ಬಜೆಟ್ ಪರಿಣಾಮ: ಯಾವ ಕಾರು ಎಷ್ಟು ದುಬಾರಿ?
ಇನ್ನು ಮುಂದೆ ಸಣ್ಣಕಾರುಗಳಿಗೆ ಅಬಕಾರಿ ಸುಂಕ ಶೇಕಡ 10ಕ್ಕೆ ಬದಲಾಗಿ ಶೇಕಡ 12ರವರೆಗೆ ಇರಲಿದೆ. ಇದರಿಂದಾಗಿ ಮಾರುತಿ ಆಲ್ಟೊ, ಹ್ಯುಂಡೈ ಐ10, ಫೋರ್ಡ್ ಫಿಗೊ ಮತ್ತು ಟಾಟಾ ಇಂಡಿಕಾ ಮುಂತಾದ ಸಣ್ಣಕಾರುಗಳು ದುಬಾರಿಯಾಗಲಿವೆ.
ಅಂದಾಜು ಹೆಚ್ಚಳ: ಮಾರುತಿ ಸುಜುಕಿ ಆಲ್ಟೊ ಕಾರಿನ ದರ ಸುಮಾರು 4,500 ರು.ನಿಂದ 6 ಸಾವಿರ ರು. ತನಕ ಹೆಚ್ಚಾಗುವ ನಿರೀಕ್ಷೆಯಿದೆ. ಹ್ಯುಂಡೈ ಇಯಾನ್ ದರ 5 ಸಾವಿರ ರು.ಗಿಂತಲೂ ಹೆಚ್ಚು ದುಬಾರಿಯಾಗಲಿದೆ. ಮಾರುತಿ ಸ್ವಿಫ್ಟ್ ದರ 8-11 ಸಾವಿರ ರು. ಹೆಚ್ಚಾಗುವ ಅಂದಾಜಿದೆ.
ಮಾರುತಿ ಡಿಜೈರ್ ದರ ಕೂಡ 8-13 ಸಾವಿರ ರು.ವರೆಗೆ ಏರಿಕೆ ಕಾಣುವ ಸಾಧ್ಯತೆಯಿದೆ. ಹ್ಯುಂಡೈ ವೆರ್ನಾ ದರ 11,500 ರು.ಗಿಂತಲೂ ಹೆಚ್ಚಳ ಕಾಣುವ ನಿರೀಕ್ಷೆಯಿದೆ. ಹೋಂಡಾ ಸಿಟಿ ದರ 12-15 ಸಾವಿರ ತುಟ್ಟಿಯಾಗುವ ಸಾಧ್ಯತೆಯಿದೆ.
ಟೊಯೊಟಾ ಕೊರೊಲಾ ದರ 26,500 ರು.ನಿಂದ 35,200 ರು. ಏರಿಕೆ ಕಾಣಲಿದೆ. ಟೊಯೊಟಾ ಫಾರ್ಚ್ಯುನರ್ ದರ 80 ಸಾವಿರ ರು. ಹೆಚ್ಚಳವಾಗಲಿದೆ. ಜನಪ್ರಿಯ ಎಸ್ ಯುವಿ ಮಹೀಂದ್ರ ಎಕ್ಸ್ ಯುವಿ5ಒಒ ದರ ಸುಮಾರು 35 ಸಾವಿರ ರುಪಾಯಿ ಏರಿಕೆ ಕಾಣುವ ನಿರೀಕ್ಷೆಯಿದೆ. ಮರ್ಸಿಡಿಸ್ ಸಿ ಕ್ಲಾಸ್ ಕಾರುಗಳು ಸುಮಾರು ಒಂದುವರೆ ಲಕ್ಷ ರುಪಾಯಿಯಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









