ಹರಾಜಿಗಿದೆ ಯುವರಾಜ್ ಸಿಂಗ್ ಬೈಕ್

Written By:

ವರ್ಷಾರಂಭದಲ್ಲಿ ನಡೆದ 2015 ಇಂಡಿಯಾ ಬೈಕ್ ವೀಕ್ ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿದ್ದ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ಬೈಕ್ ಸದ್ಯದಲ್ಲೇ ಹರಾಜಿಡಲಾಗುವುದು. ಇದರಲ್ಲಿ ಸಂಗ್ರಹವಾದ ನಿಧಿಯನ್ನು ಯುವಿ ಅವರ ಯುವಿಕ್ಯಾನ್ (YouWeCan) ಕಾನ್ಸರ್ ಜಾಗೃತಿ ಶಿಬಿರಗಳಿಗೆ ಬಳಕೆ ಮಾಡಲಾಗುವುದು.

ವಿಶೇಷವೆಂದರೆ ಕೆಟಿಎಂ ತಳಹದಿಯಲ್ಲಿ ನಿರ್ಮಾಣವಾಗಿರುವ ಯುವರಾಜ್ ಸಿಂಗ್ ಅವರ ಬೈಕ್ ‌ಗೆ ಯುವಿಕ್ಯಾನ್ (YouWeCan X-12) ಎಂದು ಹೆಸರಿಸಲಾಗಿದೆ. ಇದನ್ನು ಪುಣೆ ತಳಹದಿಯ ಆಟೋಲೊಗ್ ಕಸ್ಟಮೈಸ್ಡ್ ಸಂಸ್ಥೆಯು ವಿನ್ಯಾಸಗೊಳಿಸಿದೆ.

To Follow DriveSpark On Facebook, Click The Like Button
ಯುವಿಕ್ಯಾನ್ ಎಕ್ಸ್-12

ಪುಣೆ ತಳಹದಿಯ ಈ ಸಂಸ್ಥೆಯು 49,390 ರುಪಾಯಿಗಳಿಗೆ ಯುವಿಕ್ಯಾನ್ ವಿಶೇಷ ಬೈಕ್ ಕಿಟ್ ಸಹ ಬಿಡುಗಡೆಗೊಳಿಸಿದೆ. ಅಷ್ಟೇ ಅಲ್ಲದೆ ಕೆಟಿಎಂ ಡ್ಯೂಕ್ ಎಕ್ಸ್-26 ಹಾಗೂ ಎಕ್ಸ್-12 ಕಸ್ಟಮ್ ಕಿಟ್ ಗಳನ್ನು ಘೋಷಿಸಿದ್ದು, ಕೆಟಿಎಂ200 ಹಾಗೂ 390 ಮಾದರಿಗಳಲ್ಲಿ ಇದನ್ನು ಜೋಡಣೆ ಮಾಡಬಹುದಾಗಿದೆ.

ಯುವಿಕ್ಯಾನ್ ಎಕ್ಸ್-12

ಯುವಿಕ್ಯಾನ್ ಎಕ್ಸ್12 ಕಿಟ್ ಬಗ್ಗೆ ಮಾತನಾಡುವುದಾದ್ದಲ್ಲಿ, ವಿಶೇಷ ಟ್ಯಾಂಕ್ ಕವರ್, ಹೆಡ್ ಲೈಟ್, ದೇಹ ಹೋದಿಕೆ, ರೇಡಿಯೇಟರ್ ಕವರ್, ಸೈಡ್ ಪ್ಯಾನೆಲ್, ಟೈರ್ ಹಗ್ಗರ್ ಇತ್ಯಾದಿ ವೈಶಿಷ್ಟ್ಯಗಳನ್ನು ರು.49,390ಕ್ಕೆ ಪಡೆಯಬಹುದಾಗಿದೆ.

ಯುವಿಕ್ಯಾನ್ ಎಕ್ಸ್-12

ಯುವಿಕ್ಯಾನ್ ಬೈಕ್ ಕಿಟ್ ಹೆಚ್ಚುವರಿ ಮಾರ್ಪಾಡುಗೊಳಿಸಬಹುದಾದ ಸೌಲಭ್ಯಗಳೊಂದಿಗೆ ಲಭ್ಯವಿದ್ದು, ಟು ಬ್ರದರ್ಸ್ ಸಂಪೂರ್ಣ ಎಕ್ಸಾಸ್ಟ್ ಸಿಸ್ಟಂ, ರೇಸ್ ಡೈನಾಮಿಕ್ಸ್ ಇಸಿಯು ಅಪ್ ಗ್ರೇಡ್, ಬಿಎಂಡಬ್ಲ್ಯು ಏರ್ ಫಿಲ್ಟರ್, ರಿಯರ್ ಸೆಟ್ ಫೂಟ್ ಪೆಗ್, ಸಿಎನ್‌ಸಿ ಮೆಷಿನ್ ಕಸ್ಟಮ್ ಒಯಿಲ್ ಕ್ಯಾಪ್ ಹಾಗೂ ವಿಶೇಷ ಬಣ್ಣಗಳು ಲಭ್ಯವಿರಲಿದೆ.

ಯುವಿಕ್ಯಾನ್ ಎಕ್ಸ್-12

ತನ್ನ ಚೊಚ್ಚಲ ಕಸ್ಟಮೈಸ್ಡ್ ಬೈಕ್ ಬಗ್ಗೆ ಅತೀವ ಸಂತೋಷ ವ್ಯಕ್ತಪಡಿಸಿರುವ ಯುವರಾಜ್, ಇದರ ಸಾಮರ್ಥ್ಯವು ಮೆಚ್ಚುಗೆಗೆ ಪಾತ್ರವಾಗಿದೆ ಎಂದಿದ್ದಾರೆ.

ಯುವಿಕ್ಯಾನ್ ಎಕ್ಸ್-12

ಒಟ್ಟಿನಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪದೇ ಪದೇ ವಿಫಲರಾಗುತ್ತಿರುವ ಭಾರತದ ಎರಡು ವಿಶ್ವಕಪ್ ವಿಜೇತ ತಂಡದ ಹೀರೊ ಆಗಿರುವ ಯುವಿ ಈಗ ಕ್ರಿಕೆಟೇತರ ಚಟುವಟಿಕೆಗಳಲ್ಲೂ ತಮ್ಮನ್ನು ತಾವೇ ತೊಡಗಿಸಿಕೊಂಡಿದೆ.

English summary
Yuvraj Singh's Customised bike YouWeCan X-12
Story first published: Monday, July 27, 2015, 12:54 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark