ಆಗಸ್ಟ್ 3ರಂದು ಆಡಿ ಎ8ಎಲ್ 4.2 ಟಿಡಿಐ ಆಗಮನ
ಸದ್ಯ ಮಾರುಕಟ್ಟೆಯಲ್ಲಿ ಆಡಿ ಎ8ಎಲ್ ಮೂರು ಆವೃತ್ತಿಗಳು ಲಭ್ಯವಿದೆ. ಬೇಸ್ 3.0 ಟಿಡಿಐ ಕ್ಯೂಟ್ರೊ, ಮಧ್ಯಮ ಗಾತ್ರದ 4.2 ಎಫ್ಎಸ್ಐ ಪೆಟ್ರೋಲ್ ಮತ್ತು ಟಾಪ್ ಎಂಡ್ 6.3 ಲೀಟರಿನ ಡಬ್ಲ್ಯು12 ಕ್ವಾಟ್ರೊ ಆವೃತ್ತಿಗಳನ್ನು ಕಂಪನಿಯು ಈಗಾಗಲೇ ಪರಿಚಯಿಸಿದೆ.
ನೂತನ ಆಡಿ ಎ8ಎಲ್ ಡೀಸೆಲ್ ಐಷಾರಾಮಿ ಸೆಡಾನ್ ಕಾರು 4.2 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಹೊಂದಿರಲಿದೆ. ಇದು 340 ಅಶ್ವಶಕ್ತಿ ಮತ್ತು 760 ಎನ್ಎಂ ಟಾರ್ಕ್ ಪವರ್ ನೀಡುವುದಾಗಿ ಕಂಪನಿ ಪ್ರತಿಪಾದಿಸಿದೆ. ಈ ಕಾರಲ್ಲಿ ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಸಾಗಬಹುದಂತೆ. ಇದರಲ್ಲಿ 5.5 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಬಹುದಾಗಿದೆ.
ಹೊಸ 4.2 ಟಿಡಿಐ ಎಂಜಿನಿನ ಆಡಿ ಕಾರು ಪ್ರತಿಲೀಟರಿಗೆ 13.1 ಕಿ.ಮೀ. ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ಈ ಕಾರು ಎಂಟು ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. ಇದು ಆಲ್ ವೀಲ್ ಡ್ರೈವ್ ಸಿಸ್ಟಮ್ ಹೊಂದಿದೆ. ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಏರ್ ಬ್ಯಾಗ್ ಇತ್ಯಾದಿ ಸುರಕ್ಷತೆಯ ಫೀಚರುಗಳು ಹೇರಳವಾಗಿವೆ.
ಆಡಿ ಹೊಸ ಕಾರಿನ ಆಗಮನದ ಸಚಿತ್ರ ವರದಿಯನ್ನು ನಾಳೆ ಕನ್ನಡ ಡ್ರೈವ್ ಸ್ಪಾರ್ಕ್ ನೀಡಲಿದೆ.


Click it and Unblock the Notifications









