ಎಕೊಸ್ಪೋರ್ಟ್ ಎದುರಾಳಿ, ಷೆವರ್ಲೆ ಎಸ್‌ಯುವಿ

ಜನರಲ್ ಮೋಟರ್ಸ್ ಮತ್ತು ಫೋರ್ಡ್ ವಾಹನ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳು. ಭಾರತದಲ್ಲೂ ಈ ಎರಡು ಕಂಪನಿಗಳು ಜಿದ್ದಾಜಿದ್ದಿ ನಡೆಸಲು ಸಿದ್ಧವಾಗಿವೆ. ಫೋರ್ಡ್ ಕಂಪನಿಯು ಶೀಘ್ರದಲ್ಲಿ ಎಕೊಸ್ಪೋರ್ಟ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಪರಿಚಯಿಸಲಿದೆ. ಇದೀಗ ಇದಕ್ಕೆ ಪ್ರತಿಸ್ಪರ್ಧೆ ಎಂಬಂತೆ ಜನರಲ್ ಮೋಟರ್ಸ್ ಕೂಡ ಸಣ್ಣ ಸ್ಪೋರ್ಟ್ ಕಾರನ್ನು ಪರಿಚಯಿಸಲು ಯೋಜಿಸಿದೆ.

ಷೆವರ್ಲೆ ಕಂಪನಿಯು ತನ್ನದೇ ಆದ ಸಣ್ಣ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಗಳು ಹೇಳಿವೆ. ಈ ಕಾರು ನೋಡಲು ಕ್ಯಾಪ್ಟಿವಾದ ಸಣ್ಣ ಆವೃತ್ತಿಯಂತೆ ಕಾಣುತ್ತದೆ. ಕಾಂಪ್ಯಾಕ್ಟ್ ಎಸ್‌ಯುವಿ ಫೋರ್ ವೀಲ್ ಡ್ರೈವ್ ಹೊಂದಿದ್ದು, ಆನ್ ರೋಡ್ ಮತ್ತು ಆಫ್ ರೋಡಿಗೂ ಸೈ ಆಗಿರಲಿದೆಯಂತೆ.

ರೆನೊ ಡಸ್ಟರ್ ಕೂಡ ಶೀಘ್ರದಲ್ಲಿ ದೇಶದ ರಸ್ತೆಗಿಳಿಯಲಿದೆ. ಜನರಲ್ ಮೋಟರ್ಸ್ ಪರಿಚಯಿಸಲಿರುವ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ದರವು ಎಕೊಸ್ಪೋರ್ಟ್ ಮತ್ತು ಡಸ್ಟರಿಗಿಂತ ಅಗ್ಗವಾಗಿರುವ ನಿರೀಕ್ಷೆಯಿದೆ. ನೂತನ ಷೆವರ್ಲ್ ಕಾಂಪ್ಯಾಕ್ಟ್ ಎಸ್ ಯುವಿ ತವೆರಾ ಮತ್ತು ಕ್ಯಾಪ್ಟಿವಾಕ್ಕೆ ಪರ್ಯಾಯ ಆಯ್ಕೆಯಾಗಲಿದೆ.

ಫೋರ್ಡ್ ಎಕೊಸ್ಪೋರ್ಟ್ ಬಗ್ಗೆ: ಇದು 1.5 ಲೀಟರಿನ ಡೀಸೆಲ್ ಮತ್ತು 1.0 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ.ನೂತನ ಎಕೊಸ್ಪೋರ್ಟ್ ಬೇಸ್ ಆವೃತ್ತಿ ದರ ಸುಮಾರು 7 ಲಕ್ಷ ರು.ನಿಂದ ಆರಂಭವಾಗಲಿದೆ. ಟಾಪ್ ಎಂಡ್ ಆವೃತ್ತಿ ದರ ಸುಮಾರು 10 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Monday, April 2, 2012, 15:00 [IST]
English summary
Chevy To Build Compact SUV To Counter EcoSport. Reports are now coming in that Chevrolet is in the process of building its own compact SUV. The Chevy compact SUV currently under development looks like a smaller sibling of the Captiva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+