗೆ ನೀಡಿರುವುದಾಗಿ ತಿಳಿಸಿದ್ದಾರೆ.

ದೇಶದ ಪ್ರಧಾನಿಯೊಬ್ಬರು ಸಂಪೂರ್ಣವಾಗಿಯೂ ದೇಶದಲ್ಲೇ ಅಭಿವೃದ್ಧಿ ಹಾಗೂ ನಿರ್ಮಿಸಲ್ಪಟ್ಟ ವಾಹನವೊಂದನ್ನು ಬಳಕೆ ಮಾಡುವುದು ನಮ್ಮ ಪಾಲಿಗೆ ದೊಡ್ಡ ಹೆಮ್ಮೆ ಹಾಗೂ ಗೌರವವನ್ನುಂಟು ಮಾಡುವ ವಿಷಯವಾಗಿದೆ. ಅಲ್ಲದೆ ಪ್ರಧಾನಿ ಆರ್ಮರ್ಡ್ (ಶಸ್ತ್ರಸಜ್ಜಿತ) ಸ್ಕಾರ್ಪಿಯೊ ಬಯಸಿದ್ದಲ್ಲಿ ಅದನ್ನು ಒದಗಿಸಿಕೊಡುವುದರಲ್ಲಿ ಸಂಪೂರ್ಣ ಬದ್ಧರಾಗಿದ್ದೇವೆ ಎಂದಿದ್ದಾರೆ.

ಮಾತು ಮುಂದುವರಿಸಿದ ಅವರು, ಬಿಎಂಡಬ್ಲ್ಯು ಕಾರಿನಲ್ಲಿ ಲಭ್ಯವಿರುವ, ಆರ್ಮರ್ಡ್ ಪ್ಲೇಟ್, ಸೆಲ್ಫ್ ಸೀಲಿಂಗ್ ಫ್ಯೂಯಲ್ ಟ್ಯಾಂಕ್, ಆಟ್ಯಾಕ್ ಅಲರಾಂ ಹಾಗೂ ಒಳಸಂಪರ್ಕ ವ್ಯವಸ್ಥೆ ಜತೆ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲಿದ್ದೇವೆ ಎಂದಿದ್ದಾರೆ.

ಈ ಮೊದಲು ನಡೆದ 16ನೇ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಬೂಲೆಟ್ ಫ್ರೂಫ್ ಸ್ಕಾರ್ಪಿಯೊದಲ್ಲೇ ಮೋದಿ ಸುತ್ತಾಡುತ್ತಿದ್ದರು.

ಈ ಸಂಬಂಧ ಆನಂದ್ ಮಹೀಂದ್ರ ಟ್ವಿಟರ್‌ನಲ್ಲೂ ಟ್ವೀಟ್ ಮಾಡಿದ್ದು, ಈಗಾಗಲೇ ಮೈಕ್ರೋ ಬ್ಲಾಗಿಂಗ್ ವೆಬ್ ತಾಣದಲ್ಲಿ ಸಾಕಷ್ಟು ರಿ ಟ್ವೀಟ್ ಹಾಗೂ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುವಲ್ಲಿ ನೆರವಾಗಿದೆ.

ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಯಾವುದೇ ಅಧಿಕೃತ ನಿರ್ಧಾರ ಹೊರಬಂದಿಲ್ಲ. ಈ ಬಗ್ಗೆ ಪ್ರಧಾನಿಯವರ ಭದ್ರತೆಯನ್ನು ಹೊತ್ತಿರುವ ವಿಶೇಷ ರಕ್ಷಣಾ ಪಡೆಯಿಂದ (ಎಸ್‌ಪಿಜಿ) ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆಯಿದೆ.


Click it and Unblock the Notifications








