ಜಾಗತಿಕವಾಗಿ ಷೆವರ್ಲೆ ಬೀಟ್ 10 ಲಕ್ಷ ಯುನಿಟ್ ಮಾರಾಟ

Written By:

ಅಮೆರಿಕದ ಐಕಾನಿಕ್ ಜನರಲ್ ಮೋಟಾರ್ಸ್ ಕಾರು ಬ್ರಾಂಡ್ ಆಗಿರುವ ಷೆವರ್ಲೆ ಮಗದೊಂದು ಮೈಲುಗಲ್ಲು ಸ್ಥಾಪಿಸಿದ್ದು, ತನ್ನ ಜನಪ್ರಿಯ ಬೀಟ್ ಕಾರು ಜಾಗತಿಕವಾಗಿ 10 ಲಕ್ಷ ಯುನಿಟ್‌ಗಳ ಮಾರಾಟ ಗೆರೆ ದಾಟುವಲ್ಲಿ ಯಶಸ್ವಿಯಾಗಿದೆ.

ವಿದೇಶಿ ಮಾರುಕಟ್ಟೆಯಲ್ಲಿ ಸ್ಪಾರ್ಕ್ ಎಂದು ಗುರುತಿಸ್ಪಟ್ಟಿರುವ ಬೀಟ್ ಸಣ್ಣ ಕಾರು ವಿಭಾಗದಲ್ಲಿ ಮನ್ನಣೆಗೆ ಪಾತ್ರವಾಗಿದೆ. ಇದು ಭಾರತ ಮಾರುಕಟ್ಟೆಯನ್ನು 2009ನೇ ಇಸವಿಯಲ್ಲಿ ಪ್ರವೇಶಿಸಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಿರುವ ಬೀಟ್ ಭಾರತದಲ್ಲಿ ಮಾತ್ರವಾಗಿ 1,78,000 ಯುನಿಟ್‌ಗಳ ಮಾರಾಟ ದಾಖಲಿಸಿದೆ.

Chevrolet Beat

ದೇಶದ ಅತ್ಯಂತ ಇಂಧನ ಕ್ಷಮತೆಯ ಡೀಸೆಲ್ ಕಾರುಗಳಲ್ಲಿ ಗುರುತಿಸಿಕೊಂಡಿರುವ ಬೀಟ್ ಪ್ರತಿ ಲೀಟರ್‌ಗೆ 25.44 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಇದರ ವಿನ್ಯಾಸ ಯುವ ಖರೀದಿಗಾರರಲ್ಲಿ ಹೆಚ್ಚು ಪ್ರೀತಿಗೆ ಪಾತ್ರವಾಗಿದೆ ಎಂದು ಜನರಲ್ ಮೋಟಾರ್ಸ್ ಇಂಡಿಯಾ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಅರವಿಂದ್ ಸಕ್ಸೇನಾ ತಿಳಿಸಿದ್ದಾರೆ.

ಸಣ್ಣ ಕಾರು ಆಗಿರುವ ಹೊರತಾಗಿಯೂ ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಎತ್ತರ ಹೊಂದಾಣಿಸಬಹುದಾದ ಚಾಲಕ ಸೀಟು ಮತ್ತು ಹೊಸ ಬೆಳ್ಳಿ ಒಳಮೈ ಥೀಮ್‌ಗಳನ್ನು ಬೀಟ್ ಒದಗಿಸುತ್ತಿದೆ.

ಇಂದು 71 ಜಾಗತಿಕ ಮಾರುಕಟ್ಟೆಗಳಲ್ಲಿ ಬೀಟ್ ಲಭ್ಯವಿದೆ. ಇದು ದಕ್ಷಿಣ ಕೊರಿಯಾ, ಅಮೆರಿಕ ಹಾಗೂ ಮೆಕ್ಸಿಕೊದಲ್ಲಿ ಹೆಚ್ಚು ಮನ್ನಣೆಗೆ ಪಾತ್ರವಾಗಿದೆ. ಅಲ್ಲದೆ ಇತ್ತೀಚೆಗಷ್ಟೇ ದಕ್ಷಿಣ ಅಮೆರಿಕದ ಚಿಲಿ ರಾಷ್ಟ್ರಕ್ಕೆ ಭಾರತದ ತಲೆಗಾಂವ್ ಘಟಕದಿಂದ ರಫ್ತು ಕಾರ್ಯವನ್ನು ಆರಂಭಿಸಿತ್ತು.

English summary
Chevrolet has reached a big number in mini car sales, surpassing 1 million sales worldwide of the Beat which is known as Spark in foreign markets. This demonstrates the growing acceptance of Chevrolet’s small car lineup attracting more people to the brand around the world. 
Story first published: Friday, October 10, 2014, 12:46 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark