ಸಾಲದ ಸುಳಿಯಲ್ಲಿರುವ ಬಿಬಿಎಂಪಿಗೆ ಇದು ಬೇಕಿತ್ತಾ?
"ನಗರದ ಹೊರಭಾಗದಲ್ಲಿ ಓಡಾಡಲು ಹೊಸ ಕಾರುಗಳ ಅಗತ್ಯವಿದೆ" ಎಂದು ಇವರೆಲ್ಲರು ಬೇಡಿಕೆಯಿಟ್ಟಿದ್ದಾರೆ. ಇವರಿಗೆ ಈ ಹಿಂದೆ ನೀಡಿರುವ ಹಳೆ ಕಾರುಗಳನ್ನು ಅಧಿಕಾರಿಗಳಿಗೆ ನೀಡಲು ಉದ್ದೇಶಿಸಲಾಗಿದೆ. ಪ್ರಾಯಶಃ ಶೀಘ್ರದಲ್ಲಿ ಬಿಬಿಎಂಪಿ ಇನ್ನೋವಾ ಮತ್ತು ಕರೊಲ್ಲಾ ಆಲ್ಟಿಸ್ ಕಾರುಗಳನ್ನು ಖರೀದಿಸಬಹುದು. ಈ ನೆಪದಲ್ಲಿ ಈ ಕಾರುಗಳ ಬಗ್ಗೆ ತಿಳಿದುಕೊಳ್ಳೋಣ.
ಇನ್ನೋವಾ: ಟೊಯೊಟಾ ಕಂಪನಿಯ ಜನಪ್ರಿಯ ಎಂಪಿವಿ ಇನ್ನೋವಾ. ಇದರ ಆರಂಭಿಕ ದರ ಸುಮಾರು 9.40 ಲಕ್ಷ ರುಪಾಯಿ ಇದೆ. ಇದು ಏಳು ಮತ್ತು ಎಂಟು ಸೀಟಿನ ಆಯ್ಕೆಗಳಲ್ಲಿ ದೊರಕುತ್ತದೆ. ಟೊಯೊಟಾ ಇನ್ನೋವಾ ಕಾರು 2,494 ಸಿಸಿ ಎಂಜಿನಿನ 16 ಕವಾಟದ ಡಿಒಎಚ್ ಸಿ ಡೀಸೆಲ್ ಎಂಜಿನ್ ಹೊಂದಿದೆ. ಇದು 3,600 ಆವರ್ತನಕ್ಕೆ 102 ಅಶ್ವಶಕ್ತಿ ಮತ್ತು 1,400ರಿಂದ 3,600 ಆವರ್ತನಕ್ಕೆ 200 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಟೊಯೊಟಾ ಇನ್ನೋವಾ 2.5 ಲೀಟರಿನ ಡೀಸೆಲ್ ಆಯ್ಕೆಗಳಲ್ಲೂ ದೊರಕುತ್ತದೆ.
ಮೈಲೇಜ್: ಪೆಟ್ರೋಲ್ ಆವೃತ್ತಿಯು ಸಿಟಿ ರಸ್ತೆಯಲ್ಲಿ ಪ್ರತಿಲೀಟರಿಗೆ 8.3 ಕಿ.ಮೀ. ಮತ್ತು ಹೆದ್ದಾರಿಯಲ್ಲಿ 12.5 ಕಿ.ಮೀ. ಮೈಲೇಜ್ ನೀಡುತ್ತದೆ. ಡೀಸೆಲ್ ಇನ್ನೋವಾ ಕಾರು ಸಿಟಿ ರಸ್ತೆಯಲ್ಲಿ 10.2 ಕಿ.ಮೀ. ಮತ್ತು ಹೆದ್ದಾರಿಗಳಲ್ಲಿ 13.5 ಕಿ.ಮೀ. ಮೈಲೇಜ್ ನೀಡುತ್ತದೆ. (ಸಂಪೂರ್ಣ ವಿಮರ್ಶೆ ಓದಿ)
ಟೊಯೊಟಾ ಕಂಪನಿಯು ಇತ್ತೀಚೆಗೆ ಕರೊಲ್ಲಾ ಆಲ್ಟಿಸ್ ಏರೊ ಎಂಬ ಹೊಸ ಆವೃತ್ತಿಯನ್ನು ಪ್ರಕಟಿಸಿದೆ. ಇದು ಹಳೆಯ ಆವೃತ್ತಿಗಳಿಗೆ ಹೋಲಿಸಿದರೆ ಸಾಕಷ್ಟು ಆಕರ್ಷಕವಾಗಿದೆ. ನೂತನ ಟೊಯೊಟಾ ಕರೊಲ್ಲಾ ಆಲ್ಟಿಸ್ ಯುರೊ 4 ಜೆ ಗ್ರೇಡ್ 1.8 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ ಏರೋ ಡೈನಾಮಿಕ್ ವಿನ್ಯಾಸ ಅತ್ಯುತ್ತಮ ಸವಾರಿಗೆ ಸಹಕರಿಸುತ್ತದೆ. ನೂತನ ಆಲ್ಟಿಸ್ ಏರೊ ಕಾರು ಸಿಲ್ವರ್ ಮೈಕಾ ಮೆಟಾಲಿಕ್ ಮತ್ತು ಕಪ್ಪು ಮೈಕಾ ಬಣ್ಣಗಳಲ್ಲಿ ದೊರಕುತ್ತದೆ. (ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ)


Click it and Unblock the Notifications









