ಒಂದು ಲಕ್ಷಕ್ಕೂ ಹೆಚ್ಚು ಷೆವರ್ಲೆ ಬೀಟ್ ಕಾರುಗಳಿಗೆ ವಾಪಾಸ್ ಕರೆ
ಅಮೆರಿಕ ಮೂಲದ ವಾಹನ ಸಂಸ್ಥೆ ಜನರಲ್ ಮೋಟಾರ್ಸ್ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಷೆವರ್ಲೆ ಬೀಟ್ ಕಾರುಗಳಿಗೆ ಹಿಂದಕ್ಕೆ ಕರೆ ನೀಡಿದೆ.
ಎಷ್ಟು ಸಂಖ್ಯೆ ವಾಪಾಸ್ ?
ಸದ್ಯ 1,10597 ಯುನಿಟ್ ಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ.

ಯಾವಾಗ ನಿರ್ಮಾಣ?
2010 ಡಿಸೆಂಬರ್ ತಿಂಗಳಿಂದ 2014 ಜುಲೈ ತಿಂಗಳ ಅವಧಿಯಲ್ಲಿ ನಿರ್ಮಾಣವಾಗಿರುವ ಬೀಟ್ ಮಾದರಿಯಲ್ಲಿ ತೊಂದರೆ ಕಾಣಿಸಿಕೊಂಡಿರುವ ಬಗ್ಗೆ ಶಂಕೆ ಬಯಲಾಗಿದೆ.
ಏನಿದು ಸಮಸ್ಯೆ?
ಕ್ಲಚ್ ಪೆಡೆಲ್ ಲಿವರ್ ನಲ್ಲಿ ದೋಷ ಕಾಣಿಸಿಕೊಂಡಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ಷೆವರ್ಲೆ ಬೀಟ್ ಕಾರುಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ.
ಡೀಸೆಲ್ ಮಾದರಿ
ಪ್ರಸ್ತುತ ಷೆವರ್ಲೆ ಬೀಟ್ ಡೀಸ್ ಮಾದರಿಗೆ ಮಾತ್ರ ಇದು ಅನ್ವಯವಾಗಲಿದೆ. ಪ್ರಸ್ತುತ ದೇಶದ್ಯಾಂತ ಸ್ಥಿತಗೊಂಡಿರುವ ಎಲ್ಲ 248 ಷೆವರ್ಲೆ ಶೋ ರೂಂಗಳಲ್ಲಿ ಚೆಕಪ್ ಮಾಡಲಾಗುವುದು.
ಇವೆಲ್ಲದರ ಮೂಲಕ ಗ್ರಾಹಕರ ಮೇಲಿನ ತನ್ನ ಬದ್ದತೆಯನ್ನು ಪ್ರದರ್ಶಿಸುವಲ್ಲಿ ಷೆವರ್ಲೆ ಯಶಸ್ವಿಯಾಗಿದೆ. ಶಂಕೆ ಇದ್ದಲ್ಲಿ ಗ್ರಾಹಕರು ಕೂಡಾ ಹತ್ತಿರದ ಡೀಲರ್ ಗಳನ್ನು ಸಂಪರ್ಕಿಸಬಹುದಾಗಿದೆ.


Click it and Unblock the Notifications








