ಕಾರಿನ ಸೀಟಲ್ಲಿ ಸೆನ್ಸಾರಿದೆ, ಕಳ್ಳಕಾಕರು ಕೂರೋ ಹಾಗಿಲ್ಲ!!

ಕಾರು ಕಳ್ಳರು ತುಂಬಾ ಚಾಣಾಕ್ಷ್ಯರಾಗಿರುತ್ತಾರೆ. ಪಾರ್ಕಿಂಗ್ ಮಾಡಿಟ್ಟಿದ್ದ ಕಾರು ಕಾಣೆಯಾಗಿರುತ್ತದೆ. ರಾತ್ರಿ ಮನೆಯ ಮುಂಭಾಗದಲ್ಲಿಟ್ಟ ಕಾರು ಮುಂಜಾನೆ ಮಂಗಮಾಯವಾಗಿರುತ್ತದೆ. ಕೀಲಿಕೈ ನಕಲು ಮಾಡುವುದು, ಮಾಸ್ಟರ್ ಕೀಲಿಕೈ ಬಳಕೆ ಇತ್ಯಾದಿಗಳ ಮೂಲಕ ಕಾರು ಕಳ್ಳತನ ಮಾಡುತ್ತಿರುವ ಕಾರು ಕಳ್ಳರು ಇನ್ನು ಮುಂದೆ ಕಾರು ಮಾಲಿಕನ ಅಂಡನ್ನೇ ನಕಲು ಮಾಡಬೇಕಷ್ಟೇ!

ಟೊಕಿಯೋ ಮೂಲದ ಅಡ್ವಾನ್ಸಡ್ ಇನ್ಶುಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ನೂತನ ಗ್ಯಾಡ್ಜೆಟ್ ಅಭಿವೃದ್ಧಿಪಡಿಸಿದೆ. Anti Theft Seat Sensor System ಎಂಬ ಹೆಸರಿನ ಈ ಸಾಧನವು ಸೀಟ್ ನಲ್ಲಿ ಕುಳಿತ ಕಾರು ಮಾಲೀಕನನ್ನು ಗುರುತಿಸುತ್ತದೆ. ಅಪರಿಚಿತರು ಬಂದು ಕುಳಿತುಕೊಂಡರೆ ಕಾರಿನ ಎಂಜಿನ್ ಸ್ಟಾರ್ಟ್ ಆಗುವುದಿಲ್ಲವೆನ್ನುವುದು ಇದರ ವಿಶೇಷತೆಯಾಗಿದೆ.

ಕಾರಿನ ಸೀಟಿನಲ್ಲಿ ಕುಳಿತ ವ್ಯಕ್ತಿಯ ಗಾತ್ರ, ತೂಕ, ಸೀಟಿನ ಮೇಲೆ ಬಿದ್ದಿರುವ ಒತ್ತಡ ಇತ್ಯಾದಿಗಳನ್ನೆಲ್ಲ ಈ ಗ್ಯಾಡ್ಜೆಟ್ ಗುರುತಿಸುತ್ತದೆ. ಈ ಮಾಹಿತಿಗಳನ್ನೆಲ್ಲ ಹಳೆಯ ಮಾಹಿತಿಗಳೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತದೆ. ಕುಳಿತಿರುವ ವ್ಯಕ್ತಿ ಓನರ್ ಎಂದು ಈ ಮಾಹಿತಿಗಳಿಂದ ಸ್ಪಷ್ಟವಾದರೆ ಕಾರು ಆನ್ ಆಗುತ್ತದೆ.

ಈ ಸಾಧನದಲ್ಲಿ 360ಕ್ಕೂ ಹೆಚ್ಚು ಸೆನ್ಸಾರುಗಳಿವೆ. ಇಈ ಸಾಧನವು ಕಾರಿನ ಮಾಲಿಕರ ಒತ್ತಡ ಸಿಗ್ನೆಚರ್ ಸಂಗ್ರಹಿಸಿಟ್ಟುಕೊಳ್ಳುತ್ತದೆ. ಸಂಗ್ರಹಗೊಂಡಿರುವ ಹಳೆಯ ಮಾಹಿತಿಗಳಿಗೆ ಹೊಸ ಮಾಹಿತಿ ತಾಳೆಯಾಗದಿದ್ದರೆ ಕಾರು ಸ್ಟಾರ್ಟ್ ಆಗುವುದಿಲ್ಲ. ಕಾರಿನ ಕೀಲಿಕೈ ಯಾರಿಗೋ ದೊರಕಿ ಕಾರಿನ ಕಳ್ಳತನವಾಗುವ ಅಪಾಯವನ್ನೂ ಈ ಸಾಧನ ತಪ್ಪಿಸುತ್ತದೆ.

ನೂತನ ಸಾಧನ ಕಾರು ಕಳ್ಳತನವಾಗುವುದನ್ನು ತಡೆಯುತ್ತದೆ ಎಂದು ಕಂಪನಿ ಹೇಳಿದೆ. ಈ ಸಾಧನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿರುವುದಾಗಿ ಕಂಪನಿ ಹೇಳಿದೆ. ಗಡದ್ದಾಗಿ ಊಟ ಮಾಡಿಬಂದಾಗ ತೂಕ ಹೆಚ್ಚಾಗಿದ್ದರೆ ಈ ಸೆನ್ಸಾರ್ ಮಾಲಿಕನನ್ನು ಗುರುತಿಸಬಹುದೇ ಗೊತ್ತಿಲ್ಲ.

ಇಲ್ಲೊಂದಿಷ್ಟು ಸಮಸ್ಯೆಗಳು ಡ್ರೈವ್ ಸ್ಪಾರ್ಕ್ ಗಮನಕ್ಕೆ ಬಂದಿದೆ. ಪ್ರೆಷರ್ ಸಿಗ್ನಚರ್ ಇರುವುದರಿಂದ ಈ ಕಾರು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಡ್ರೈವ್ ಮಾಡಲು ಸಾಧ್ಯ. ಸಿಗ್ಚೆಚರ್ ಹೋಲಿಕೆಯಾಗದ ವ್ಯಕ್ತಿ ಇದರಲ್ಲಿ ಡ್ರೈವ್ ಮಾಡಲು ಸಾಧ್ಯವಿಲ್ಲ. ಎಲ್ಲಾದರೂ ತುರ್ತು ಸಂದರ್ಭಗಳಲ್ಲಿ ಕಾರನ್ನು ಯಾರಾದರೂ ಚಾಲನೆ ಮಾಡಲು ಸಾಧ್ಯವಿಲ್ಲ. ಈ ಸಿಸ್ಟಮಿಗೆ ಬಹು ಸಿಗ್ನೆಚರ್ ಅಳವಡಿಸುವ ಕುರಿತು ಯೋಚಿಸುತ್ತಿರುವುದಾಗಿ ಇದರ ತಯಾರಿಕಾ ಕಂಪನಿ ಹೇಳಿದೆ.

ಇನ್ನೆರಡು ವರ್ಷಗಳಲ್ಲಿ ಈ ಆಂಟಿ ಥೆಪ್ಟ್ ಸೆನ್ಸಾರ್ ಸಾಧನವು ಮಾರುಕಟ್ಟೆಗೆ ಪ್ರವೇಶಿಸುವ ನಿರೀಕ್ಷೆಯಿದೆ. ಈ ಸಾಧನ ಬಂದ ನಂತರ ಕಾರು ಕಳ್ಳರು ಕಾರು ಮಾಲೀಕನ ಹಿಂಭಾಗವನ್ನು ಹೇಗೆ ನಕಲು ಮಾಡಬಹುದು ಎನ್ನುವುದು ನಮ್ಮ ಮುಂದಿನ ಪ್ರಶ್ನೆ.

More from DriveSpark

Article Published On: Tuesday, January 31, 2012, 16:38 [IST]
English summary
Tokyo based Advanced Institute Of Industrial Technology has developed a new car safety device that measures the size, shape and weight of the person sitting on the driver's seat, compares it with the available data and only after confirming that the person sitting on the car is the owner will it allow the engine to be started.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+