ಕ್ರಿಕೆಟಿಗ ಯುವರಾಜ್ ಸಿಂಗ್ ಲಂಬೊರ್ಗಿನಿ ರೈಡ್

ದೇಶದ ಜನಪ್ರಿಯ ಕ್ರಿಕೆಟ್ ತಾರೆ ಯುವರಾಜ್ ಸಿಂಗ್ ಬರೀ ಬ್ಯಾಟಿಂಗಿನಲ್ಲಿ ಮಾತ್ರ ಮೋಡಿ ಮಾಡುತ್ತಿಲ್ಲ. ಗ್ರೇಟರ್ ನೋಯ್ಡಾದ ಬುದ್ಧ್ ಇಂಟರ್ ನ್ಯಾಷನಲ್ ಫಾರ್ಮುಲಾ ಒನ್ ಸರ್ಕ್ಯೂಟಿನಲ್ಲೂ ತಮ್ಮ ಚಾಲನಾ ಕೌಶಲ್ಯದ ಮೂಲಕ ಅಭಿಮಾನಿಗಳಿಗೆ ಮೋಡಿ ಮಾಡಿದ್ದಾರೆ.

ತನ್ನ ಸ್ನೇಹಿತ, ನಟ ರಾಣವಿಜಯ್ ಜೊತೆ ಯುವರಾಜ್ ಸಿಂಗ್ ಫಾರ್ಮುಲಾ ಒನ್ ಸರ್ಕ್ಯೂಟಿನಲ್ಲಿ ಲಂಬೊರ್ಗಿನಿ ಕಾರನ್ನು ರೈಡ್ ಮಾಡಿದ್ದಾರೆ. ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ಕ್ಯಾನ್ಸರ್ ಚಿಕಿತ್ಸೆ ಮುಗಿಸಿ ಅಮೆರಿಕದಿಂದ ದೇಶಕ್ಕೆ ಆಗಮಿಸಿದ್ದರು.

ದೇಶದಲ್ಲಿ ಈಗ ಐಷಾರಾಮಿ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಯುವರಾಜ್ ಪ್ರಯಾಣಿಸಿದ ಲಂಬೊರ್ಗಿನಿ ಮುರ್ಸಿಲಾಗೊ ದುಬಾರಿ ದರದ ಕಾರು. ಈ ಎರಡು ಡೋರಿನ ಎರಡು ಸೀಟಿನ ಸ್ಪೋರ್ಟ್ಸ್ ಕಾರಿನ ದರ ದೇಶದಲ್ಲಿ ಸುಮಾರು 2.60 ಕೋಟಿ ರುಪಾಯಿ.

ಈ ಕಾರನ್ನು ಇಟಲಿಯ ಕಾರು ಕಂಪನಿ ಲಂಬೊರ್ಗಿನಿ 2001ರಲ್ಲಿ ನಿರ್ಮಿಸಿತ್ತು. 2010ರಲ್ಲಿ ಪರಿಷ್ಖತ ಲಂಬೊರ್ಗಿನಿ ಮುರ್ಸಿಲಾಗೊ ಕಾರನ್ನು ಕಂಪನಿ ಪರಿಚಯಿಸಿತ್ತು.

ಬುದ್ಧ್ ಇಂಟರ್‌ನ್ಯಾಷನಲ್ ಸರ್ಕ್ಯೂಟಿನಲ್ಲಿ ಪ್ರಸಕ್ತ ವರ್ಷ ಹಲವು ಸೆಲೆಬ್ರೆಟಿಗಳು ತಮ್ಮ ದುಬಾರಿ ಕಾರುಗಳಲ್ಲಿ ಸವಾರಿ ಮಾಡಿದ್ದಾರೆ. ಬಾಲಿವುಡಿನ ಅಜಯ್ ದೇವಗನ್ ಮತ್ತು ಅನಿಲ್ ಕಪೂರ್ ಸೇರಿದಂತೆ ಪ್ರಮುಖ ಸೆಲೆಬ್ರೆಟಿಗಳು ಇಲ್ಲಿ ತಮ್ಮ ವೇಗದ ಹುಚ್ಚಿಗೆ ಕಿಚ್ಚು ಹೊತ್ತಿಸಿದ್ದಾರೆ. ಇವರಿಬ್ಬರು ಫೆರಾರಿ ಮತ್ತು ಮರ್ಸಿಡಿಸ್ ಬೆಂಝ್ ಕಾರುಗಳಲ್ಲಿ ಸವಾರಿ ಮಾಡಿದ್ದರು.

More from DriveSpark

Article Published On: Tuesday, May 8, 2012, 9:41 [IST]
English summary
Fans of Yuvraj Singh, the classy Indian batsman, has a good reason to cheer. Yuvi, who was off the field for a while, was seen back, ie, not on the cricket field, but at Greater Noida's Buddh International F1 Circuit.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+