ಕಾರಿನ ಬಣ್ಣದ ಗಾಜು, ಡಿಎಲ್ ಕ್ಯಾನ್ಸಲ್ ಮಾಡ್ತಾರ?

ಸುಪ್ರಿಂಕೋರ್ಟ್ ನಿರ್ದೇಶನದ ಅನ್ವಯ ಬೆಂಗಳೂರು ಟ್ರಾಫಿಕ್ ಪೊಲೀಸರು ಕಾರುಗಳ ಬಣ್ಣದ ಗಾಜು ತೆಗೆಯದ ಕಾರು ಮಾಲಿಕರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಮೊದಲ ಬಾರಿ ಸಿಕ್ಕಿ ಬಿದ್ದವರಿಗೆ 100 ರುಪಾಯಿ ಮತ್ತು ಎರಡನೇ ಬಾರಿ ಸಿಕ್ಕಿಬಿದ್ದವರಿಗೆ 300 ರುಪಾಯಿ ದಂಡ ವಿಧಿಸುತ್ತಿದ್ದಾರೆ.

ಆದರೆ ಮೂರನೇ ಬಾರಿ ಸಿಕ್ಕಿ ಬಿದ್ದರೆ 300 ರುಪಾಯಿ ದಂಡ ಮತ್ತು ಚಾಲನೆ ಪರವಾನಿಗೆ ರದ್ದುಗೊಳಿಸಬಹುದು. ಆದರೆ ಬೆಂಗಳೂರು ಟ್ರಾಫಿಕ್ ಪೊಲೀಸರು ಇಲ್ಲಿವರೆಗೆ ಯಾವುದೇ ವಾಹನ ಮಾಲಿಕರ ವಿರುದ್ಧ ಈ ಕ್ರಮ ಕೈಗೊಂಡ ಮಾಹಿತಿ ದೊರಕಿಲ್ಲ. ಆದರೆ ಹೆಚ್ಚಿನ ಕಾರು ಮಾಲಿಕರು ಪರವಾನಿಗೆ ರದ್ದುಗೊಳ್ಳುವ ಭೀತಿಯಲ್ಲಿ ಟಿಂಟೆಡ್ ಗ್ಲಾಸ್ ತೆಗೆಯುತ್ತಿದ್ದಾರೆ.

"ವರದಿಗಳ ಪ್ರಕಾರ ಮೊದಲ ಎರಡು ಪ್ರಕರಣಗಳಿಗೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ. ಮೂರನೇ ಬಾರಿ ಸಿಕ್ಕಿಬಿದ್ದರೆ ಡ್ರೈವಿಂಗ್ ಲೈಸನ್ಸ್ ಮುಟ್ಟುಗೋಲು ಹಾಕುತ್ತಾರೆ. ಇಂತಹ ಸಮಸ್ಯೆ ಬೇಡವೆಂದು ಟಿಂಟೆಡ್ ಗ್ಲಾಸ್ ತೆಗೆದುಬಿಟ್ಟಿದ್ದೇನೆ" ಎಂದು ವಿಲ್ಸನ್ ಗಾರ್ಡನಿನ ನಿವಾಸಿ ಮನೋಜ್ ಗೌಡ ಹೇಳುತ್ತಾರೆ.

"ಸಾರಿಗೆ ಇಲಾಖೆಯೂ ಇಲ್ಲಿವರೆಗೆ ಬಣ್ಣದ ಫಿಲ್ಮ್ ಸಂಬಂಧಿ ಯಾವುದೇ ವಾಹನದ ಪರವಾನಿಗೆ ಮುಟ್ಟುಗೋಲು ಹಾಕಿಲ್ಲ. ಆದರೆ ವಾಹನ ಮಾಲಿಕರು ಈ ಕಾನೂನನ್ನು ಪಾಲಿಸದೇ ಮತ್ತೆ ಮತ್ತೆ ಸಿಕ್ಕಿ ಬಿದ್ದರೆ ಪರವಾನಿಗೆ ಮುಟ್ಟುಗೋಲು ಹಾಕುವಂತೆ ಆರ್ ಟಿಒಗೆ ರೆಕಮಂಡ್ ಮಾಡುತ್ತೇವೆ" ಎಂದು ಬೆಂಗಳೂರು ಸಂಚಾರ ಪೊಲೀಸ್ ವಿಭಾಗದ ಹೆಚ್ಚುವರಿ ಆಯುಕ್ತರು ಹೇಳಿದ್ದಾರೆ.

ಟಿಂಟೆಡ್ ಗ್ಲಾಸ್ ಕಾನೂನು ಉಲ್ಲಂಘನೆಗೆ ವಾಹನ ಪರವಾನಿಗೆ ರದ್ದುಗೊಳಿಸಬೇಕೆಂದಿಲ್ಲ ಎಂದು ಕಾನೂನು ಪರಿಣಿತರು ಮತ್ತು ಸಾರಿಗೆ ವಿಭಾಗದ ಅಧಿಕಾರಿಗಳು ಹೇಳುತ್ತಾರೆ ಎಂದು ವರದಿಗಳು ಹೇಳಿವೆ. ಈ ಕಾನೂನನ್ನು ಎಲ್ಲರೂ ಪಾಲಿಸುವಂತೆ ಮಾಡುವ ಕರ್ತವ್ಯವನ್ನು ಸಾರಿಗೆ ಇಲಾಖೆಗೆ ನೀಡಲಾಗಿದೆ ಎಂದು ಅವರು ಹೇಳುತ್ತಾರೆ.

More from DriveSpark

Article Published On: Monday, June 18, 2012, 14:01 [IST]
English summary
Sun Film:DLs To Be Cancelled For Repeated Offence? Legal experts and transport department officials also say that violation of this rule does not attract cancellation of driving licence. On police enforcing the Supreme Court ban on tinted glass, the ACP said that the Court had specifically directed the police to enforce the judgment by issuing challans and getting the film removed and they were only following the order.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+