ವಿಐಪಿ ಕಾರ್ ನಂಬರಿಗೆ 26 ಲಕ್ಷ ರು. ನೀಡಿದ ಸಿಂಗ್
ಬಿಲ್ಡರ್ ಅಮರ್ಜಿತ್ ಸಿಂಗ್ ಹೊಸದಾಗಿ ಕೋಟಿ ರು.ಗಿಂತಲೂ ದುಬಾರಿಯಾದ ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕಾರು ಖರೀದಿಸಿದ್ದ. CH-01-AP-0001 ಸಂಖ್ಯೆಗಾಗಿ ಈತ ಬರೋಬ್ಬರಿ 26.06 ಲಕ್ಷ ರುಪಾಯಿ ಪಾವತಿಸಿದ್ದಾನೆ. ಈ ದರಕ್ಕೆ ಮತ್ತೊಂದು ಎಂಟ್ರಿ ಲೆವೆಲ್ ಲಗ್ಷುರಿ ಕಾರು ಖರೀದಿಸಬಹುದಿತ್ತು ಅಲ್ವೆ?
ಜಂಡೀಗಢದ ವಾಹನ ಪರವಾನಿಗೆ ಮತ್ತು ನೋಂದಣಿ ವಿಭಾಗದಲ್ಲಿ ಇದು ದಾಖಲೆ ಮೊತ್ತದ ಹರಾಜಗಾಗಿದೆ. ಇಲ್ಲಿವರೆಗೆ ಇಷ್ಟು ದುಬಾರಿ ಮೊತ್ತಕ್ಕೆ ಯಾರೂ ನಂಬರ್ ಪ್ಲೇಟ್ ಖರೀದಿಸಿರಲಿಲ್ಲವಂತೆ. ಈ ರಿಜಿಸ್ಟ್ರೇಷನ್ ನಂಬರಿಗೆ ಅಸಲಿ ದರ ಕೇವಲ 25 ಸಾವಿರ ರುಪಾಯಿ. ಆದರೆ ಇದೇ ನಂಬರ್ ಹರಾಜಿನಲ್ಲಿ ಬಹುಬೇಡಿಕೆಯಿಂದ ಇಷ್ಟೊಂದು ದುಬಾರಿ ಮೊತ್ತಕ್ಕೆ ಹರಾಜಾಗಿದೆ.
ಇದಕ್ಕೂ ಮುನ್ನ ವ್ಯಕ್ತಿಯೊಬ್ಬರು 17 ಲಕ್ಷ ರುಪಾಯಿಗೆ ಲೈಸನ್ಸ್ ಪ್ಲೇಟ್ ನಂಬರ್ ಪಡೆದಿದ್ದರು. ಚಂಡೀಗಢದಲ್ಲಿ CH-01-AN-0001 ಸಂಖ್ಯೆಗಾಗಿ ಕೃಷಿಕ-ಉದ್ಯಮಿ ಜಗಜಿತ್ ಸಿಂಗ್ 17 ಲಕ್ಷ ರುಪಾಯಿ ನೀಡಿದ್ದರು. ಅವರು ತನ್ನ 85 ಲಕ್ಷ ರುಪಾಯಿಯ ಟೊಯೊಟಾ ಲ್ಯಾಂಡ್ ಕ್ರೂಷರಿಗೆ ಈ ನಂಬರ್ ಪ್ಲೇಟ್ ಖರೀದಿಸಿದ್ದರು.
26 ಲಕ್ಷ ರು.ಗೆ ನಂಬರ್ ಪ್ಲೇಟ್ ಹರಾಜಾಗಿರುವುದು ಮಂಗಳವಾರ. ಅಂದು ಸುಮಾರು 99 ನೋಂದಾಣಿ ಸಂಖ್ಯೆಗಳನ್ನು ಹರಾಜು ಮಾಡಲಾಗಿತ್ತು. ಇದರಿಂದ ಚಂಡೀಗಢ ಆರ್ ಟಿಒಗೆ ಒಟ್ಟು 69,21,200 ರು. ಸಂಗ್ರಹವಾಗಿದೆ. ಇದೇ ಹರಾಜಿನಲ್ಲಿ ಮತ್ತೊಬ್ಬ 4.5 ಲಕ್ಷ ರು. ನೀಡಿ CH 01-AP-0005 ಸಂಖ್ಯೆಯ ನೋಂದಾಣಿ ಸಂಖ್ಯೆ ಖರೀದಿಸಿದ್ದ. ದುಬೈನಲ್ಲಿ ಅಂದೊಮ್ಮೆ 18 ಕೋಟಿ ರು.ಗೆ ನಂಬರ್ ಪ್ಲೇಟೊಂದು ಬಿಕರಿಯಾಗಿತ್ತು.
ಓದಿ: 45 ಸಾವ್ರದ ಸ್ಕೂಟರಿಗೆ 12 ಲಕ್ಷ ರು.ನ ಫ್ಯಾನ್ಸಿ ನಂಬರ್>>


Click it and Unblock the Notifications









