ಕಾರ್ ಕಂಪನಿ ಹಾಕಿದ ಟಿಂಟೆಡ್ ಗ್ಲಾಸ್ ತೆಗೆಯಬೇಕೆ?
"ಕಾರುಗಳು ನೇರವಾಗಿ ಕಾರು ತಯಾರಿಕಾ ಕಂಪನಿಯಿಂದ ಟಿಂಟೆಡ್ ಗ್ಲಾಸಿನೊಂದಿಗೆ ಬಂದಿದ್ದರೆ, ಅದು ನಿಗದಿತ ಪಾರದರ್ಶಕತೆ ಹೊಂದಿದ್ದರೆ ಯಾವುದೇ ರೀತಿಯ ಟಿಂಟೆಡ್ ಗ್ಲಾಸ್ ಟ್ರಾಫಿಕ್ ಫೈನಿನಿಂದ ಮುಕ್ತವಾಗಿರುತ್ತದೆ" ಎಂದು ಇತ್ತೀಚೆಗೆ ರಾಜ್ಯದ ಟ್ರಾಫಿಕ್ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಎಂ.ಎ. ಸಲೀಂ ಸ್ಪಷ್ಟಪಡಿಸಿದ್ದಾರೆ.
ಕಾರು ಕಂಪನಿಯು ಅಳವಡಿಸಿರುವ ಟಿಂಟೆಡ್ ಗ್ಲಾಸ್ ರಿಮೂವ್ ಮಾಡಬೇಕಿಲ್ಲವೆನ್ನುವುದು ಈ ವರದಿಯ ಸಾರ. ಆದರೆ ಅದರಲ್ಲಿ ಶೇಕಡ 70ರಷ್ಟು ವೀಕ್ಷಣೆ ಸಾಧ್ಯವಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಾರು ಕಂಪನಿಗಳು ವಾಹನ ಕಾಯಿದೆಯ ಅನ್ವಯ ಟಿಂಟೆಡ್ ಫಿಲ್ಮ್ ಹಾಕಿರುತ್ತವೆ.
ಕಾರುಗಳ ಕಿಟಕಿಯ ಬಣ್ಣದ ಕಾಗದ ತೆಗೆಸುವಲ್ಲಿ ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ನಡುವೆ ತಾರತಮ್ಯ ಮಾಡುವ ದೆಹಲಿ ಪೊಲೀಸರ ಕ್ರಮವನ್ನು ಸುಪ್ರಿಂ ಕೋರ್ಟ್ ಇತ್ತೀಚೆಗೆ ಟೀಕಿಸಿತ್ತು. ಹಲವು ದುಬಾರಿ ಕಾರುಗಳಲ್ಲಿ ಟಿಂಟೆಡ್ ಗ್ಲಾಸ್ ಇರುವುದು ಕೋರ್ಟ್ ಗಮನಕ್ಕೆ ಬಂದಿತ್ತು.
ಕಾರಿನ ಕಿಟಕಿಯ ಬಣ್ಣದ ಫಿಲ್ಮ್ ತೆಗೆಯದೆ ಮೊದಲ ಬಾರಿ ಸಿಕ್ಕಿ ಬಿದ್ದವರಿಗೆ 100 ರುಪಾಯಿ ದಂಡ ವಿಧಿಸಲಾಗುತ್ತದೆ. ಟ್ರಾಫಿಕ್ ಪೊಲೀಸರು ಎರಡನೇ ಬಾರಿ ಸಿಕ್ಕಿಬಿದ್ದವರಿಗೆ 300 ರುಪಾಯಿ ದಂಡ ವಿಧಿಸುತ್ತಿದ್ದಾರೆ. ಆದರೆ ಮೂರನೇ ಬಾರಿ ಸಿಕ್ಕಿ ಬಿದ್ದರೆ 300 ರುಪಾಯಿ ದಂಡ ಮತ್ತು ಚಾಲನೆ ಪರವಾನಿಗೆ ರದ್ದುಗೊಳಿಸಬಹುದು.


Click it and Unblock the Notifications
