ಐಶ್ವರ್ಯ ರೈ ಮಗ್ಳಿಗೆ ಆಡಲು ಆಡಿ ಎ8 ಕಾರು!
ಅಭಿಷೇಕ್ ಬಚ್ಚನ್ ಮಗಳು ಹುಟ್ಟಿದ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮವನ್ನು ಆಚರಿಸಲು ಅಭಿಷೇಕ್ ಆಡಿ ಎ8 ಪ್ರೀಮಿಯಂ ಸಲೂನ್ ಕಾರನ್ನು ಬುಕ್ಕಿಂಗ್ ಮಾಡಿದ್ದಾರೆ. ಐಶ್ ಹಾಗೂ ಅಭಿ ಅವರ ಹಸುಗೂಸು ಬೇಟಿ ಬಿ ಹೆಸರಲ್ಲಿ ಈ ಕಾರು ಖರೀದಿಸಲಾಗಿದೆ ಎಂದು ವರದಿಗಳು ಹೇಳಿವೆ.
ಎ ಅಕ್ಷರದಿಂದ ಆರಂಭವಾಗುವ ಆಡಿ ಎ8 ಕಾರು ಆಯ್ಕೆ ಮಾಡಿದಕ್ಕೂ ಯಾವುದೋ ಹಿನ್ನೆಲೆ ಇದೆ ಎನ್ನಲಾಗಿದೆ. ಗಮನಾರ್ಹವೆಂದರೆ ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್ ಹೆಸರು ಆರಂಭವಾಗುವುದು ಕೂಡ ಎ ಅಕ್ಷರದಿಂದ. ಹೀಗಾಗಿ ಆಡಿ ಎ8 ಕಾರು ಆಯ್ಕೆ ಮಾಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜರ್ಮನಿಯ ಕಾರು ಕಂಪನಿ ಆಡಿಯ ಪ್ರೀಮಿಯಂ ಸೆಡಾನ್ ಕಾರು ಎ8. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಇದರ ದರ ಸುಮಾರು 1.5 ಕೋಟಿ ರುಪಾಯಿ ಇದೆ.
ಮುಂಬೈ ಆಸ್ಪತ್ರೆಯಿಂದ ಮನೆಗೆ ಪ್ರಪ್ರಥಮ ಬಾರಿಗೆ ಹಸುಗೂಸು ಬೇಟಿ ಬಿ ಪ್ರಯಾಣ ಮಾಡಿದ್ದು ಕೂಡ ಆಡಿ ಕಾರಿನಲ್ಲಿ ಎನ್ನುವುದು ಕೂಡ ಇಲ್ಲಿ ಗಮನಿಸಬೇಕಾದ ವಿಷಯ. (ಸೆಲೆಬ್ರಿಟಿ ಕಾರು)


Click it and Unblock the Notifications









