ಬಜೆಟ್ ಪರಿಣಾಮ: ಆಡಿ ಕಾರು ದರ ಗಗನಕ್ಕೆ

By Audi Hikes Car Prices By Up To 14%

Audi Hikes Car Prices By Up To 14%
ಜರ್ಮನಿಯ ಐಷಾರಾಮಿ ಕಾರು ಕಂಪನಿ ಆಡಿ ಕೂಡ ದರ ಹೆಚ್ಚಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಆಡಿ ಕಾರುಗಳ ದರ ಶೇಕಡ 14ರಷ್ಟು ಏರಿಕೆ ಕಂಡಿದೆ. "ಮುಖ್ಯವಾಗಿ ಸಿಬಿಯು ಹಾದಿ ಮೂಲಕ ಆಮದು ಮಾಡಿಕೊಳ್ಳುವ ಕಾರುಗಳಿಗೆ ಬಜೆಟ್ ಕೆಟ್ಟ ಪರಿಣಾಮ ಉಂಟು ಮಾಡಿದೆ" ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

2012-13ನೇ ಸಾಲಿನ ಮುಂಗಡಪತ್ರದಲ್ಲಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದರು. 3 ಸಾವಿರ ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಪೆಟ್ರೋಲ್ ಕಾರುಗಳಿಗೆ ಮತ್ತು 2,500 ಸಿಸಿಗಿಂತ ಅಧಿಕ ಶಕ್ತಿಶಾಲಿ ಡೀಸೆಲ್ ಕಾರುಗಳ ಆಮದಿಗೆ ಶೇಕಡ 60 ಅಬಕಾರಿ ಸುಂಕ ಶೇಕಡ 75ಕ್ಕೆ ಹೆಚ್ಚಿಸಲಾಗಿದೆ.

ಶೇಕಡ 15ರಷ್ಟು ಅಬಕಾರಿ ಸುಂಕ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ಕಂಪನಿ ಹೇಳಿದೆ. ಯಾವ ಮಾಡೆಲ್ ಕಾರಿಗೆ ಎಷ್ಟು ದರ ಹೆಚ್ಚಳ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಕಂಪನಿ ಇನ್ನೂ ತಿಳಿಸಿಲ್ಲ. (ಕನ್ನಡ ಡ್ರೈವ್ ಸ್ಪಾರ್ಕ್)

Article Published On: Thursday, March 22, 2012, 14:56 [IST]
English summary
German luxury carmaker Audi has announced an across the board price hike of all its models sold In India. Audi India in its statement has said the cars most affected by the price hike would be the cars imported as CBUs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+