ನಟ ದರ್ಶನ್ ಮೋಟರ್ ಕಾಯಿದೆ ಉಲ್ಲಂಘಿಸಿದ್ದಾರೆಯೇ?

ಕನ್ನಡ ಚಿತ್ರನಟ ದರ್ಶನ್ ತೂಗುದೀಪ ಜಯನಗರ ಮೂರನೇ ಬ್ಲಾಕಿನಲ್ಲಿ ನೂತನವಾಗಿ ಉದ್ಘಾಟನೆಗೊಂಡ ಆರ್ ಆರ್ ಗೋಲ್ಡ್ ಪ್ಯಾಲೇಸ್‌ಗೆ ಇಂದು ಆಗಮಿಸಿದ್ದರು. ಅವರು ಬಂದಿಳಿದ ಟೊಯೊಟಾ ಫಾರ್ಚ್ಯುನರ್ ಕಾರಿನ ನಂಬರ್ ಪ್ಲೇಟ್‌ನಲ್ಲಿ ಅಂಕಿ ಮತ್ತು ಅಕ್ಷರಗಳನ್ನು ಪುಟ್ಟದಾಗಿ ಬರೆಯಲಾಗಿತ್ತು.

ಈ ಟೊಯೊಟಾ ಫಾರ್ಚ್ಯುನರ್ ಕಾರಿನ ನಂಬರ್ ಕೆಎ 02 ಎಂಟಿ 7339. ಇದರಲ್ಲಿ ಎಂ ಅಕ್ಷರ ಕಾಣಲು ಭೂತಕನ್ನಡಿ ಬೇಕೆನಿಸುತ್ತದೆ. ದರ್ಶನ್ ಮಾತ್ರವಲ್ಲದೇ ಹೆಚ್ಚಿನ ಸೆಲೆಬ್ರೆಟಿಗಳು ನಂಬರ್ ಪ್ಲೇಟಿನಲ್ಲಿ ಈ ರೀತಿ ಮಾಡುತ್ತಾರೆ. ನಂಬರ್ ಪ್ಲೇಟ್ ಮಾಹಿತಿ ಸಾರ್ವಜನಿಕರಿಗೆ ತಿಳಿಯದಂತೆ ಮಾಡಲು ಸೆಲೆಬ್ರಿಟಿಗಳು ಈ ವಿಧಾನ ಅನುಸರಿಸುತ್ತಾರೆ. ಮೋಟರ್ ವೆಹಿಕಲ್ ಕಾಯಿದೆಯ ಪ್ರಕಾರ ಇದು ತಪ್ಪು.

1989ರ ಮೋಟರ್‌ವೆಹಿಕಲ್ ಕಾಯಿದೆಯಲ್ಲಿ ವಾಹನ ನಂಬರ್ ಪ್ಲೇಟ್ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದೆ. ಮೋಟರ್ ಕಾಯಿದೆಗೆ ವಿರುದ್ಧವಾಗಿ ನಂಬರ್ ಪ್ಲೇಟ್ ತಪ್ಪುಗಳನ್ನು ಮಾಡಿದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಲು ಅವಕಾಶವಿದೆ.

ಯಾವುದು ತಪ್ಪು?
* ವಾಹನ ರಿಜಿಸ್ಟ್ರೇಷನ್ ಅಂಕೆ ಮತ್ತು ಅಕ್ಷರಗಳನ್ನು ಹೊರತುಪಡಿಸಿ ಇತರ ಮಾಹಿತಿ, ಚಿತ್ರಗಳು, ಹೆಸರುಗಳು ನಂಬರ್ ಪ್ಲೇಟಿನಲ್ಲಿ ಇರಬಾರದು.

* ಫ್ಯಾನ್ಸಿ ಅಕ್ಷರ ಮತ್ತು ಅಂಕೆಗಳನ್ನು ನಂಬರ್ ಪ್ಲೇಟಿನಲ್ಲಿ ಬಳಸಬಾರದು.

* ಎಲ್ಲಾ ಅಕ್ಷರಗಳು ಇಂಗ್ಲಿಷಿನಲ್ಲಿ ಮತ್ತು ನಂಬರುಗಳು ಅರಾಬಿಕ್ ಫಾಂಟ್ ನಲ್ಲಿರಬೇಕು.

ಖಾಸಗಿ ವಾಹನಗಳ ನಂಬರ್ ಪ್ಲೇಟ್ ಬ್ಯಾಕ್ ಗ್ರೌಂಡ್ ಕಲರ್ ಬಿಳಿ ಇರಬೇಕು. ಫಾಂಟ್ ಕಪ್ಪು ಬಣ್ಣಹೊಂದಿರಬೇಕು. ವಾಣಿಜ್ಯ ವಾಹನ(ಕ್ಯಾಬ್ ಹೊರತುಪಡಿಸಿ)ಗಳ ನಂಬರ್ ಪ್ಲೇಟ್ ಬ್ಯಾಕ್ ಗ್ರೌಂಡ್ ಬಣ್ಣ ಹಳದಿ ಮತ್ತು ಫಾಂಟ್ ಕಪ್ಪು ಬಣ್ಣದಾಗಿರಬೇಕು.

ಖಾಸಾಗಿ ವಾಹನಗಳ ಮುಂಭಾಗ ಮತ್ತು ಹಿಂಭಾಗದ ನಂಬರ್ ಪ್ಲೇಟ್ ನಲ್ಲಿ ಒಂದು ಅಥವಾ ಎರಡು ಲೈನಿನಲ್ಲಿ ಅಂಕೆ, ಅಕ್ಷರಗಳನ್ನು ಬರೆಯಲು ಅವಕಾಶವಿದೆ. ಆದರೆ ವಾಣಿಜ್ಯ ವಾಹನಗಳ ನಂಬರ್ ಪ್ಲೇಟ್ ಕಡ್ಡಾಯವಾಗಿ ಎರಡು ಲೈನ್‌ನಲ್ಲಿ ಬರೆಯಬೇಕು.

More from DriveSpark

Article Published On: Wednesday, April 18, 2012, 13:40 [IST]
English summary
It seems that cops are turning a blind eye on violation of number plate norms. Recently, Kannada challenging star darshan was spotted at Jayanagar, Bangalore in a Toyota Fortuner that had a registration plate which was smaller than the accepted size.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+