ಆಡಿ ಎ8ಎಲ್ 4.2 ರಸ್ತೆಗೆ, ದರ 1 ಕೋಟಿ ರು.ನಿಂದ ಆರಂಭ

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನೂತನ ಸ್ಪೋರ್ಟಿ ಆಡಿ ಎ8ಎಲ್ ಸೆಡಾನ್ ಕಾರನ್ನು ಪರಿಚಯಿಸಿದ್ದಾರೆ. ನೂತನ ಆಡಿ ಕಾರು ಶಕ್ತಿಶಾಲಿಯಾದ 4.2 ಲೀಟರಿನ ಟಿಡಿಐ ಎಂಜಿನ್ ಹೊಂದಿದೆ. ನೂತನ ಕಾರಿನ ಆರಂಭಿಕ ದರ 1 ಕೋಟಿ ರುಪಾಯಿ ಇದೆ.

"ಆಡಿ ನನ್ನ ಬೆಸ್ಟ್ ಕಾರು ಬ್ರಾಂಡ್. ಇದರಲ್ಲಿ ಎಲ್ಲಾ ಐಷಾರಾಮಿ ಫೀಚರುಗಳಿವೆ" ಎಂದು ಅಭಿಷೇಕ್ ಬಚ್ಚನ್ ಹೇಳುತ್ತಾರೆ. ಈ ಕಾರ್ಯಕ್ರಮದಲ್ಲಿ ಅಭಿಷೇಕ್ ಬಚ್ಚನ್ ನೂತನ ಕಾರನ್ನು ಬುಕ್ಕಿಂಗ್ ಕೂಡ ಮಾಡಲಿದ್ದಾರೆ. ಕಂಪನಿಯು ದೇಶದಲ್ಲಿ ಮೊದಲ ಕಾರನ್ನು ಇವರಿಗೆ ಡೆಲಿವರಿ ಮಾಡಲಿದೆಯಂತೆ.

ಸದ್ಯ ದೇಶದ ಕಾರು ಮಾರುಕಟ್ಟೆಯಲ್ಲಿ ಆಡಿ ಎ8ಎಲ್ ಮೂರು ಆವೃತ್ತಿಗಳು ಲಭ್ಯವಿದೆ. ಬೇಸ್ 3.0 ಟಿಡಿಐ ಕ್ಯೂಟ್ರೊ, ಮಧ್ಯಮ ಗಾತ್ರದ 4.2 ಎಫ್ಎಸ್ಐ ಪೆಟ್ರೋಲ್ ಮತ್ತು ಟಾಪ್ ಎಂಡ್ 6.3 ಲೀಟರಿನ ಡಬ್ಲ್ಯು12 ಕ್ವಾಟ್ರೊ ಆವೃತ್ತಿಗಳನ್ನು ಕಂಪನಿಯು ಮಾರಾಟ ಮಾಡುತ್ತಿದೆ.

ನೂತನ ಆಡಿ ಎ8ಎಲ್ ಡೀಸೆಲ್ ಐಷಾರಾಮಿ ಸೆಡಾನ್ ಕಾರು 4.2 ಲೀಟರಿನ ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. ಇದು 340 ಅಶ್ವಶಕ್ತಿ ಮತ್ತು 760 ಎನ್ಎಂ ಟಾರ್ಕ್ ಪವರ್ ನೀಡುವುದಾಗಿ ಕಂಪನಿ ಪ್ರತಿಪಾದಿಸಿದೆ.

ಆಡಿ ಎ8ಎಲ್ 4.2 ಕಾರಿನಲ್ಲಿ ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಸಾಗಬಹುದು. 5.5 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಲು ಸಾಧ್ಯವಿದೆ. ಇದು 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದ್ದು, ಆಲ್ ವೀಲ್ ಡ್ರೈವ್ ಸಿಸ್ಟಮ್ ಇದರ ವಿಶೇಷತೆ.

More from DriveSpark

Article Published On: Saturday, August 4, 2012, 13:19 [IST]
English summary
Audi, the German luxury car manufacturer, today unveiled the new Audi A8 L sedan with a powerful and sporty 4.2 TDI engine. The limousine sets new standards for luxury, with exceptional dynamics and efficiency. Equipped with a powerful 4.2 TDI engine, this luxury sedan will be available at all showrooms across India. The car is priced at INR 10,075,000 onwards (ex-showroom) onwards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+