ಜಿಮ್ ಹಿನ್ನೆಲೆ: ಮತ್ತೆ ಟಿಂಟೆಡ್ ಗ್ಲಾಸ್ ಗಡುವು ಮುಂದೂಡಿಕೆ

ವಾಹನಗಳ ಮುಂಭಾಗದ ಮತ್ತು ಹಿಂಭಾಗದ ಕಿಟಕಿಗಳಲ್ಲಿ ಶೇಕಡ 70ರಷ್ಟು ವೀಕ್ಷಣೆ ಸಾಧ್ಯವಿರಬೇಕು. ಸೈಡ್ ಕಿಟಕಿಗಳಲ್ಲಿ ಕನಿಷ್ಠ ಶೇಕಡ 50ರಷ್ಟು ವೀಕ್ಷಣೆ ಸಾಧ್ಯವಿರಬೇಕು ಎಂದು 1989ರ ವಾಹನ ಕಾಯಿದೆಯಲ್ಲಿ ತಿಳಿಸಲಾಗಿದೆ. ಇದನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಿಯ ಆಡಳಿತ ಪ್ರದೇಶಗಳು ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು.
ದೆಹಲಿ ಮತ್ತು ಮುಂಬೈ ಪೊಲೀಸರು ಈ ಕಾನೂನನ್ನು ತಕ್ಷಣದಿಂದಲೇ ಅನುಷ್ಠಾನಕ್ಕೆ ತಂದಿದ್ದರು. ಚೆನ್ನೈನಲ್ಲಿ ಮೇ 19ರಂದು ಟಿಂಟೆಡ್ ಗ್ಲಾಸ್ ಬ್ಯಾನ್ ಮಾಡಲಾಗಿತ್ತು. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆರಂಭದಲ್ಲಿ ಮೇ 19ರವರೆಗೆ ಗಡುವು ನೀಡಲಾಗಿತ್ತು
ಆದರೆ ವಾಹನ ಮಾಲಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ವಿನಂತಿ ಮೇರೆಗೆ ಟಿಂಟೆಡ್ ಗ್ಲಾಸ್ ನಿಷೇಧ ಗಡುವನ್ನು ಜೂನ್ 5ರವರೆಗೆ ವಿಸ್ತರಿಸಲಾಗಿತ್ತು. ನಿನ್ನೆ ಟಿಂಟೆಡ್ ಗ್ಲಾಸ್ ಉಲ್ಲಂಘಿಸಿದ 400ಕ್ಕೂ ಹೆಚ್ಚು ಜನರ ಮೇಲೆ ಬೆಂಗಳೂರು ಆರ್‌ಟಿಒ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದರು.
ಮೇ 9ರ ನಂತರ ಮೊದಲ ಬಾರಿಗೆ ಟಿಂಟೆಡ್ ಗ್ಲಾಸ್ ತೆಗೆಯದೇ ಸಿಕ್ಕಿಬಿದ್ದವರಿಗೆ 100 ರುಪಾಯಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಎರಡನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ಮತ್ತು ಮೂರನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ವಿಧಿಸಿ ಚಾಲನಾ ಪರವಾನಗಿ ರದ್ದು ಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Click it and Unblock the Notifications








