ನವೆಂಬರ್‌ನಲ್ಲಿ ಸ್ಪೋರ್ಟ್ ಸರಣಿಯ ಆಡಿ ಎಸ್6 ರಸ್ತೆಗೆ

ದೇಶದಲ್ಲಿನ ವಿಸ್ತರಣಾ ಯೋಜನೆಗಳನ್ನು ಜಪಾನಿನ ವಿಲಾಸಿ ಕಾರು ತಯಾರಿಕಾ ಕಂಪನಿ ಮುಂದುವರೆಸಿದೆ. ಇದೀಗ ಕಂಪನಿಯು ನೂತನ ಸ್ಪೋರ್ಟ್ಸ್ ಸರಣಿಯ ಎಸ್6 ಕಾರನ್ನು ದೇಶಕ್ಕೆ ಪರಿಚಯಿಸುವ ಇಂಗಿತ ವ್ಯಕ್ತಪಡಿಸಿದೆ. ನೂತನ ಎಸ್6 ಕಾರು ಪ್ರಸಕ್ತ ವರ್ಷದ ನವೆಂಬರ್ ತಿಂಗಳಲ್ಲಿ ಆಗಮಿಸಲಿದೆ.

ನೂತನ ಎಸ್6 ಕಾರು ಪರಿಚಯಿಸುವ ಮೂಲಕ ದೇಶದಲ್ಲಿ ಪೈಪೋಟಿಯಿಲ್ಲದ ಹೊಸ ಸೆಗ್ಮೆಂಟಿಗೆ ಪ್ರವೇಶಿಸಲು ಕಂಪನಿ ನಿರ್ಧರಿಸಿದೆ. ಯಾಕೆಂದರೆ ಇಂತಹ ಬೇರೆ ಯಾವುದೇ ಕಾರುಗಳನ್ನು ಬೇರೆ ಯಾವ ಕಂಪನಿಯು ಇಲ್ಲಿಗೆ ಪರಿಚಯಿಸಿಲ್ಲ. ಇತ್ತೀಚೆಗೆ ಕಂಪನಿಯು ಪರಿಚಯಿಸಿದ ಎಸ್4 ಕಾರಿಗೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಆಡಿ ಇಂಡಿಯಾದ ಮುಖ್ಯಸ್ಥರು ಹೇಳಿದ್ದಾರೆ.

ನೂತನ ಎಸ್6 ಕಾರು ಎ6 ಕಾರಿನ ದೊಡ್ಡಣ್ಣ ಕಾರಿನಂತೆ ಭಾಸವಾಗುತ್ತದೆ. ಎ6 ಕಾರಿಗೆ ಹೋಲಿಸಿದರೆ ಎಸ್6 ಕಾರಿನಲ್ಲಿ ಅತ್ಯಧಿಕ ಫೀಚರುಗಳಿವೆ. ಎಸ್6 ಕಾರು 4.0 ಲೀಟರಿನ ವಿ8 ಎಂಜಿನ್ ಹೊಂದಿದೆ. ಇದು 420 ಹಾರ್ಸ್ ಪವರ್ ಮತ್ತು 550ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಕೇವಲ 4.7 ಸೆಕೆಂಡಿನಲ್ಲಿ 100 ಕಿ.ಮೀ. ವೇಗ ಪಡೆಯಬಹುದು. ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಸವಾರಿ ಮಾಡಬಹುದು.

ಅಡಾಪ್ಟಿವ್ ಏರ್ ಸಸ್ಪೆನ್ಷನ್ ಮತ್ತು ಸಿಲಿಂಡರ್ ಆನ್ ಡಿಮಾಂಡ್ ಸಿಸ್ಟಮ್ ಮುಂತಾದ ಹೆಚ್ಚುವರಿ ವಿಶೇಷ ಫೀಚರುಗಳು ಆಡಿ ಎಸ್6 ಕಾರಿನಲ್ಲಿವೆ. ಸಿಲಿಂಡರ್ ಆನ್ ಡಿಮಾಂಡ್ ಫೀಚರು ಮೈಲೇಜ್ ಹೆಚ್ಚಿಸಲು, ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡಲು ನೆರವಾಗುತ್ತದೆ. ಹ್ಯಾಂಡ್ಲಿಂಗ್ ಗುಣಮಟ್ಟ ಹೆಚ್ಚಿಸಲು ಅಡಾಪ್ಟಿವ್ ಸಸ್ಪೆನ್ಷನ್ ನೆರವಾಗಲಿದೆ. ಅಲ್ಯುಮಿನಿಯಂ ಡೋರ್ ಮಿರರ್, 19 ಇಂಚಿನ ಎಸ್ ವಿನ್ಯಾಸದ ವೀಲುಗಳು, ಬೃಹತ್ ಏರ್ ಸ್ಪೈಲರ್ ಇತ್ಯಾದಿ ಫೀಚರುಗಳು ಆಡಿ ಎಸ್6 ಕಾರಿನ ಅಂದ ಹೆಚ್ಚಿಸಿವೆ.

ದೇಶದಲ್ಲಿ ನೂತನ ಆಡಿ ಎಸ್6 ಎಕ್ಸ್ ಶೋರೂಂ ದರ ಸುಮಾರು 60 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

More from DriveSpark

Article Published On: Monday, June 18, 2012, 12:47 [IST]
English summary
With German luxury carmaker Audi continuing with its expansion plan in India, the latest news is that the company is planning to launch the Sports series S6 model by November this year. Expect the car to be priced around Rs 60 lakhs when launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+