ಸ್ಟೈಲಿಷ್ ಕ್ರಿಕೆಟಿಗ ಯುವಿ ಕಾರು ಕಲೆಕ್ಷನ್
ಕ್ಯಾನ್ಸರ್ ಮಾರಕ ಪೀಡೆಯಿಂದ ಗೆದ್ದು ಬರುವ ಮೂಲಕ ಕ್ರಿಕೆಟ್ ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಯುವರಾಜ್ ಸಿಂಗ್ ಅಪ್ಪಟ ಕಾರು ಪ್ರೇಮಿ ಕೂಡಾ ಹೌದು. ದೇಶದ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ಪಟ್ಟಿಯಲ್ಲಿರುವ ಯುವಿ ಕ್ಯಾನ್ಸರ್‌ನಿಂದಾಗಿ ಕ್ರಿಕೆಟ್ ರಂಗದಿಂದ ದೂರವುಳಿದಿದ್ದರು. ಆದರೆ ಪ್ರಸ್ತುತ ಆಟದ ಮೈದಾನದಲ್ಲಿ ಸಕ್ರಿಯರಾಗಿದ್ದಾರೆ.
ಕ್ರಿಕೆಟ್ ಹೊರತಾಗಿ ಡ್ರೈವಿಂಗನ್ನು ಯುವಿ ಹೆಚ್ಚು ಇಷ್ಟಪಡುತ್ತಾರೆ. ಹೇಗೆ ಧೋನಿಗೆ ಬೈಕ್ ರೈಡಿಂಗ್ ಮೇಲೆ ಹೆಚ್ಚು ಪ್ರೀತಿಯಿದೆಯೇ ಹಾಗೆಯೇ ಯುವಿ ಕಾರಿನತ್ತ ಹೆಚ್ಚು ಒಲವು ತೋರುತ್ತಾರೆ. ಅಂದ ಹಾಗೆ ಈ ಸೆಲೆಬ್ರಿಟಿ ಕ್ರಿಕೆಟಿಗನ ಬಳಿ ಹಲವಾರು ಐಷಾರಾಮಿ ಕಾರುಗಳಿವೆ.
ಈ ಪೈಕಿ 2000ನೇ ಇಸವಿಯಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾಗ ತಂದೆ ಯೋಗರಾಜ್ ಸಿಂಗ್ ಚಿನ್ನದ ಬಣ್ಣದ ಹೊಂಡಾ ಸಿಟಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಇದುವೇ ಯುವಿ ಅವರ ಮೊದಲ ಕಾರಾಗಿದೆ. ಆ ಬಳಿಕ 2007ನೇ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಓವರ್‌ವೊಂದರ ಎಲ್ಲ ಆರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದ್ದ ಯುವಿ ಎಲ್ಲ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇದರಿಂದ ಪ್ರೇರಿತರಾಗಿದ್ದ ಬಿಸಿಸಿಐ ಉಪಾಧ್ಯಕ್ಷರು ಅದ್ದೂರಿ ಪೋರ್ಷೆ 911 ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಪೊರ್ಷೆ ಬಳಿಕ ಯುವಿ ಕಾರುಗಳ ಪಟ್ಟಿ ದೊಡ್ಡದಾಗಿ ಬೆಳೆಯ ತೊಡಗಿತು. ಆ ಬಳಿಕ ಮರ್ಸಿಡಿಸ್ ಬೆಂಝ್, ಬಿಎಂಡಬ್ಲ್ಯು ಎಂ5 ಹಾಗೂ ಎಂ3 ಕಾರುಗಳ ಹೆಮ್ಮೆಯ ಮಾಲಿಕರಾದರು. ಇದರಲ್ಲಿ ಎಂ5 ಕಾರಿನ ದರ ಸುಮಾರು ಒಂದು ಕೋಟಿ ರೂಪಾಯಿಗಳಗಾಗಿವೆ. ಹಾಗೆಯೇ ಎಂ3 ಕಾರಿನ ದರ 80 ಲಕ್ಷ ರುಪಾಯಿ.
ಯುವಿ ಲಗ್ಷುರಿ ಕಾರುಗಳ ಪಟ್ಟಿ ಇಲ್ಲಿಗೆ ಮುಗಿಯುದಿಲ್ಲ. 2011ರ ಏಕದಿನ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ 23 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಕಪ್ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವಿ ಅವರಿಗೆ ಜರ್ಮನಿಯಲ್ಲಿನ ಭಾರತ ನಿವಾಸಿಗಳ ಘಟಕ ಐಷಾರಾಮಿ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.
ಇದೀಗ ಇತಿಹಾಸ ಪುನರಾವರ್ತಿಸಿದೆ. 1985ರಲ್ಲಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿಗೆ ಆಡಿ 100 ಕಾರನ್ನು ನೀಡಿ ಆಡಿ ಇಂಡಿಯಾ ಸನ್ಮಾನಿಸಿತ್ತು. ಇದೀಗ ಅದೇ ಪ್ರತಿಷ್ಠಿತ ಕಂಪನಿಯಿಂದ ಆಡಿ ಕ್ಯೂ 5 ಕಾರು ಉಡುಗೊರೆಯಾಗಿ ಪಡೆಯಲು ಯುವಿ ಯಶಸ್ವಿಯಾಗಿದ್ದಾರೆ. ಸ್ವತ: ರವಿಶಾಸ್ತ್ರಿ ಅವರೇ ಯುವಿಗೆ ಕೀಲಿ ಹಸ್ತಾಂತರಿಸಿದ್ದರು.
ಈ ನಡುವೆ ಫಾರ್ಮುಲಾ ಒನ್ ರೇಸ್ ಟ್ರ್ಯಾಕ್‌ನಲ್ಲೂ ಕಾಣಿಸಿಕೊಂಡಿದ್ದ ಯುವಿ ಲಂಬೊರ್ಗಿನಿ ಕಾರಿನಲ್ಲಿ ಸವಾರಿ ಮಾಡುವ ಮೂಲಕ ಗಮನಸೆಳೆದಿದ್ದಾರೆ. ಒಟ್ಟಿನಲ್ಲಿ 12/12/2015ರಂದು 33ನೇ ಹುಟ್ಟುಹಬ್ಬ ಆಚರಿಸುತ್ತಿರುವ ಯುವರಾಜ್ ಕಾರು ಕಲೆಕ್ಷನ್ ಬಗ್ಗೆ ಡ್ರೈವ್ ಸ್ಪಾರ್ಕ್ ವಿಶೇಷ ಲೇಖನ ಸಿದ್ಧಪಡಿಸಿದ್ದು, ಯುವಿ ಕ್ರಿಕೆಟ್ ರಂಗದಲ್ಲಿ ಮತ್ತಷ್ಟು ಮಿಂಚುವಂತಾಗಲಿ ಎಂದು ಹಾರೈಸೋಣ. ಹ್ಯಾಪಿ ಬರ್ತ್ ಡೇ ಯುವಿ..!

ಭಾರತೀಯ ಕ್ರಿಕೆಟ್ ತಂಡಕ್ಕೆ ಮೊದಲ ಬಾರಿಗೆ ಆಯ್ಕೆಯಾಗಿದ್ದಾಗ ತಂದೆ ಯೋಗರಾಜ್ ಸಿಂಗ್ ಹೊಂಡಾ ಸಿಟಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಬಿಸಿಸಿಐ ಉಪಾಧ್ಯಕ್ಷರಿಂದ ಅದ್ದೂರಿ ಪೋರ್ಷೆ ಕಾರು ಉಡುಗೊರೆಯಾಗಿ ಪಡೆದ ಯುವರಾಜ್

ಯುವಿ ಕಾರು ಕಲೆಕ್ಷನ್ ಪಟ್ಟಿಯಲ್ಲಿ ಬಿಎಂಡಬ್ಲು ಕಾರು

ಯುವಿ ಕಾರು ಕಲೆಕ್ಷನ್ ಪಟ್ಟಿಯಲ್ಲಿ ಬಿಎಂಡಬ್ಲು ಕಾರು

ಲಂಬೊರ್ಗಿನಿ ಕಾರಲ್ಲಿ ಯುವಿ ರೈಡಿಂಗ್

ಲಂಬೊರ್ಗಿನಿ ಕಾರಲ್ಲಿ ಯುವಿ ರೈಡಿಂಗ್

ಲಂಬೊರ್ಗಿನಿ ಕಾರಲ್ಲಿ ಯುವಿ ರೈಡಿಂಗ್

ಲಂಬೊರ್ಗಿನಿ ಕಾರಲ್ಲಿ ಯುವಿ ರೈಡಿಂಗ್

ಯುವಿಗೆ ಆಡಿ ಕ್ಯೂ 5 ಕಾರಿನ ಕೀಲಿ ಹಸ್ತಾಂತರಿಸಿದ ರವಿಶಾಸ್ತ್ರಿ

ಆಡಿ ಕ್ಯೂ 5 ಕಾರಲ್ಲಿ ಯುವಿ ಸ್ಟೈಲಿಷ್ ಲುಕ್


Click it and Unblock the Notifications








