ತಮಿಳು ನಟ ಸೂರ್ಯನಿಗೆ ಒಲಿದ "ಎ7" ಸ್ಪೋರ್ಟಿ ಬ್ಯೂಟಿ
ಜರ್ಮನಿಯ ದುಬಾರಿ ಕಾರು ತಯಾರಿಕಾ ಕಂಪನಿ ಆಡಿ, ನೂತನ ಸ್ಪೋರ್ಟ್ಸ್ ಕಾರ್ ಎ7ನ್ನು ಕೊಲಿವುಡ್ ನಟ ಸೂರ್ಯನಿಗೆ ಉಡುಗೊರೆಯಾಗಿ ನೀಡಿದೆ. ಜನಪ್ರಿಯ ನಟನೊಬ್ಬನಿಗೆ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡುವ ಮೂಲಕ ಕಂಪನಿಯು ಲಗ್ಷುರಿ ಕಾರಿನ ಪ್ರಚಾರಕ್ಕೆ ತೊಡಗಿದೆ.
ಈಗಾಗಲೇ ಸೂರ್ಯನ ಬಳಿ ಆಡಿ ಕ್ಯೂ7 ಕಾರಿದೆ. ಇದನ್ನು ಸೂರ್ಯನ ಸಹೋದರ ಕಾರ್ತಿ ಉಡುಗೊರೆಯಾಗಿ ನೀಡಿದ್ದರು. ನೂತನ ಆಡಿ ಎ7 ಸ್ಪೋರ್ಟ್ ಬ್ಯಾಕ್ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು ದರ ಸುಮಾರು 80 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ.
ಆಡಿ ಎ7 ವಿಮರ್ಶೆ: ಇದು ಜರ್ಮನ್ ಕಂಪನಿ ಆಡಿಯ ಜನಪ್ರಿಯ ಮತ್ತು ಯಶಸ್ವಿ ಕಾರು. ತಂತ್ರಜ್ಞಾನ, ಆರಾಮದಾಯಕತೆ, ಸುರಕ್ಷತೆ ವಿಷಯಗಳಲ್ಲಿ ಇದು ಅಲ್ಟಿಮೆಟ್ ಕಾರು. ಆಡಿ ಎ7 ಕಾರು 3 ಲೀಟರಿನ ಟಿಡಿಐ ವಿ6 ಎಂಜಿನ್ ಹೊಂದಿದೆ. ಇದು 4,000- 5 ಸಾವಿರ ಆವರ್ತನಕ್ಕೆ ಗರಿಷ್ಠ 245 ಅಶ್ವಶಕ್ತಿ ನೀಡುತ್ತದೆ. 1,400ರಿಂದ 3,250 ಆವರ್ತನಕ್ಕೆ ಸುಮಾರು 500ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಡೀಸೆಲ್ ಆವೃತ್ತಿಯಲ್ಲಿ ಕೇವಲ 6.3 ಸೆಕೆಂಡಿನಲ್ಲಿ ಗರಿಷ್ಠ 62 ಮೈಲು ವೇಗ ಪಡೆದುಕೊಳ್ಳಬಹುದಾಗಿದೆ. ಇದರ ಗರಿಷ್ಠ ವೇಗ ಮೈಲಿಗೆ 155 ಕಿ.ಮೀ. ಅದೇ ರೀತಿ ಪೆಟ್ರೋಲ್ ಆವೃತ್ತಿಯಲ್ಲಿ ಕೇವಲ 5.6 ಸೆಕೆಂಡಿನಲ್ಲಿ 0-62 ಮೈಲು ವೇಗ ಪಡೆದುಕೊಳ್ಳಬಹುದು. ಇದರ ಗರಿಷ್ಠ ವೇಗ ಕೂಡ 155 ಕಿ.ಮೀ.
ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಪ್ರವೇಶಿಸಿರಿ.


Click it and Unblock the Notifications









