2016 ಷೆವರ್ಲೆ ಬೀಟ್; ಒಂದು ಸಣ್ಣ ಕಾರಿನ ದೊಡ್ಡ ಕನಸು
ಷೆವರ್ಲೆ ಬೀಟ್ ಅಥವಾ ಸ್ಪಾರ್ಕ್ ಭಾರತದಲ್ಲಿ ಅಷ್ಟೇನೂ ಹೆಸರು ಮಾಡಿಲ್ಲ. ಕೆಲವೊಂದು ನಿರ್ದಿಷ್ಟ ಜಾಗತಿಕ ಮಾರುಕಟ್ಟೆಯನ್ನು ಬಿಟ್ಟರೆ ಷೆವರ್ಲೆ ಬೀಟ್ (ಸ್ಪಾರ್ಕ್) ಎಂಬ ಸಣ್ಣ ಕಾರಿನ ಕನಸು ಇನ್ನು ಹಗಲು ಕನಸಿನಂತೆಯೇ ಉಳಿದುಕೊಂಡಿದೆ.
ಹಾಗಿರುವಾಗ ಅಮೆರಿಕ ಮೂಲದ ಐಕಾನಿಕ್ ಜನರಲ್ ಮೋಟಾರ್ಸ್ ಸಂಸ್ಥೆಯು ಷೆವರ್ಲೆ ಬೀಟ್ (ಸ್ಪಾರ್ಕ್) ಹ್ಯಾಚ್‌ಬ್ಯಾಕ್ ಕಾರಿನ ಕನಸನ್ನು ನನಸಾಗಿಸಲು ಹೊರಟಿದೆ. ಇದರ ಮುಂದುವರಿದ ಭಾಗವೆಂಬಂತೆ ಎಲ್ಲ ಹೊಸತನದಿಂದ ಕೂಡಿರುವ ಬೀಟ್ ಕಾರು ಸಿದ್ಧಗೊಂಡಿದೆ.

ಇದರಂತೆ ಬಹುನಿರೀಕ್ಷಿತ ನ್ಯೂಯಾರ್ಕ್ ಆಟೋ ಶೋಗಿಂತಲೂ ಮುಂಚಿತವಾಗಿ 2016 ಷೆವರ್ಲೆ ಬೀಟ್ ಟೀಸರ್ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಇದು 2015 ಎಪ್ರಿಲ್ 2ರಂದು ನ್ಯೂಯಾರ್ಕ್‌ನಲ್ಲಿ ಪಾದಾರ್ಪಣೆ ಮಾಡಲಿದೆ.
ಹೊಸ ಕಾರು ಮಾರುಕಟ್ಟೆಯಲ್ಲಿ ಮೋಡಿ ಮಾಡಲಿದೆ ಎಂಬುದು ಸಂಸ್ಥೆಯ ನಂಬಿಕೆಯಾಗಿದೆ. ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಹೊಸ ಕಾರಿನ ವಿನ್ಯಾಸ ರಚಿಸಲಾಗಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವ ಸಾಧ್ಯತೆಗಳಿಲ್ಲ. ಇದು ಪೆಟ್ರೋಲ್, ಡೀಸೆಲ್ ಜೊತೆಗೆ ಸಿಎನ್‌ಜಿ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.
ಇದುವರೆಗೆ ಜಾಗತಿಕವಾಗಿ 1.1 ಮೀಲಿಟನ್ ಷೆವರ್ಲೆ ಬೀಟ್/ಸ್ಪಾರ್ಕ್ ಮಾದರಿಗಳನ್ನು ಮಾರಾಟ ಮಾಡಲಾಗಿದೆ. ಪ್ರಸ್ತುತ ಕಾರು ಭಾರತ ಹೊರತಾಗಿ 71 ಜಾಗತಿಕ ಮಾರುಕಟ್ಟೆಗಳಲ್ಲಿ ತನ್ನ ಸಾನಿಧ್ಯವನ್ನು ಹೊಂದಿದೆ. ಅಲ್ಲದೆ ದಕ್ಷಿಣ ಕೊರಿಯಾ, ಅಮೆರಿಕಾ ಹಾಗೂ ಮೆಕ್ಸಿಕೊದಲ್ಲಿ ಹೆಚ್ಚು ಹೆಸರು ಮಾಡಿದೆ.


Click it and Unblock the Notifications








