ಡ್ರೈವಿಂಗ್‌ನಲ್ಲಿ ತೂಕಡಿಸಿದ್ರೆ ಎಬ್ಬಿಸೋ ಸ್ಲೀಪೊ-ಒ-ಮೀಟರ್
ಸ್ಟಿಯರಿಂಗ್ ವೀಲ್ ಮೇಲೆ ಸಡನ್ ಆಗಿ ಒತ್ತಡ ಬೀಳುವುದನ್ನು ಆಧರಿಸಿ ಈ ಸಾಧನವು ಕಾರ್ಯನಿರ್ವಹಿಸುತ್ತದೆ. ಅಂದರೆ ಚಾಲಕನು ತೂಕಡಿಕೆಯ ಸಮಯದಲ್ಲಿ ವರ್ತಿಸುವ ರೀತಿನೀತಿಯನ್ನು, ವಾಹನದ ವೇಗವನ್ನು ಈ ಸಾಧನವು ತಿಳಿದುಕೊಳ್ಳುತ್ತದೆ.
ಎಲ್ಲಾದರೂ ಚಾಲಕ ತೂಕಡಿಸುವ ಸೂಚನೆ ಈ ಸಾಧನಕ್ಕೆ ದೊರಕಿದರೆ ಡ್ಯಾಷ್ ಬೋರ್ಡಿನಲ್ಲಿರುವ ಚಹಾ ಕಪ್ ಚಿನ್ನೆಯಲ್ಲಿರುವ ಇಂಡಿಕೇಟರ್ ಉರಿಯುತ್ತದೆ. ಕಾರು ನಿಲ್ಲಿಸಿ ಕೊಂಚ ರೆಸ್ಟ್ ತೆಗೆದುಕೊಳ್ಳುವಂತೆ ಈ ಸಾಧನವು ಸೂಚನೆ ನೀಡುತ್ತದೆ.
ಚಾಲಕ ತೂಕಡಿಸಿದರೆ ಎಬ್ಬಿಸೋ ಹಲವು ಸಾಧನಗಳು ಈಗಾಗಲೇ ಹೈಎಂಡ್ ಕಾರುಗಳಲ್ಲಿವೆ. ಮರ್ಸಿಡಿಸ್ ಬೆಂಝ್ ಮತ್ತು ವೊಲ್ವೊ ಕಾರುಗಳು ಈಗಾಗಲೇ ಇಂತಹ ಸಾಧನವನ್ನು ಬಳಸುತ್ತಿವೆ.
"ಈಗ ಹೆಚ್ಚಿನ ವಾಹನಗಳು ಸ್ಟೀಯರಿಂಗ್ ವೀಲ್ ಸೆನ್ಸಾರ್‌ಗಳನ್ನು ಹೊಂದಿವೆ. ಇವು ಇಎಸ್‌ಪಿ ಸಿಸ್ಟಮ್ ಹೊಂದಿವೆ. ಸುರಕ್ಷತೆಯ ಸವಾರಿಗೆ ಇಂತಹ ಸಾಧನಗಳು ಸೂಕ್ತವಾಗಿವೆ" ಎಂದು ಪ್ರಾನ್ಸಿನ ರಾಬರ್ಟ್ ಬಾಷ್ ಅಧ್ಯಕ್ಷ ಗೆ ಮ್ಯೂಗಿಸ್ ಹೇಳಿದ್ದಾರೆ.
ಹಲವು ಸಂಚಾರ ನಿಯಂತ್ರಣ ಸಂಸ್ಥೆಗಳ ಪ್ರಕಾರ ಹೆಚ್ಚಿನ ವಾಹನ ಅಪಘಾತಗಳಿಗೆ ಕಾರಣ ಚಾಲಕನ ತೂಕಡಿಕೆ. ಬಸ್, ಟೆಂಪೊ ಇತ್ಯಾದಿ ವಾಹನಗಳ ಚಾಲಕರು ಕೆಲವೇ ಸೆಕೆಂಡ್ ಮಂಪರಿಗೆ ಬಿದ್ದು, ವಾಹನವನ್ನು ಕಮರಿಗೆ ಬೀಳಿಸಿದ ಘಟನೆಗಳು ಆಗಾಗ ನಡೆಯುತ್ತಿವೆ. ಹೀಗಾಗಿ ವಾಹನ ಸವಾರಿಯಲ್ಲಿ ನಿದ್ದೆಗೆ ಜಾರಬೇಡಿ.
ನೈಟ್ ಡ್ರೈವಿಂಗ್: ನಿಶಾಚರಿ ಚಾಲಕರಿಗೆ ಟಿಪ್ಸ್


Click it and Unblock the Notifications









