ನಿಮ್ಮೆಲ್ಲ ಕಾರುಗಳಿಗೆ ಗ್ಯಾಸ್ ಫಿಟ್ ಮಾಡಿ: ಕೋರ್ಟ್ ಆದೇಶ
ಗುಜರಾತಿನಲ್ಲಿ ನೋಂದಾಣಿಯಾದ ಎಲ್ಲಾ ವಾಹನಗಳನ್ನು ನೈಸರ್ಗಿಕ ಅನಿಲ ಚಾಲೀತ ವಾಹನವಾಗಿ ಪರಿವರ್ತಿಸುವಂತೆ ಹೈಕೋರ್ಟ್ ಆದೇಶಿಸಿದ್ದು, ಇದರ ಅನುಷ್ಠಾನಕ್ಕೆ ಒಂದು ವರ್ಷದ ಗಡುವು ನೀಡಿದೆ.
"ಇಂದಿನಿಂದ ಅನ್ವಯವಾಗುವಂತೆ ಒಂದು ವರ್ಷದೊಳಗಾಗಿ ರಾಜ್ಯದ ಎಲ್ಲಾ ವಾಹನಗಳು ನೈಸರ್ಗಿಕ ಅನಿಲವನ್ನು ಇಂಧನವಾಗಿ ಬಳಸಬೇಕು" ಎಂದು ಮುಖ್ಯನ್ಯಾಯಮೂರ್ತಿ ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.
"ಈ ಆದೇಶವನ್ನು ಜಾರಿಗೆ ತರಲು ಕೆಲವೊಂದು ಸಮಸ್ಯೆಗಳಿವೆ. ಪೆಟ್ರೋಲ್ ವಾಹನಗಳನ್ನು ಸಿಎನ್ ಜಿ ಯಾಗಿ ಪರಿವರ್ತಿಸಲು ಸಾಧ್ಯವಿದೆ. ಆದರೆ ಡೀಸೆಲ್ ವಾಹನಗಳನ್ನು ನೈಸರ್ಗಿಕ ಇಂಧನ ಚಾಲೀತ ವಾಹನವಾಗಿ ಪರಿವರ್ತಿಸುವುದು ಕಠಿಣವಾಗಿ ಪರಿಣಮಿಸಲಿದೆ" ಎಂದು ಗುಜರಾತ್ ಆಟೋರಿಕ್ಷಾ ಸಂಘ ಹೇಳಿದೆ.
"ಡೀಸೆಲ್ ವಾಹನಗಳನ್ನು ಮತ್ತು ದ್ವಿಚಕ್ರವಾಹನಗಳನ್ನು ನೈಸರ್ಗಿಕ ಅನಿಲ ಚಾಲೀತ(ಸಿಎನ್ ಜಿ) ವಾಹನವಾಗಿ ಪರಿವರ್ತಿಸುವುದು ಪ್ರಾಕ್ಟಿಕಲ್ ಅಲ್ಲ"ವೆಂದು ಸಿಎನ್ ಜಿ ಪೂರೈಕೆದಾರರೂ ಹೇಳುತ್ತಾರೆ.
ಹೈಕೋರ್ಟ್ ಆದೇಶ ಖಂಡಿತವಾಗಿಯೂ ಪರಿಸರ ಉಳಿಸಲು ಸಹಾಯಕವಾದೀತು. ಆದರೆ ಇದನ್ನು ಅನುಷ್ಠಾನಕ್ಕೆ ತರುವುದು ಅಂದುಕೊಂಡಷ್ಟು ಸುಲಭವಲ್ಲ ಎನ್ನುವುದು ಹೆಚ್ಚಿನ ವಿಶ್ಲೇಷಕರ ಅಭಿಮತ.


Click it and Unblock the Notifications









