ಇಕೊಸ್ಪೋರ್ಟ್ ಸೂಪರ್; ಬಂತು ನೋಡಿ ಡೇ ಟೈಮ್ ರನ್ನಿಂಗ್ ಲೈಟ್ಸ್
ದೇಶದ ಕಾಂಪಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಅತಿ ಹೆಚ್ಚು ಬೇಡಿಕೆ ಕಾಪಾಡಿಕೊಂಡಿದೆ. ಇದಕ್ಕೆ ತಾಜಾ ಸ್ಪರ್ಶ ನೀಡಲು ಮುಂದಾಗಿರುವ ಫೋರ್ಡ್, ಡೇ ಟೈಮ್ ರನ್ನಿಂಗ್ ಲೈಟ್ಸ್ ಆಯ್ಕೆಯನ್ನು ಗ್ರಾಹಕರಿಗಾಗಿ ಮುಂದಿಟ್ಟಿದೆ.
ಆರಂಭದಿಂದಲೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಕೊಸ್ಪೋರ್ಟ್ ಎಲ್‌ಇಡಿ ಡೇಟೈಮ್ ಹೆಡ್‌ಲೈಟ್ ಲಭ್ಯವಿತ್ತು. ಇದೀಗ ಈ ವೈಶಿಷ್ಟ್ಯ ಭಾರತಕ್ಕೂ ಪ್ರವೇಶಿಸಿರುವುದು ಸ್ವಾಗತಾರ್ಹವೇ ಸರಿ. ಇದು ಗ್ರಾಹಕರಿಗೆ ಇನ್ನಷ್ಟು ಆಯ್ಕೆ ಪ್ರದಾನ ಮಾಡಲಿದೆ.

ಫೋರ್ಡ್‌ನ ಇಕೊಸ್ಪೋರ್ಟ್ ಡೇ ಟೈಮ್ ರನ್ನಿಂಗ್ ಹೆಡ್‌ಲೈಟ್ ಐಚ್ಛಿಕ ಆಕ್ಸೆಸರಿಯಾಗಿರಲಿದ್ದು, ನೀವು ಬಯಸಿದ್ದಲ್ಲಿ ಪ್ರಸ್ತುತ ರಸ್ತೆಯಲ್ಲಿ ಓಡಾಡುತ್ತಿರುವ ನಿಮ್ಮ ಇಕೊಸ್ಪೋರ್ಟ್ ಕಾರಿಗೂ ಲಗತ್ತಿಸಬಹುದಾಗಿದೆ.
ಅಂದ ಹಾಗೆ ಇಕೊಸ್ಪೋರ್ಟ್‌ನ 'ಸಿಗ್ನೇಚರ್' ಡೇಟೈಮ್ ರನ್ನಿಂಗ್ ಲೈಟ್ಸ್ ಆಕ್ಸೆಸರಿಗಾಗಿ ಹೆಚ್ಚುವರಿ ರು. 14,000 ಪಾವತಿಸಬೇಕಾಗಿದೆ. ಇದರ ಜತೆಗೆ ಕಾರಿನ ನೋಟವನ್ನು ಇನ್ನಷ್ಟು ಅಂದವಾಗಿಸುವ ನಿಟ್ಟಿನಲ್ಲಿ ಫೋರ್ಡ್ ಸಂಸ್ಥೆಯು, 15 ಇಂಚಿನ ಅಲಾಯ್ ವೀಲ್, ಫಾಗ್ ಲ್ಯಾಂಪ್, ರೂಫ್ ರೈಲಿಂಗ್, ರೂಫ್ ರಾಕ್ ಟ್ರೇ, ರಿಯರ್ ಸ್ಪಾಯ್ಲರ್, ಫ್ರಂಟ್ ಗ್ರಿಲ್‌ನಲ್ಲಿ ಕ್ರೋಮ್ ಫಿನಿಷರ್, ಸೈಡ್ ರನ್ನಿಂಗ್ ಬೋರ್ಡ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳಂತಹ ಫೀಚರ್‌ಗಳನ್ನು ಒದಗಿಸುತ್ತಿದೆ.
ಎಂಜಿನ್ ಮಾಹಿತಿ: ಮೂರು ಎಂಜಿನ್ ಆಯ್ಕೆ - 1.0 ಲೀಟರ್ ಇಕೊಬೂಸ್ಟ್ ಪೆಟ್ರೋಲ್, 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್.


Click it and Unblock the Notifications








