ಅಮೆರಿಕ ಹಬ್ಬಕ್ಕೆ ಬೆಂಗಳೂರು ರವಿಪ್ರಕಾಶ್ ವಿಂಟೇಜ್ ಬ್ಯೂಟಿ
ಡಾ. ರವಿಪ್ರಕಾಶ್ ಈ ತಿಂಗಳು ತನ್ನೆರಡು ವಿಂಟೇಜ್ ಕಾರುಗಳಾದ 1930ರ ಡೆಲಾಗ್ ಡಿ 8 ಮತ್ತು 1907ರ ಲೊಕೊಮೊಬೈಲ್ ವೆಟರ್ನ್ ಕಾರನ್ನು ಕ್ಯಾಲಿಫೋರ್ನಿಯಾಕ್ಕೆ ಹಡಗಿನ ಮೂಲಕ ಸಾಗಿಸಲಿದ್ದಾರಂತೆ. ಅಲ್ಲಿಗೆ ಕಾರುಗಳು ತಲುಪಲು ಸುಮಾರು 40-45 ದಿನಗಳ ಅಗತ್ಯವಿದೆ.
ರವಿಪ್ರಕಾಶ್ ವೃತ್ತಿಯಲ್ಲಿ ಡಾಕ್ಟರ್. ರೋಗಿಗಳು ಮಾತ್ರವಲ್ಲದೇ ಹಳೆಯ ಕಾರುಗಳ ಕುರಿತೂ ಇವರು ಕೇರ್ ತೆಗೆದುಕೊಳ್ಳುತ್ತಾರೆ. ಇವರು ಮೈಸೂರು ರಾಮಕೃಷ್ಣ ವಿದ್ಯಾಲಯದ ಹಳೆ ವಿದ್ಯಾರ್ಥಿ. ಅಲ್ಲಿ ಎಂಬಿಬಿಎಸ್ ಮತ್ತು ಎಂಬಿಎ ಮುಗಿಸಿದ್ದರು. ಅವರಿಗಿಬ್ಬರು ಪುತ್ರಿಯರಿದ್ದಾರೆ. ಅವರಿಗೂ ಇವರಷ್ಟೇ ವಿಂಟೇಜ್ ಕಾರು ಕ್ರೇಝು ಇದೆಯಂತೆ.
ರವಿಪ್ರಕಾಶ್ ಸಂಗ್ರಹದಲ್ಲಿ ಸುಮಾರು 180ಕ್ಕೂ ಹೆಚ್ಚು ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳಿಯಂತೆ!. ಅವರಲ್ಲಿ ಉದಯಪುರದ ಮಹಾರಾಜ ಬಳಸಿರುವ 1962ರ ಜಾಗ್ವಾರ್ ಕಾರಿದೆ. 1947ರ ಡೈಮ್ಲಾರ್, ಅಮೆರಿಕದ ರಾಕರ್ 88, ಫೋರ್ಡ್, ಸನ್ ಬೀಮ್ ಮತ್ತು ಮರ್ಸಿಡಿಸ್ ಬೆಂಝ್ ಮುಂತಾದ ಕಂಪನಿಗಳ ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳಿವೆ.
ಪ್ರತಿವರ್ಷ ನಡೆಯುತ್ತಿರುವ ವಿಂಟೇಜ್ ಕಾರು ರಾಲಿಯಲ್ಲಿ ರವಿಪ್ರಕಾಶ್ ಪತ್ನಿ ಶಬೀನಾ ಡ್ರೈವರ್ ಸೀಟಿನಲ್ಲಿ ಕುಳಿತುಕೊಳ್ಳುತ್ತಾರಂತೆ. ವಿಂಟೇಜ್ ಕಾರುಗಳ ನಿರ್ವಹಣೆ ಸುಲಭವಲ್ಲ. ಡಾಕ್ಟರ್ ರವಿ ಪ್ರಕಾಶ್ ಬಳಿಯಲ್ಲಿರುವ ಕೆಲವು ವಿಂಟೇಜ್ ಕಾರುಗಳು ಈಗಲೂ ಸ್ವಸ್ಥ ಸ್ಥಿತಿಯಲ್ಲಿವೆ.
ಕನ್ನಡ ಚಿತ್ರನಟರಾದ ಅಂಬರೀಷ್, ವಿಷ್ಣುವರ್ಧನ್ ಮತ್ತು ರವಿಚಂದ್ರನ್ ಚಿತ್ರಗಳಲ್ಲಿ ಈ ವಿಂಟೇಜ್ ಕಾರುಗಳು "ಆಕ್ಟ್" ಮಾಡಿವೆಯಂತೆ. ಕಮಲ ಹಾಸನ್ ಚಿತ್ರವೊಂದರಲ್ಲೂ ಇವರ ವಿಂಟೇಜ್ ಕಾರುಗಳನ್ನು ಬಳಸಲಾಗಿತ್ತು. ಅವರ ಕಾರುಗಳ ನಂಬರ್ ಪ್ಲೇಟಿನಲ್ಲಿ 9 ಅಂಕಿ ಇರುವುದು ಇನ್ನೋಂದು ವಿಶೇಷ.
ಅಮೆರಿಕದಲ್ಲಿ ಬೃಹತ್ ವಾಹನ ಹಬ್ಬ 1950ರಲ್ಲಿ ಆರಂಭವಾಗಿತ್ತು. ಇಲ್ಲಿ ಕ್ಲಾಸಿಕ್ ಮತ್ತು ವಿಂಟೇಜ್ ಕಾರುಗಳ ಪ್ರದರ್ಶನ, ಹರಾಜು ಪ್ರಕ್ರಿಯೆ ಮತ್ತು ಹೊಸ ಕಾರುಗಳ ಪ್ರದರ್ಶನ ಇರಲಿದೆ. ಪ್ರತಿಷ್ಠಿತ ಅಮೆರಿಕ ವಾಹನ ಹಬ್ಬದಲ್ಲಿ ಭಾಗವಹಿಸಲಿರುವ ರಾಜ್ಯದ ಡಾ. ರವಿಪ್ರಕಾಶ್‌ಗೆ ಕನ್ನಡ ಡ್ರೈವ್‌ಸ್ಪಾರ್ಕ್ ಕಡೆಯಿಂದ ಅಭಿನಂದನೆಗಳು.


Click it and Unblock the Notifications
