ಕೋಟ್ಯಧಿಪತಿ ಅಲ್ಲ, 2 ಕೋಟಿ ರು. ಬಹುಮಾನದ ಬ್ಲಾಕ್ ಬಸ್ಟರ್!
ಇದು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಂತೆ ಅಲ್ಲ. ಅಥವಾ ಲಾಟರಿ ಮೂಲಕ ಗ್ರಾಹಕರೊಬ್ಬರು ಕೋಟಿ ರುಪಾಯಿ ಗೆಲ್ಲುವ ಅವಕಾಶವೂ ಅಲ್ಲ. ಒಟ್ಟಾರೆ ಜನರಲ್ ಮೋಟರ್ಸ್ ಕಂಪನಿಯು ಸುಮಾರು 2 ಕೋಟಿ ರುಪಾಯಿಯನ್ನು ಈ ಎರಡು ದಿನಗಳಲ್ಲಿ ಬಹುಮಾನ ರೂಪದಲ್ಲಿ ಗೆದ್ದ ಸಮಸ್ತ ಗ್ರಾಹಕರಿಗೆ ನೀಡಲಿದೆ.
ಮುಂಗಾರು ಮಳೆ ಇನ್ನೂ ಶುರುವಾಗಿಲ್ಲ. ಆದರೆ ಜನರಲ್ ಮೋಟರ್ಸ್ ಇಂಡಿಯಾ ಕಂಪನಿಯು ಬಹುಮಾನಗಳ ಸುರಿಮಳೆ ಸುರಿಸಲು ಆರಂಭಿಸಿದೆ. ಈ ವಾರಾಂತ್ಯದಲ್ಲಿ(ಮೇ 25ರಿಂದ ಮೇ 27ರವರೆಗೆ) ಷೆವರ್ಲೆ ಬೀಟ್ ಅಥವಾ ಷೆವರ್ಲೆ ಸ್ಪಾರ್ಕ್ ಕಾರು ಬುಕ್ ಮಾಡಿದರೆ ಭಾರಿ ಪ್ರಮಾಣದ ಬಹುಮಾನಗಳನ್ನು ನೀವು ಪಡೆಯಲಿದ್ದೀರಿ.
ಜನರಲ್ ಮೋಟರ್ಸ್ ಕಂಪನಿಯು ಕೆಲವೇ ಕೆಲವು ದಿನಗಳು ಮಾತ್ರ ಈ ಆಫರ್ ನೀಡಿದೆ. ಗೆದ್ದ ಗ್ರಾಹಕರುಗಳಿಗೆ ಸುಮಾರು 2 ಕೋಟಿ ರುಪಾಯಿ ಮೊತ್ತದ ಬಹುಮಾನವಿದೆ. ಇಷ್ಟು ಮಾತ್ರವಲ್ಲ, ಬುಕ್ಕಿಂಗ್ ಕೂಡ ಉಚಿತವಾಗಿ ಮಾಡಬಹುದು. ಅಂದ್ರೆ ಬುಕ್ಕಿಂಗ್ ಶುಲ್ಕವಿಲ್ಲ.
ಮೇ 25ರಿಂದ 27ನೇ ದಿನಾಂಕ, ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಷೆವರ್ಲೆ ಸ್ಪಾರ್ಕ್ ಮತ್ತು ಷೆವರ್ಲೆ ಬೀಟ್ ಖರೀದಿಸಬಹುದು. ಈ ದಿನಾಂಕದಂದು ಖರೀದಿಸಿ ಲಕ್ಕಿಡ್ರಾದಲ್ಲಿ ಗೆದ್ದವರಿಗೆ ಜನರಲ್ ಮೋಟರ್ಸ್ ಕಂಪನಿಯು ಎಲ್‌ಸಿಡಿ ಟೆಲಿವಿಷನ್, ಕ್ಯಾಮ್ ಕಾರ್ಡರ್, ಹೋಮ್ ಥಿಯೇಟರ್, ಡಿವಿಡಿ ಪ್ಲೇಯರ್ ಸೇರಿದಂತೆ ನೂರಾರು ಬಗೆಯ ಉಡುಗೊರೆಗಳನ್ನು ನೀಡಲಿದೆ.
ಷೆವರ್ಲೆ ಬ್ರಾಂಡ್ ಕಾರು ಖರೀದಿಸಲು ಯೋಜಿಸುತ್ತಿದ್ದವರು ತ್ವರೆ ಮಾಡಬಹುದು.


Click it and Unblock the Notifications









