ಕ್ರಿಕೆಟ್‌‌ಗಿಂತ ಬೈಕ್ ಓಡಿಸುವುದೇ ಕಷ್ಟ: ಯುವರಾಜ್

Written By:

ಗೋವಾದಲ್ಲಿ ನಡೆದ ಮೂರನೇ ಆವೃತ್ತಿಯ ಇಂಡಿಯಾ ಬೈಕ್ ವೀಕ್ ಹಬ್ಬದಲ್ಲಿ ತಮ್ಮ ಕಸ್ಟಮೈಸ್ಡ್ ಬೈಕ್ ಪ್ರದರ್ಶನ ಮಾಡುತ್ತಾ ಮಾತನಾಡಿರುವ ಏಕದಿನ ವಿಶ್ವಕಪ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲವಾಗಿರುವ ಆಲ್‌ರೌಂಡರ್ ಕ್ರಿಕೆಟಿಗ ಯುವರಾಜ್ ಸಿಂಗ್, "ಕ್ರಿಕೆಟ್‌ಗಿಂತ ಬೈಕ್ ಓಡಿಸುವುದೇ ಕಷ್ಟಕರ" ಎಂದಿದ್ದಾರೆ.

ಆಟೋಲೊಗ್ ಡಿಸೈನ್‌ನಿಂದ ವಿಶೇಷವಾಗಿ ವಿನ್ಯಾಸಗೊಳಿಸಲ್ಪಟ್ಟ ಯುವಿಕ್ಯಾನ್ (YOUWECAN X12) ಅನ್ನು ಇಂಡಿಯಾ ಬೈಕ್ ವೀಕ್‌ನಲ್ಲಿ ಅನಾವರಣಗೊಳಿಸುತ್ತಾ 2011 ಏಕದಿನ ವಿಶ್ವಕಪ್ ಹೀರೊ ಯುವಿ, ವಾಹನ ಪ್ರೇಮಿಗಳ ಜೊತೆ ತಮ್ಮ ಮೊದಲ ಬೈಕ್ ಅನುಭವವನ್ನು ಹಂಚಿಕೊಂಡಿದ್ದಾರೆ.

To Follow DriveSpark On Facebook, Click The Like Button
ಕ್ರಿಕೆಟ್‌‌ಗಿಂತ ಬೈಕ್ ಓಡಿಸುವುದೇ ಕಷ್ಟ: ಯುವರಾಜ್

ಈ ಸಂದರ್ಭದಲ್ಲಿ ಮಾತನಾಡಿರುವ ಯುವರಾಜ್, "ನಾನು ಮೊದಲ ಬಾರಿಗೆ ಓಡಿಸಿರುವ ಬೈಕ್ ಯಮಹಾ ಆರ್‌ಎಕ್ಸ್100 ಆಗಿದೆ. ಇದನ್ನು ದೆಹಲಿಯಿಂದ ಚಂಡೀಗಡ ವರೆಗೆ ಓಡಿಸಿಕೊಂಡು ಬಂದಿದ್ದೆ. ಇದನ್ನರಿತ ಅಮ್ಮ ಒಂದು ವಾರದ ವರೆಗೂ ಅಸಮಾಧಾನಗೊಂಡಿದ್ದರು" ಎಂದು ವಿವರಿಸಿದ್ದಾರೆ.

ಕ್ರಿಕೆಟ್‌‌ಗಿಂತ ಬೈಕ್ ಓಡಿಸುವುದೇ ಕಷ್ಟ: ಯುವರಾಜ್

ಕ್ರಿಕೆಟ್ ಹಾಗೂ ಬೈಕ್‌ನಲ್ಲಿ ಯಾವುದು ಕಠಿಣ ಎಂಬುದಕ್ಕೆ ಉತ್ತರಿಸಿರುವ ಯುವಿ, 'ಚಿಕ್ಕವನಿಂದಲೇ ಕ್ರಿಕೆಟ್ ಆಡುತ್ತಲೇ ಬಂದಿದ್ದೇನೆ. ಆದರೆ ಬೈಕ್ ಓಡಿಸುವುದು ತುಂಬಾ ಕಷ್ಟ' ಎಂದಿದ್ದಾರೆ. ಮಾತು ಮುಂದುವರಿಸಿದ ಅವರು "ಬೈಕ್ ಚಾಲನೆ ಎಂಬುದು ಒಂಥರ ಸ್ವಾತಂತ್ರ್ಯವಾಗಿದ್ದು, ನೀವು ಪ್ರಕೃತಿಯ ಜೊತೆ ಬೆರೆತುಕೊಳ್ಳಬಹುದಾಗಿದೆ" ಎಂದು ಸೇರಿಸಿದ್ದಾರೆ.

ಕ್ರಿಕೆಟ್‌‌ಗಿಂತ ಬೈಕ್ ಓಡಿಸುವುದೇ ಕಷ್ಟ: ಯುವರಾಜ್

ಈಗ ಯುವಿ ಅವರ ಯುವಿಕ್ಯಾನ್ ಬೈಕ್ ಅನ್ನು ಹರಾಜಿಗಿಡಲಾಗಿದ್ದು, ಇದರಲ್ಲಿ ಸಂಗ್ರಹವಾದ ನಿಧಿಯನ್ನು ಸಹಾಯಾರ್ಥ ಸಂಸ್ಥೆಗೆ ನೀಡಲಾಗುವುದು.

ಕ್ರಿಕೆಟ್‌‌ಗಿಂತ ಬೈಕ್ ಓಡಿಸುವುದೇ ಕಷ್ಟ: ಯುವರಾಜ್

ಅಂದ ಹಾಗೆ ಗೋವಾದ ವ್ಯಾಗಟಾರ್‌ನಲ್ಲಿ ನಡೆದ ಇಂಡಿಯಾ ಬೈಕ್ ವೀಕ್‌ ಹಬ್ಬಕ್ಕೆ 12,000ಕ್ಕೂ ಹೆಚ್ಚು ಬೈಕ್ ಪ್ರೇಮಿಗಳು ಆಗಮಿಸಿದ್ದರು.

ಕ್ರಿಕೆಟ್‌‌ಗಿಂತ ಬೈಕ್ ಓಡಿಸುವುದೇ ಕಷ್ಟ: ಯುವರಾಜ್

ಗೋವಾ ಇಂಡಿಯಾ ಬೈಕ್‌ ವೀಕ್ ಹಬ್ಬದಲ್ಲಿ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳಾದ ಹಾರ್ಲೆ ಡೇವಿಡ್ಸನ್, ಟ್ರಯಂಪ್, ಬೆನೆಲ್ಲಿ, ಇಂಡಿಯನ್ ಮೋಟಾರ್‌ಸೈಕಲ್ಸ್ ಹಾಗೂ ವೆಸ್ಪಾದಿಂದ ಐಕಾನಿಕ್ ಮಾದರಿಗಳು ಪ್ರದರ್ಶನಗೊಂಡಿದ್ದವು.

ಕ್ರಿಕೆಟ್‌‌ಗಿಂತ ಬೈಕ್ ಓಡಿಸುವುದೇ ಕಷ್ಟ: ಯುವರಾಜ್

ಇಲ್ಲಿ ಬೈಕ್ ಪ್ರದರ್ಶನ ಮಾತ್ರವಲ್ಲದೆ ಸ್ಟಂಟ್ ಶೋ, ಪರೇಡ್, ಡ್ರಾಗ್ ರಾಲಿ ಹಾಗೂ ಇನ್ನಿತರ ಮನರಂಜನಾ ಕಾರ್ಯಕ್ರಮಗಳು ನೆರವೇರಿದ್ದವು.

English summary
Biker Mania Engulfs Goa with Yuvraj launching new custom bike design, 2500 HOG riders & charity ride at India Bike Week 2015.
Story first published: Monday, February 23, 2015, 12:20 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark