ಟಿಂಟೆಡ್ ಗ್ಲಾಸ್ ನಿಷೇಧ ನೀತಿ ಬಡವರಿಗೆ ಮಾತ್ರನಾ?

ಕಾರುಗಳ ಟಿಂಟೆಡ್ ಗ್ಲಾಸ್ ತೆಗೆಯುವಲ್ಲಿ ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ನಡುವೆ ತಾರತಮ್ಯ ಮಾಡುವ ದೆಹಲಿ ಪೊಲೀಸರ ಕ್ರಮವನ್ನು ಸುಪ್ರಿಂ ಕೋರ್ಟ್ ನಿನ್ನೆ(ಗುರುವಾರ) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

"ಕೇವಲ ಮಧ್ಯಮ ವರ್ಗದವರ ಕಾರುಗಳ ಟಿಂಟೆಡ್ ರಿಮೂವ್ ಮಾಡಲು ಮಾತ್ರ ಪೊಲೀಸರು ಅಸ್ಥೆ ವಹಿಸುತ್ತಿದ್ದಾರೆ. ಅಪಘಾತಗೊಂಡಿರುವ ಹಲವು ದುಬಾರಿ ಕಾರುಗಳ ಟಿಂಟೆಡ್ ಗ್ಲಾಸ್ ರಿಮೂವ್ ಮಾಡಲಾಗಿಲ್ಲ" ಎಂದು ನ್ಯಾಯಮೂರ್ತಿ ಸ್ವತಂತ್ರಕುಮಾರ್, ಎ.ಕೆ. ಪಟ್ನಾಯಕ್ ದ್ವಿಸದನ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.

1989ರ ವಾಹನ ಕಾಯಿದೆಯಲ್ಲಿ ಸೂಚಿಸಿದಂತೆ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಸುವುದನ್ನು ನಿಷೇಧಿಸುವ ಕಾನೂನನ್ನು ಮೇ 4ರಿಂದ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಕೋರ್ಟ್ ಆದೇಶಿಸಿತ್ತು.

ಆದರೆ ಇದನ್ನು ವಿರೋಧಿಸಿ ಸನ್ ಫಿಲ್ಮ್ ಕಂಪನಿಗಳು ದಾವೆ ಹೂಡಿದ್ದರು. ಈ ಅರ್ಜಿಗಳ ಆದೇಶವನ್ನು ಕಾಯ್ದಿಟ್ಟ ನ್ಯಾಯಾಲಯವು "ನಾವು ಇರುವ ಕಾಯ್ದೆಯನ್ನು ಹೇಳಿದ್ದೇವೆ ಹೊರತು, ಬದಲಾಯಿಸಿಲ್ಲ. ಬದಲಾಯಿಸಬೇಕೆಂದಿದ್ದರೆ ನೀವು ಶಾಸಕಾಂಗದ ಮೊರೆ ಹೋಗಬೇಕು" ಎಂದು ಸನ್ ಫಿಲ್ಮ್ ಕಂಪನಿ ಅರ್ಜಿದಾರರಿಗೆ ಸೂಚಿಸಿದೆ.

ಅಪಘಾತಗೊಂಡ ಹಲವು ವಾಹನಗಳಲ್ಲಿ ಟಿಂಟೆಡ್ ಗ್ಲಾಸ್ ಇರುವುದು ಪತ್ತೆಯಾಗಿರುವ ಕುರಿತು ಕೋರ್ಟ್ ಅಸಮಾಧಾನ ಸೂಚಿಸಿದೆ. ಟಿಂಟೆಡ್ ಗ್ಲಾಸ್ ತೆಗೆಯುವಂತೆ ಪೊಲೀಸರು ಮಧ್ಯಮ ವರ್ಗದವರಿಗೆ ಮಾತ್ರ ಆದೇಶ ಮಾಡುತ್ತಿದೆ. ಶ್ರೀಮಂತರಿಗೊಂದು, ಬಡವರಿಗೊಂದು ತಾರತಮ್ಯ ಪ್ರದರ್ಶಿಸುವುದು ಉಚಿತವಲ್ಲ ಎಂದು ಕೋರ್ಟ್ ಹೇಳಿದೆ.

ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯದ ಹೆಚ್ಚಿನ ಕಡೆ ಹಲವು ವಾಹನಗಳು ಟಿಂಟೆಡ್ ಗ್ಲಾಸ್ ರಿಮೂವ್ ಮಾಡದೆ ಇರುವುದನ್ನು ನೀವು ನೋಡಿರಬಹುದು. ಓದುಗರೆ ನಿಮಗೆ ಏನೆನಿಸುತ್ತದೆ. ಟಿಂಟೆಡ್ ಗ್ಲಾಸ್ ರಿಮೂವ್ ಮಾಡುವ ವಿಷಯದಲ್ಲಿ ಪೊಲೀಸರು ಬಡವರಿಗೊಂದು, ಶ್ರೀಮಂತರಿಗೊಂದು ನೀತಿ ಎಂಬಂತೆ ತಾರತಮ್ಯ ಮಾಡುತ್ತಾರೆಯೇ? ಅನಿಸಿಕೆ ಮುಕ್ತವಾಗಿ ತಿಳಿಸಿ.

More from DriveSpark

Article Published On: Friday, July 20, 2012, 17:21 [IST]
English summary
The supreme Court of India has slammed the partial enforcement of the ban of tinted car windows and it has observed VIPS are still using tinted galsses.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+