ಡೀಸೆಲಿಗೆ 60 ಪೈಸೆ ನೀಡಿದ ಸಿಎಂ ಸದಾನಂದ ಗೌಡ

ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಚೊಚ್ಚಲ ಬಜೆಟಿನಲ್ಲಿ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡ 1.25ರಷ್ಟು ಕಡಿಮೆ ಮಾಡಿದ್ದಾರೆ. ಇದರಿಂದ ಡೀಸೆಲ್ ವಾಹನಗಳಿಗೆ ಅತ್ಯಧಿಕ ಬೇಡಿಕೆಯಿರುವ ಸದ್ಯದ ಟ್ರೆಂಡಿನಲ್ಲಿ ಗ್ರಾಹಕರಿಗೆ ಲೀಟರ್ ಡೀಸೆಲಿಗೆ ಸುಮಾರು 60 ಪೈಸೆ ಲಾಭವಾಗಿದೆ.

ಇಲ್ಲಿವರೆಗೆ ಡೀಸೆಲ್ ಮಾರಾಟದ ಮೇಲಿನ ರಾಜ್ಯ ತೆರಿಗೆ ಶೇಕಡ 18ರಷ್ಟಿತ್ತು. ಇದನ್ನು ಶೇಕಡ 1.25ರಷ್ಟು ಇಳಿಕೆ ಮಾಡುವ ಪ್ರಸ್ತಾಪವನ್ನು ಬಜೆಟಿನಲ್ಲಿ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಶೇಕಡ 16.75ರಷ್ಟು ಡೀಸೆಲ್ ಮಾರಾಟ ತೆರಿಗೆ ಪಾವತಿಸಿದರೆ ಸಾಕು.

ಶೇಕಡ 1.25ರಷ್ಟು ತೆರಿಗೆ ಇಳಿಕೆ ಕಂಡರೆ ಡೀಸೆಲ್ ಗ್ರಾಹಕರಿಗೆ ಮತ್ತು ಸರಕಾರಕ್ಕೆ ಗಮನಾರ್ಹ ಲಾಭವೇನೂ ಆಗದು. ಇದರಿಂದ ಪ್ರತಿಲೀಟರ್ ಡೀಸೆಲ್ ದರ ರಾಜ್ಯದಲ್ಲಿ ಸುಮಾರು 60 ಪೈಸೆ ಕಡಿಮೆಯಾದೀತು ಅಷ್ಟೇ!.

ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಡೀಸೆಲ್ ಮೂಲ ದರ ಹೆಚ್ಚು. ಇಲ್ಲಿ ಮಾರಾಟದ ಮೇಲಿನ ತೆರಿಗೆ ಹೆಚ್ಚಿರುವ ಹಿನ್ನಲೆಯಲ್ಲಿ ಅಂತರ್ ರಾಜ್ಯ ರಸ್ತೆಯಲ್ಲಿ ಪ್ರಯಾಣಿಸುವ ಬುದ್ದಿವಂತ ಚಾಲಕರು ಹೊರರಾಜ್ಯಗಳಲ್ಲೇ ಡೀಸೆಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಡೀಸೆಲ್ ಮೇಲಿನ ಮಾರಾಟ ತೆರಿಗೆ ಇಳಿಕೆ ಮಾಡುವ ಒತ್ತಡಕ್ಕೆ ಸರಕಾರ ಸಿಲುಕಿತ್ತು. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Thursday, March 22, 2012, 11:22 [IST]
English summary
Diesel prices in Karnataka will decrease by Rs.0.60 after chief minister Sadananda Gowda decreased sales tax on the fuel by 1.25 per cent to 16.75 per cent. The sales tax cut will help the government increase diesel sales as many people in border areas used to fill their tanks from other states.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+