ರತಿಕ್ರೀಡೆಗಿಂತಲೂ ಪರಮಸುಖ ಈ ಕ್ರೀಡೆ

"ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲದ ಆ ಮಧುರ "ರತಿಕ್ರೀಡೆ"ಗಿಂತಲೂ ಮಿಗಿಲಾದ ಪರಮಸುಖವಿದು" ಎಂದು ಡೇವಿಡ್ ಕ್ಲೊಥರ್ಡ್ ಹೇಳಿದಾಗ ಜಗತ್ತಿನ ಬ್ಯಾಚುಲರುಗಳು, ಮದುವೆಯಾದವರು, ಮುದುಕರು ಅಚ್ಚರಿಯಿಂದ ನೋಡುತ್ತಿದ್ದರು.

"ರತಿಕ್ರೀಡೆಗಿಂತಲೂ ನೂರುಪಟ್ಟು ಮಿಗಿಲಾದ ಸುಖವೊಂದಿದೆ" ಎಂದು ಆತ ಹೇಳಿದ್ದು ಫಾರ್ಮುಲಾ ಒನ್ ಚಾಲನೆ ಅನುಭವದ ಬಗ್ಗೆ.

ಇವರು ಮಾಜಿ ಮೆಕ್ ಲಾರೆನ್ ಮತ್ತು ರೆಡ್ ಬುಲ್ ಚಾಲಕರಾಗಿ ಜಗತ್ತಿನಲ್ಲಿಯೇ ಜನಪ್ರಿಯರಾಗಿದ್ದಾರೆ. ಬ್ರಿಟನಿನ ಎಫ್1 ಡ್ರೈವರುಗಳ ಇತಿಹಾಸದಲ್ಲಿಯೇ ಅತ್ಯಧಿಕ ಅಂಕ ಗಳಿಸಿದ ಕೀರ್ತಿಯೂ ಇವರಿಗಿದೆ.

"ಫಾರ್ಮುಲಾ ಒನ್ ಎನ್ನುವುದು ಕ್ರೀಡಾ ಜಗತ್ತಿನಲ್ಲಿಯೇ ಅತ್ಯಂತ ರೋಮಾಂಚನಕಾರಿ ಕ್ರೀಡೆ. ಎಫ್1 ಚಾಲಕರನ್ನು ಆಧುನಿಕ ಗ್ಲಾಡಿಯೇಟರುಗಳು ಅಥವಾ ಮಲ್ಲರೆಂದು ವ್ಯಾಖ್ಯಾನಿಸಬಹುದು" ಎಂದು ದಿ ಸನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಡೇವಿಡ್ ಎಫ್1 ಚಾಲನೆ ಅನುಭವವನ್ನು ವ್ಯಾಖನಿಸುತ್ತಾರೆ.

"ಒಮ್ಮೆ ನೆನಪಿಸಿಕೊಳ್ಳಿ, ನಿಮ್ಮ ಮರೆಯಲಾಗದ ಪಾರ್ಟಿ, ಮರೆಯಲಾಗದ ದಿನ, ಮರೆಯಲಾಗದ ಡ್ಯಾನ್ಸ್, ಅಷ್ಟೇಕೆ, ನೀವು ಜೀವನದಲ್ಲಿ ಎಂದೂ ಮರೆಯಲು ಸಾಧ್ಯವಿಲ್ಲದ ಅತ್ಯುತ್ತಮವಾದ ರತಿಕ್ರೀಡೆ. ಇವೆಲ್ಲಕ್ಕಿಂತ ಫಾರ್ಮುಲಾ ಒನ್ ಚಾಲನೆ ಪರಮಸುಖ" ಎನ್ನುತ್ತಾರೆ.

"ಎಫ್1 ಕಾರು ಚಾಲನೆ ಅನುಭವಕ್ಕೆ ಯಾವುದನ್ನೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇದು ನಿಮ್ಮ ದೈಹಿಕ ಮತ್ತು ಮಾನಸಿಕ ಹತೋಟಿಯನ್ನು ಬೇಡುತ್ತದೆ. ಅದು ನಿಮ್ಮನ್ನು ಹತೋಟಿಯಲ್ಲಿಡುತ್ತದೆ" ಎಂದಿದ್ದಾರೆ.

"ವಿಶೇಷವೆಂದರೆ ಫಾರ್ಮುಲಾ ಒನ್ ಚಾಲಕನೊಬ್ಬ ಜಗತ್ತು ಸುತ್ತಿದರೆ ಆತನ ಸುತ್ತ ರಾಜಕಾರಣಿಗಳು ಇರುವುದಿಲ್ಲ. ಜಗತ್ತಿನ ಸುರಸುಂದರಿಯರೆಲ್ಲ ಆತನ ಬೆನ್ನು ಬೀಳುತ್ತಾರೆ. ಅಂದಚಂದದ ಬೆಡಗಿಯರನ್ನು ನೀವು ಭೇಟಿಯಾಗುವ ಅವಕಾಶ ದೊರಕುತ್ತದೆ. ನಾನು ನನ್ನ ವಧುವನ್ನು ಪಡೆದದ್ದು ಕೂಡ ಹಾಗೆಯೇ" ಎನ್ನುತ ಡೇವಿಡ್ ತುಂಟ ನಗೆ ನಕ್ಕರು.

More from DriveSpark

Article Published On: Monday, March 19, 2012, 11:31 [IST]
English summary
According to former McLaren and Red Bull driver David Coulthard F1 car driving is better than having best sex. It takes you to the physical and mental limit. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+