ಕಾರೇ ಗಣಕ, ಕಾರೇ ಮೊಬೈಲ್, ವಾರೇ ವ್ಹಾ..!
ಈ ಕಾರು ಆಪ್ ಮೂಲಕ ಸುರಕ್ಷಿತವಾಗಿ ವಾಹನ ಸವಾರಿ ಮಾಡಬಹುದು. ಇಂತಹ ಅಪ್ಲಿಕೇಷನ್ ಗಳ ಮೂಲಕವೇ ಕಾರನ್ನು ನಿಯಂತ್ರಿಸಬಹುದು. ಜೊತೆಗೆ ಈ ಆಪ್ ಗಳು ನ್ಯಾವಿಗೇಷನ್ ಮತ್ತು ಸ್ಥಳೀಯ ಪರಿಸರದ ಮಾಹಿತಿಗಳನ್ನೂ ನೀಡಲಿವೆ. ಇದರೊಂದಿಗೆ ವಿಡಿಯೋ ಡೌನ್ ಲೋಡ್, ಮ್ಯೂಸಿಕ್, ಗೇಮ್ ಇತ್ಯಾದಿ ಮನರಂಜನೆ ಅಂಶಗಳೂ ಇದರಲ್ಲಿರಲಿವೆ.
"ಕಂಪ್ಯೂಟರ್ ಪ್ಲಾಟ್ ಫಾರ್ಮ್ ಮೂಲಕ ಕಾರ್ಯನಿರ್ವಹಿಸುವ ಭವಿಷ್ಯದ ಕಾರುಗಳಿಗೆ ಅಪ್ಲಿಕೇಷನ್ ತಯಾರಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಭಾರತದ ವಿದ್ಯಾರ್ಥಿಗಳನ್ನು ಮಾತುಕತೆ ನಡೆಸಿದ್ದು, ಭಾರತದ ಕಾರು ಮಾರುಕಟ್ಟೆಗೆ ಅಪ್ಲಿಕೇಷನ್ ಗಳನ್ನು ತಯಾರಿಸುವಂತೆ ತಿಳಿಸಿದ್ದೇವೆ. ಫೋರ್ಡ್ ಫಿಗೊಗೆ ಇಂತಹ ಅಪ್ಲಿಕೇಷನ್ ಅಳವಡಿಸಲು ಯತ್ನಿಸುತ್ತಿದ್ದೇವೆ" ಎಂದು ಫೋರ್ಡ್ ತಿಳಿಸಿದೆ.
2015ಕ್ಕೆ ಆಟೋಮೊಟಿವ್ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆ 280 ಕೋಟಿಗೆ ತಲುಪಲಿದೆ ಎಂದು ಎಬಿಐ ರಿಸರ್ಚ್ ಸಂಸ್ಥೆ ಅಂದಾಜಿಸಿದೆ. ಈಗ ಈ ಸಂಖ್ಯೆ 14 ಲಕ್ಷ ಇದೆ. ಕಾರು ಕಂಪನಿಗಳು ಹೆಚ್ಚು ಹೆಚ್ಚು ಆಕರ್ಷಕ ಆಪ್ ಅಭಿವೃದ್ಧಿಪಡಿಸುವ ಮೂಲಕ ಗ್ರಾಹಕರನ್ನು ಸೆಳೆಯಬೇಕಿದೆ ಎಂದು ಎಬಿಐ ಸಂಸ್ಥೆ ಹೇಳಿದೆ.
ಆಪಲ್ ಮತ್ತು ಗೂಗಲ್ ಇಂತಹ ಅಪ್ಲಿಕೇಷನ್ ಗಳನ್ನು ಪ್ರಾಯೋಗಿಕವಾಗಿ ಅಭಿವೃದ್ಧಿಪಡಿಸಿ ಯಶಸ್ವಿಯಾಗಿರುವುದರಿಂದ ಹೆಚ್ಚಿನ ಕಾರು ಕಂಪನಿಗಳು ಎಚ್ಚೇತ್ತಿವೆ. ಮೊಬೈಲ್ ಅಪ್ಲಿಕೇಷನ್ ಗಳ ಮೂಲಕ ನೀವು ನಿಮ್ಮ ಕಾರನ್ನು ನಿಯಂತ್ರಿಸುವ ದಿನಗಳು ದೂರವಿಲ್ಲ.(ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications









