ಚಾಲಕ ನಹೀ: ಕಾರು ಡ್ರೈವಿಂಗ್ ಮಾಡುವ ಫೋನ್ App

ಈಗಾಗಲೇ ಮಾತನಾಡುವ ಕಾರುಗಳ ಬಗ್ಗೆ ನೋಡಿದ್ದೇವೆ. ಆಸ್ಟ್ರೇಲಿಯಾದ ಗ್ರಿಫಿಥ್ ಯುನಿವರ್ಸಿಟಿಯ ಸಂಶೋಧಕರೊಬ್ಬರು ಮಾನವನ ಹಸ್ತಕ್ಷೇಪವಿಲ್ಲದೇ ಚಲಿಸುವ ಎಲೆಕ್ಟ್ರಿಕ್ ಕಾರೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಆಂಡ್ರಾಯ್ಡ್ ಸ್ಮಾರ್ಟ್ ಫೋನಿನಲ್ಲಿರುವ ಸಾಫ್ಟ್ ವೇರ್ ಮೂಲಕ ಈ ಕಾರು ಚಾಲನೆಯಾಗುತ್ತದೆ.

ಭವಿಷ್ಯದ ಸ್ವಯಂಚಾಲಿತ ವಾಹನಗಳ ಅನ್ವೇಷಣೆಗೆ ಸಂಸ್ಥೆಯ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನೂತನ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿರುವುದಾಗಿ ಸಂಶೋಧಕ ಡಾ. ಜುನ್ ಜೊ ಹೇಳಿದ್ದಾರೆ. "ಭವಿಷ್ಯದ ಕಾರುಗಳಲ್ಲಿ ಡ್ರೈವರುಗಳು ಚಾಲನೆ ಮಾಡುತ್ತ ಸಮಯ ವ್ಯರ್ಥ ಮಾಡುವ ಅಗತ್ಯವಿರುವುದಿಲ್ಲ"ವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ನಿಮ್ಮ ಟೈಂ ಟೇಬಲಿಗೆ ತಕ್ಕಂತೆ ಸ್ವಯಂಚಾಲೀತ ಕಾರುಗಳು ನಿಮ್ಮ ಮನೆ ಮುಂದೆ ಅಥವಾ ಕಚೇರಿ ಬಂದು ನಿಲ್ಲಲಿವೆ. ನೀವು ಹತ್ತಿ ಕುಳಿತರೆ ಸಾಕು. ನೀವು ಸೇರಬೇಕಾದ ಸ್ಥಳದ ಮಾಹಿತಿಗೆ ತಕ್ಕಂತೆ ಕೊಂಡೊಯ್ದು ಬಿಡಲಿವೆ. ಡ್ರೈವಿಂಗ್ ಮಾಡುವ ಕಷ್ಟವಿರುವುದಿಲ್ಲ" ಎಂದು ಜುನ್ ಜೊ ಭವಿಷ್ಯದ ಸ್ವಯಂಚಾಲಿತ ಕಾರುಗಳ ಪರಿಕಲ್ಪನೆಯನ್ನು ತೆರೆದಿಟ್ಟಿದ್ದಾರೆ.

ಈ ಕಾರುಗಳಲ್ಲಿ ಸ್ಮಾರ್ಟ್ ಫೋನಿನ ಕ್ಯಾಮಾರವನ್ನು ರಸ್ತೆಯ ಮುಂಭಾಗ ಕಾಣಿಸುವಂತೆ ಇಡಬೇಕಂತೆ. ಸ್ಮಾರ್ಟ್ ಫೋನಿನಲ್ಲಿರುವ ಅಪ್ಲಿಕೇಷನ್ ಕಾರಿನಲ್ಲಿರುವ ಕಂಪ್ಯೂಟರ್ ಸಾಧನವೊಂದಕ್ಕೆ ಮಾಹಿತಿ ರವಾನಿಸುತ್ತದೆಯಂತೆ. ಈಗಾಗಲೇ ಯುಎಸ್ ಬಿ ಮೂಲಕ ಸ್ಮಾರ್ಟ್ ಫೋನ್ ಕನೆಕ್ಟ್ ಮಾಡಿ ಕಾನ್ಸೆಪ್ಟ್ ಕಾರನ್ನು ಚಲಾಯಿಸಿ ಜುನ್ ಜೋ ತೋರಿಸಿಕೊಟ್ಟಿದ್ದಾರೆ.

ಅಂದಹಾಗೆ ಮಾತನಾಡುವ ಕಾರುಗಳ ಕುರಿತಾದ ಲೇಖನ ಓದಿದ್ದೀರಾ? ಇಲ್ಲಾಂದ್ರೆ ಈಗ್ಲೇ ಓದಿಬಿಡಿ.

More from DriveSpark

Article Published On: Thursday, August 23, 2012, 13:06 [IST]
English summary
Australia Griffith University Researcher Dr Jun Jo built an electric car that driving by software running on Android smartphone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+