ಗೇರಿಲ್ಲದ ಸ್ಕೂಟರಿಗೆ ಪ್ರಪ್ರಥಮ ಎಂಜಿನ್ ಆಯಿಲ್
ಸಾಂಪ್ರದಾಯಿಕ ಬೈಕುಗಳ ಎಂಜಿನ್ ಆಯಿಲಿಗೆ ಹೋಲಿಸಿದರೆ ಗೇರಿಲ್ಲದ ಸ್ಕೂಟರುಗಳಿಗೆ ಭಿನ್ನ ಎಂಜಿನ್ ಆಯಿಲ್ ಅಗತ್ಯವಿರುತ್ತದೆ. ಕಡಿಮೆ ಫ್ರಿಕ್ಷನ್ ಉಂಟು ಮಾಡುವ ಮತ್ತು ಹೆಚ್ಚುವರಿ ಬಿಸಿ ನಿಯಂತ್ರಣ ಮಾಡುವ ಸಾಮರ್ಥ್ಯವನ್ನು ನೂತನ ಕ್ಯಾಸ್ಟ್ರೊಲ್ ಆ್ಯಕ್ಟಿವ್ ಸ್ಕೂಟರ್ ಎಂಜಿನ್ ಆಯಿಲ್ ಹೊಂದಿದೆ.
"ಗೇರಿಲ್ಲದ ಸ್ಕೂಟರುಗಳಿಗೆ ವಿಶೇಷ ಎಂಜಿನ್ ಆಯಿಲ್ ಅಗತ್ಯವಿದೆ ಎಂದು ಹೆಚ್ಚಿನ ಗ್ರಾಹಕರಿಗೆ ಅರಿವಿಲ್ಲ. ಆಧುನಿಕ ಗೇರ್ ಲೆಸ್ ಸ್ಕೂಟರುಗಳ ಎಂಜಿನುಗಳ ಅತ್ಯುತ್ತಮ ಕಾರ್ಯಕ್ಷಮತೆಗೆ ಕಡಿಮೆ ಪ್ರಿಕ್ಷನ್ ಆಯಿಲ್ ಸಾಕಾಗುತ್ತದೆ. ನೂತನ ಆಕ್ಟಿವ್ ಸ್ಕೂಟರ್ ಎಂಜಿನ್ ಆಯಿಲನ್ನು ಗೇರಿಲ್ಲದ ಸ್ಕೂಟರುಗಳಿಗಾಗಿ ವಿಶೇಷವಾಗಿ ರೂಪಿಸಲಾಗಿದೆ" ಎಂದು ಕ್ಯಾಸ್ಟ್ರೊಲ್ ದ್ವಿಚಕ್ರವಾಹನ ಆಯಿಲ್ ವಿಭಾಗದ ಮ್ಯಾನೆಜರ್ ಕೆಬರ್ ಆಪ್ಟೆ ಹೇಳಿದ್ದಾರೆ.
ಕ್ಯಾಸ್ಟ್ರೊಲ್ ಆ್ಯಕ್ಟಿವ್ ಸ್ಕೂಟರ್ ಆಯಿಲಿನಲ್ಲಿರುವ ಸ್ಕೂಟೆಕ್ ತಂತ್ರಜ್ಞಾನದಿಂದಾಗಿ ಎಂಜಿನ್ ಬಾಳಿಕೆ ವೃದ್ಧಿಯಾಗುತ್ತದೆ. ಜೊತೆಗೆ ಎಂಜಿನ್ ದಕ್ಷತೆ ಮತ್ತು ಪಿಕಪ್ ದೀರ್ಘಕಾಲ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಅಂದ ಹಾಗೆ 800 ಎಂಎಲ್ ಕ್ಯಾಸ್ಟ್ರೋಲ್ ಸ್ಕೂಟರ್ ಆಯಿಲ್ ದರ 245 ರುಪಾಯಿ. ಹೋಂಡಾ, ಹೀರೋ ಹೋಂಡಾ, ಮಹೀಂದ್ರ, ಟಿವಿಎಸ್ ಕಂಪನಿಗಳ ಸ್ಕೂಟರುಗಳು ಸೇರಿದಂತೆ ಹೆಚ್ಚಿನ ಗೇರಿಲ್ಲದ ಸ್ಕೂಟರುಗಳಿಗೆ ಈ ಆಯಿಲ್ ಸೂಕ್ತವಾಗಿದೆ.


Click it and Unblock the Notifications









