ಇನ್ನೋವಾಕ್ಕೆ ಸೆಡ್ಡು, ಹೊಸ ಷೆವರ್ಲೆ ಕಾರು ಬಂತು ನೋಡಿ..

ಜನರಲ್ ಮೋಟರ್ಸ್ ಫ್ಯಾಮಿಲಿಯ ಷೆವರ್ಲೆ ಬ್ರಾಂಡಿನ ಕಾರುಗಳನ್ನು ಇಷ್ಟಪಡುವರಿಗೆ ಅನಿರೀಕ್ಷಿತವಾದ ಸುದ್ದಿಯೊಂದು ಇಲ್ಲಿದೆ. ಕಂಪನಿಯು ಹೆಚ್ಚು ಹೈಪ್ ಉಂಟುಮಾಡದೇ ನೂತನ ಎಂಪಿವಿ ತವೆರಾ ನಿಯೊ 3 ಕಾರನ್ನು ರಸ್ತೆಗಿಳಿಸಿದೆ. ಇದರ ದರ ಆಕರ್ಷಕವಾಗಿದ್ದು, ಸುಮಾರು 6.72 ಲಕ್ಷ ರುಪಾಯಿ ಆಸುಪಾಸಿನಲ್ಲಿದೆ. ಕಂಪನಿಯು ಈ ಕಾರನ್ನು ದೆಹಲಿ ವಾಹನ ಪ್ರದರ್ಶನದಲ್ಲಿ ಪ್ರದರ್ಶಿಸಿತ್ತು.

ಹೊಸ Tavera Neo 3 ಬೇಕೆಂದ್ರೆ ದೇಶದ ಯಾವುದೇ ಮೂಲೆಯಲ್ಲಿರುವ ಷೆವರ್ಲೆ ಶೋರೂಂನಲ್ಲಿ ಬುಕ್ಕಿಂಗ್ ಮಾಡಬಹುದು. ಹೊಸ ವಿನ್ಯಾಸದ ಹೆಡ್ ಲ್ಯಾಂಪ್, ಆಕರ್ಷಕ ಸೈಡ್ ಇಂಡಿಕೇಟರ್ ಮತ್ತು ಅತ್ಯಾಕರ್ಷಕ ಮುಂಭಾಗದ ಗ್ರಿಲ್ ವಿನ್ಯಾಸ, ಸುಂದರ ಕೆತ್ತನೆಯ ಷೆವರ್ಲೆ ಲೊಗೊ ನೂತನ ಕಾರಿನ ಪ್ರಮುಖ ಆಕರ್ಷಣೆಗಳಾಗಿವೆ, ಟೊಯೊಟಾ ಇನ್ನೋವಾಕ್ಕೆ ನೂತನ ತವೆರಾ ಸಮರ್ಥವಾಗಿ ಪೈಪೋಟಿ ನೀಡುವ ನಿರೀಕ್ಷೆಯಿದೆ.

ಹಳೆಯ ತವೆರಾ ಕಾರಿಗಿಂತ ಸಾಕಷ್ಟು ಮಾಡರ್ನ್ ಆಗಿ ನಿಯೊ 3 ಬಂದಿದೆ. ಇದು ಡೈರೆಕ್ಟ್ ಇಂಜೆಕ್ಷನ್ ತಂತ್ರಜ್ಞಾನದ ಜೊತೆಗೆ 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಈ ಮಾದರಿಯ ತವೆರಾ ಕಾರು 6,7,8,9 ಮತ್ತು ಹತ್ತು ಸೀಟಿನ ಆಯ್ಕೆಗಳಲ್ಲಿ ದೊರಕುತ್ತಿದೆ. ಮನೆಯಲ್ಲಿ ಎಷ್ಟು ಜನರಿದ್ದಿರೋ ಅಷ್ಟು ಸೀಟಿನ ಕಾರು ಖರೀದಿಸಬಹುದು!

ಇದರ ದರ ಹೆಚ್ಚು ಗಮನ ಸೆಳೆಯುತ್ತಿದೆ. ಷೆವರ್ಲೆ ತವೆರಾ ನಿಯೊ 3ಯ ಬೇಸ್ ಆವೃತ್ತಿ ಹತ್ತು ಸೀಟಿನ ಕಾರಿನ ದರ 6.72 ಲಕ್ಷ ರು. ಇದೆ. ಏಳು ಸೀಟಿನ ಹೈಎಂಡ್ ಆವೃತ್ತಿ ದರ 10.02 ಲಕ್ಷ ರುಪಾಯಿ ಇದೆ. ಇದೆಲ್ಲ ದೆಹಲಿ ಎಕ್ಸ್ ಶೋರೂಂ ದರ. ಇನ್ನಷ್ಟು ಇಂಟ್ರೆಸ್ಟಿಂಗ್ ವಿಷ್ಯ ಓದಲು ಇಲ್ಲಿಗೆ ಬನ್ನಿರಿ.

More from DriveSpark

Article Published On: Tuesday, February 7, 2012, 13:04 [IST]
English summary
Chevrolet has launched the refreshed Tavera Neo 3 with a starting price of Rs.6.72 lakhs. Available with a BS II compliant diesel engine, the Tavera gets a redesigned exterior as well as interior. It will be competing against the likes of the Innova and the Xylo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+