ಆಭರಣ ಅಂಗಡಿಗೆ ಫಾರ್ಚ್ಯುನರ್‌ನಲ್ಲಿ ಬಂದ ದರ್ಶನ್
ಜಯನಗರ ಮೂರನೇ ಬ್ಲಾಕಿನಲ್ಲಿ ನೂತನವಾಗಿ ಉದ್ಘಾಟನೆಗೊಂಡ ಆರ್ ಆರ್ ಗೋಲ್ಡ್ ಪ್ಯಾಲೇಸ್‌ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕನ್ನಡ ನಟ ದರ್ಶನ್ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದಾರೆ. ಅಂದಹಾಗೆ ಜನಪ್ರಿಯ ಕನ್ನಡ ನಟ ದರ್ಶನ್ ಟೊಯೊಟಾ ಫಾರ್ಚ್ಯುನರ್ ಕಾರಿನಲ್ಲಿ ಆಗಮಿಸಿದ್ದಾರೆ.
ದರ್ಶನ್ ಬಳಿ ಫಾರ್ಚ್ಯುನರ್ ಮಾತ್ರವಲ್ಲದೇ ಹಲವು ಐಷಾರಾಮಿ ಕಾರುಗಳಿವೆ. ಇತ್ತೀಚೆಗೆ ಹುಟ್ಟುಹಬ್ಬದಂದು ಪತ್ನಿಯಿಂದ ಕೋಟಿ ರು.ಗಿಂತ ದುಬಾರಿಯಾದ ಜಾಗ್ವಾರ್ ಎಕ್ಸ್‌ಜೆ ಕಾರನ್ನು ಉಡುಗೊರೆಯಾಗಿ ಪಡೆದಿದ್ದರು. ಈ ಕಾರಿನ ದರ ಸುಮಾರು 1.38 ಕೋಟಿ ರುಪಾಯಿ.

ಲಕ್ಷುರಿ ಕಾರು ಜಾಗ್ವಾರ್ ಎಕ್ಸ್‌ಜೆ ಮಾತ್ರವಲ್ಲದೇ ಹಮ್ಮರ್ ಕೂಡ ದರ್ಶನ್ ಬಳಿಯಿದೆ. ಉಳಿದಂತೆ ಆಡಿ ಎ6 ಕಾರೊಂದು ಅವರ ಗ್ಯಾರೇಜಿನಲ್ಲಿದೆ. ಬೆಂಗಳೂರಿನ ಆಭರಣ ಅಂಗಡಿ ಉದ್ಘಾಟನೆಗೆ ಅವರು ಬಂದಿರೋದು ಟೊಯೊಟಾ ಫಾರ್ಚ್ಯುನರ್ ಕಾರಿನಲ್ಲಿ. ಈ ಕಾರಿನ ಪುಟ್ಟಮಾಹಿತಿ ಇಲ್ಲಿದೆ.
ಟೊಯೊಟಾ ಫಾರ್ಚ್ಯುನರ್ ಬಗ್ಗೆ: ಟೊಯೊಟಾ ಫಾರ್ಚ್ಯುನರ್ ಅಂದರೆ ಆರ್ಟ್ ಆಫ್ ಪವರ್ಯ ಕಟ್ಟಿಂಗ್ ಎಡ್ಜ್ ಮತ್ತು ಐಷಾರಾಮಿ ಫೀಚರುಗಳ ಯುಗಳಗೀತೆ. ಇದರ ಬೆಂಗಳೂರು ಎಕ್ಸ್‌ಶೋರೂಂ ದರ ಸುಮಾರು 20,97,386 ರು.ನಿಂದ 22,11,886 ರು.ವರೆಗಿದೆ.
ಟೊಯೊಟಾ ಫಾರ್ಚ್ಯುನರ್ 4x2 ಡೀಸೆಲ್ ಕಾರು ಮ್ಯಾನುಯಲ್ ಆಯ್ಕೆಯಲ್ಲಿ ದೊರಕುತ್ತದೆ. ಇದು ಸುಮಾರು 7.8 - 11.5 ಕಿ.ಮೀ. ಮೈಲೇಜ್ ನೀಡುತ್ತದೆ. ಇದೇ ಎಂಜಿನಿನ ಆಟೋಮ್ಯಾಟಿಕ್ ಆವೃತ್ತಿಯಲ್ಲೂ ದೊರಕುತ್ತದೆ. 4x4 ಮ್ಯಾನುಯಲ್ ಗೇರ್ ಆಯ್ಕೆಯಲ್ಲೂ ಫಾರ್ಚ್ಯನರ್ ದೊರಕುತ್ತದೆ.


Click it and Unblock the Notifications








